ಡೆಂಘೀ: ಜಿಲ್ಲೆಯಲ್ಲಿ 521 ಪಾಸಿಟಿವ್‌ ಪ್ರಕರಣ ದಾಖಲು

| Published : Jul 05 2024, 12:49 AM IST

ಡೆಂಘೀ: ಜಿಲ್ಲೆಯಲ್ಲಿ 521 ಪಾಸಿಟಿವ್‌ ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಈ ವರ್ಷದಲ್ಲಿ 521 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 482 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ 38 ಪಾಸಿಟಿವ್‌ ಪ್ರಕರಣಗಳು ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್‌ ಬಾಬು ಮಾಹಿತಿ ನೀಡಿದರು.

482 ಮಂದಿ ಗುಣಮುಖ । 38 ಆಕ್ಟಿವ್‌ ಕೇಸ್‌ । ಮುಂಜಾಗ್ರತೆ ವಹಿಸಲು ಡಿಎಚ್‌ಓ ಡಾ. ಅಶ್ವತ್‌ ಬಾಬು ಸಲಹೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಈ ವರ್ಷದಲ್ಲಿ 521 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 482 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ 38 ಪಾಸಿಟಿವ್‌ ಪ್ರಕರಣಗಳು ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್‌ ಬಾಬು ಮಾಹಿತಿ ನೀಡಿದರು.

ಈಡೀಸ್‌ ಇಜಿಪ್ಟ್‌ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಡೆಂಘೀ ಜ್ವರ ಬರಲಿದೆ. ಇದರಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಹಲವು ಮುನ್ನೆಚ್ಚರಿಕೆ ವಹಿಸಬೇಕು, ಸೊಳ್ಳೆ ನಿರೋಧಕ ವಸ್ತುಗಳನ್ನು ಬಳಸಬೇಕು. ಜ್ವರ ಕಂಡು ಬಂದ ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಡೆಂಘೀ ಜ್ವರದ ಬಗ್ಗೆ ಭಯ ಬೇಡ ಎಚ್ಚರಿಕೆ ಇರಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಜೂನ್‌ ತಿಂಗಳಲ್ಲಿ 14,71,807 ತಾಣಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗಿದ್ದು, 5400 ಮನೆಗಳ 6373 ತಾಣಗಳಲ್ಲಿ ಲಾರ್ವಾ ಕಂಡು ಬಂದಿದ್ದು ನಿರ್ಮೂಲನೆ ಮಾಡಲಾಗಿದೆ. ಈ ಸರ್ವೆ ಕಾರ್ಯ ಮುಂದುವರಿಸಲಾಗಿದೆ. ಇದಕ್ಕೆ ನರ್ಸೀಂಗ್ ಕಾಲೇಜುಗಳ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಂತರ್‌ ಇಲಾಖಾ ಸಮನ್ವಯ ಸಮಿತಿ ಸಭೆ ನಡೆಸಿ ಸಹಕಾರ ಕೋರಲಾಗಿದೆ. ಚಿಕ್ಕಮಗಳೂರು ನಗರಸಭೆ ಮತ್ತು ಗ್ರಾಮ ಪಂಚಾಯ್ತಿ ಸಹಕಾರದೊಂದಿಗೆ ಕಸದ ಗಾಡಿಗಳು ಮತ್ತು ಜೀಪ್‌ಗಳ ಮೂಲಕ ಮೈಕ್‌ನಲ್ಲಿ ಪ್ರಚಾರ ಮಾಡಿಸಲಾಗುತ್ತಿದೆ ಎಂದ ಅವರು, ಜ್ವರ ಕಂಡು ಬಂದ ಗ್ರಾಮ ಅಥವಾ ಪ್ರದೇಶಗಳಲ್ಲಿ ಜ್ವರ ಚಿಕಿತ್ಸಾ ಕೇಂದ್ರವನ್ನು ಅಗತ್ಯ ಔಷಧಿಗಳೊಂದಿಗೆ ಪ್ರಾರಂಭಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಸ್ಪತ್ರೆ ಸರ್ಜನ್‌ ಡಾ. ಮೋಹನ್‌ಕುಮಾರ್‌, ಡಾ. ಚಂದ್ರಶೇಖರ್‌, ಡಾ. ಬಾಲಕೃಷ್ಣ, ಡಾ. ಶಶಿಕಲಾ, ಡಾ. ಗೀತಾ ಇದ್ದರು.

--- ಬಾಕ್ಸ್‌---

-----ತಾಲೂಕು-ಡೆಂಗ್ಯು ಪಾಜಿಟಿವ್‌ - ಗುಣಮುಖ-ಚಾಲ್ತಿಯಲ್ಲಿರುವ ಪ್ರಕರಣ

- - - - - - - - - -

ಚಿಕ್ಕಮಗಳೂರು-353-327- 26

- - - - - - - - - -

ಕಡೂರು-35 35 00

- - - - - - - - - -

ತರೀಕೆರೆ383404

- - - - - - - - - -

ಎನ್‌.ಆರ್‌.ಪುರ 201901

- - - - - - - - - -

ಕೊಪ್ಪ27 2403

- - - - - - - - - -

ಶೃಂಗೇರಿ252203

- - - - - - - - - -

ಮೂಡಿಗೆರೆ232201

- - - - - - - - - -

ಒಟ್ಟು 52148338

- - - - - - - - - -

4 ಕೆಸಿಕೆಎಂ 1ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಡಿಎಚ್‌ಓ ಡಾ. ಅಶ್ವತ್‌ ಬಾಬು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ. ಮೋಹನ್‌ಕುಮಾರ್, ಡಾ. ಚಂದ್ರಶೇಖರ್‌, ಡಾ. ಶಶಿಕಲಾ, ಡಾ. ಗೀತಾ ಇದ್ದರು.