ಸಾರಾಂಶ
- ಎರಡೇ ತಿಂಗಳಲ್ಲಿ 298ರ ಗಡಿ ಮುಟ್ಟಿದ ಪ್ರಕರಣ । ಗ್ರಾಮೀಣಗಿಂತ ನಗರ ಪ್ರದೇಶದಲ್ಲೇ ಹೆಚ್ಚು,
ಆರ್.ತಾರಾನಾಥ್‌ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಡೆಂಘೀ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ ಟಾಪ್ 6 ರಲ್ಲಿದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಇದೇ ಮೊದಲ ಬಾರಿಗೆ ಬ್ರೇಕ್ ಮಾಡಿದೆ.
ನಿಖರವಾಗಿ ಹೇಳುವುದಾದರೆ ಈ ವರ್ಷದಲ್ಲಿ ಜೂನ್ 6ರವರೆಗೆ ಡೆಂಘೀ ಪ್ರಕರಣ ಪಾಜಿಟಿವ್ ಸಂಖ್ಯೆ 298ಕ್ಕೆ ಏರಿದೆ. ಏಪ್ರಿಲ್‌ನಲ್ಲಿ ನಿಧಾನಗತಿಯಲ್ಲಿದ್ದ ಈ ಸಂಖ್ಯೆ ಮೇ ತಿಂಗಳಲ್ಲಿ ವೇಗ ಪಡೆದುಕೊಂಡಿತು. ಹಿಂದೆ ಯಾವ ವರ್ಷದಲ್ಲೂ ಕೂಡ ಈ ಸಂಖ್ಯೆಗೆ ಡೆಂಘೀ ಪ್ರಕರಣಗಳು ತಲುಪಿರಲಿಲ್ಲ.ಇನ್ನೊಂದು ಅಘಾತಕಾರಿ ವಿಷಯ, ಜಿಲ್ಲೆಯ 7 ತಾಲೂಕುಗಳಲ್ಲಿ ಪೈಕಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು ಚಿಕ್ಕಮಗಳೂರು ತಾಲೂಕಿನಲ್ಲಿ, ಇಲ್ಲಿ 206 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇನ್ನುಳಿದ 6 ತಾಲೂಕುಗಳಲ್ಲಿ 20ರ ಸಂಖ್ಯೆಯನ್ನು ದಾಟಿಲ್ಲ. ಚಿಕ್ಕಮಗಳೂರು ನಗರದ ಕಲ್ಯಾಣ ನಗರ, ರಾಮನ ಹಳ್ಳಿ, ಕೋಟೆ ಬಡಾವಣೆಗಳಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ತಾಲೂಕಿನ ಕೆ.ಆರ್.ಪೇಟೆ, ಮಲ್ಲಂದೂರು ಸುತ್ತಮುತ್ತಲೂ ಜ್ವರ ಕಂಡು ಬಂದಿದೆ.
ಚಿಕ್ಕಮಗಳೂರು ತಾಲೂಕಿನ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 18 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 33 ಉಪ ಕೇಂದ್ರಗಳ 85 ಹಳ್ಳಿಗಳಲ್ಲಿ ಡೆಂಘೀ ಜ್ವರ ಪತ್ತೆಯಾಗಿದೆ. ಜ್ವರ ಇರುವ ಸಂಶಯದ ಮೇಲೆ 1290 ಜನರ ಪೈಕಿ 949 ಜನರ ರಕ್ತದ ಮಾದರಿ ಪರೀಕ್ಷಿಸಲಾಗಿದ್ದು, ಈ ಪೈಕಿ 206 ಜನರಲ್ಲಿ ಡೆಂಘೀ ಪತ್ತೆಯಾಗಿದೆ.ರಸ್ತೆಗಳಲ್ಲೇ ಓಪನ್ ಬಾರ್:
ಆರೋಗ್ಯ ಇಲಾಖೆ ಪ್ರತಿ ದಿನ ಲಾರ್ವಾ ಸರ್ವೆ ಮಾಡುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಎಚ್ಚರಿಕೆ ವಹಿಸಲು ಸೂಚನೆ ನೀಡಿದರೂ ಕೂಡ ಕೆಲವೆಡೆ ಜನರು ಸ್ಪಂದಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.ಚಿಕ್ಕಮಗಳೂರಿನ ಕೆಲವು ವೈನ್ ಸ್ಟೋರ್‌ಗಳು ಗ್ರಾಹಕರಿಗೆ ಸ್ಥಳದಲ್ಲಿಯೇ ಮದ್ಯ ಕುಡಿಯುವ ವ್ಯವಸ್ಥೆ ಮಾಡಿಕೊಂಡಿಲ್ಲ, ಮದ್ಯ ಖರೀದಿ ಮಾಡುವವರು ಅಂಗಡಿ ಆಸುಪಾಸಿನಲ್ಲಿ ಫುಟ್‌ಪಾತ್‌ನಲ್ಲಿ, ಖಾಲಿ ಮಳಿಗೆ ಬಳಿ ಹಾಗೂ ಕಾರಿನೊಳಗೆ ಕುಳಿತು ಕುಡಿದು ಪ್ಲಾಸ್ಟಿಕ್ ಲೋಟ ಹಾಗೂ ಬಾಟಲಿಗಳಲ್ಲಿ ಸ್ಥಳ ದಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. ಪ್ರತಿ ದಿನ ಬರುತ್ತಿರುವ ಮಳೆಯಿಂದ ನೀರು ಲೋಟ ಹಾಗೂ ಬಾಟಲಿಯೊಳಗೆ ಸೇರಿ ಡೆಂಘೀ ಹರಡುವ ಸೊಳ್ಳೆಗಳ ಉತ್ಪತ್ತಿಯ ಕೇಂದ್ರಗಳಾಗುತ್ತಿವೆ. ಇವುಗಳ ಮೇಲೆ ಸ್ಥಳೀಯ ಸಂಸ್ಥೆಗಳು ನಿಗಾ ಇಡಬೇಕಾದ ಅಗತ್ಯವಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.---- ಬಾಕ್ಸ್ ----ತಾಲೂಕುಗಳುಡೆಂಘೀಪೀಡಿತ ಹಳ್ಳಿಗಳು ಸಂಖ್ಯೆ
----- ---- ----ಚಿಕ್ಕಮಗಳೂರು85 206
---- -- --ಕಡೂರು14 17
-- -- --ತರೀಕೆರೆ 16 22
-- -- --ಎನ್.ಆರ್.ಪುರ0511
--- -- --ಕೊಪ್ಪ 12 14
-- -- --ಶೃಂಗೇರಿ11 17
-- -- --ಮೂಡಿಗೆರೆ 07 11
-- -- --ಒಟ್ಟು 150 298
-- -- ------ ಬಾಕ್ಸ್ ---ಮುಂಜಾಗ್ರತಾ ಕ್ರಮವಾಗಿ ಲಾರ್ವಾ ಸರ್ವೆ: ಡಾ. ಸೀಮಾಚಿಕ್ಕಮಗಳೂರು: ತಾಲೂಕಿನಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಲಾರ್ವಾ ಸರ್ವೆಯನ್ನು ನಗರದ ಪ್ರತಿ ವಾರ್ಡ್‌ಗಳಲ್ಲಿಯೂ ಮಾಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಸೀಮಾ ತಿಳಿಸಿದರು.
ನೆಹರು ನಗರದಲ್ಲಿ ಲಾರ್ವಾ ಸರ್ವೆ ನಡೆಸಿ ಮಾತನಾಡಿದ ಅವರು, ಡೆಂಘೀ ಜ್ವರ ನಿಯಂತ್ರಿಸುವಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ನಾಗರೀಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿ ಮನೆಗೆ ಭೇಟಿ ನೀಡಿ ಡೆಂಘೀ ಜ್ವರ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ನೀರು ಸಂಗ್ರಹಗಾರದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸರಿಯಾಗಿ ಮುಚ್ಚಬೇಕು, ಜೊತೆಗೆ ಜ್ವರ ಕಾಣಿಸಿಕೊಂಡ ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸುವಂತೆ ವಿನಂತಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಕೇಂದ್ರಗಳ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯ ಕರ್ತೆಯರು, ಎಎನ್‌ಎಂ, ಆರೋಗ್ಯ ನಿರೀಕ್ಷಕರು, ವೈದ್ಯಾಧಿಕಾರಿಗಳನ್ನೊಳಗೊಂಡ ತಂಡ ಗ್ರಾಮೀಣ ಪ್ರದೇಶದ ಎಲ್ಲಾ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ನಾಗರಿಕರು ಮನೆ ಒಳಗೆ ಸೊಳ್ಳೆಗಳು ಬರದಂತೆ ಸೊಳ್ಳೆ ಬತ್ತಿ ಹಚ್ಚಬೇಕು. ಕಿಟಕಿಗಳಿಗೆ ಸೊಳ್ಳೆ ಮೆಶ್ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂಬಂಧ ನಗರಸಭೆಯೊಂದಿಗೆ ಚರ್ಚಿಸಿದ್ದು, ಫಾಗಿಂಗ್ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡುತ್ತಿದ್ದಾರೆ. ಆದರೆ ಸಾರ್ವಜನಿಕರು ಕಸವನ್ನು, ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕ ಬಾರದು. ಇದರಿಂದ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗುವುವು ಎಂದು ಹೇಳಿದರು. ಮೊದಲಿಗೆ ಜ್ವರ ಬರುವುದು, ತಲೆ ನೋವು, ಮೈಕೈ ನೋವು, ಕಣ್ಣಿನ ಗುಡ್ಡೆ ನೋವು ಇವುಗಳು ಲಕ್ಷಣ ಗಳಾಗಿದ್ದು, ರಕ್ತ ಪರೀಕ್ಷೆಯಿಂದ ಮಾತ್ರ ಇದನ್ನು ಪತ್ತೆ ಹಚ್ಚ ಬಹುದಾಗಿದೆ ಎಂದು ತಿಳಿಸಿದರು. ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳು ನಗರದಲ್ಲಿ ಲಾರ್ವಾ ಸರ್ವೆ ನಡೆಸುತ್ತಿದ್ದು, ಎರಡು ಮತ್ತು ನಾಲ್ಕನೇ ಶುಕ್ರವಾರ ಆರೋಗ್ಯ ಇಲಾಖೆ ಸಿಬ್ಬಂದಿ, ಎಲ್ಲಾ ಆಶಾ ಕಾರ್ಯಕರ್ತೆಯರು, ನರ್ಸ್‌ಗಳು, ಎಎನ್‌ಎಂ, ಪಿಎಚ್‌ಸಿ, ಎಚ್‌ಐಓಗಳು ಲಾರ್ವಾ ಸರ್ವೆ ಮಾಡುತ್ತಿ ದ್ದಾರೆ ಎಂದರು.ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಕಿರಿಯ ಆರೋಗ್ಯ ಸಹಾಯಕ ಅಧಿಕಾರಿ ಲಕ್ಷ್ಮೀಬಾಯಿ ಇದ್ದರು. 8 ಕೆಸಿಕೆಎಂ 4ಚಿಕ್ಕಮಗಳೂರಿನ ನೆಹರು ನಗರದಲ್ಲಿ ಆರೋಗ್ಯ ಇಲಾಖೆಯಿಂದ ಲಾರ್ವಾ ಸರ್ವೆ ನಡೆಸಲಾಯಿತು.