ಸಾರಾಂಶ
dengue awareness programme in hyriyuru
ಕನ್ನಡಪ್ರಭ ವಾರ್ತೆ ಹಿರಿಯೂರು
ಡೆಂಘೀ ಜ್ವರವು ಇತ್ತೀಚೆಗೆ ಉಲ್ಬಣಗೊಳ್ಳುತ್ತಿದ್ದು, ಜನರು ಜಾಗೃತವಾಗಿರಬೇಕು ಎಂದು ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ. ಶಿವಕುಮಾರ್ ಹೇಳಿದರು. ನಗರದ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಡೆಂಘೀ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಈಡೀಸ್ ಎಂಬ ಸೊಳ್ಳೆಯು ಕಚ್ಚುವುದರಿಂದ ಡೆಂಘೀ ಹರಡುತ್ತದೆ. ಈ ಸೊಳ್ಳೆಗಳು ನಿಂತ ನೀರಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಮನೆಗಳ ಸುತ್ತಮುತ್ತ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ತೆಂಗಿನ ಚಿಪ್ಪು, ಟೈಯರ್, ಗಿಡಗಳ ಕುಂಡಗಳoತಹ ಸ್ಥಳಗಳಲ್ಲಿ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಹಾಕುವುದು ಮತ್ತು ಮಲಗಲು ಸೊಳ್ಳೆ ಪರದೆಗಳನ್ನು ಬಳಸುವುದು ಉತ್ತಮ. ಸುಸ್ತು, ತಲೆನೋವು, ಜ್ವರ ಕಂಡು ಬಂದಲ್ಲಿ ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದರು .
ಈ ಸಂದರ್ಭದಲ್ಲಿ ಡಾ. ರಾಘವೇಂದ್ರ, ಡಾ. ಚಂಪಾ, ಬಸವರಾಜ್ , ಪ್ರಿಯ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಫೋಟೊ: ಚಿತ್ರ 1,2
ನಗರದ ಆಸ್ಪತ್ರೆಯಲ್ಲಿ ಡೆಂಘೀ ಜಾಗೃತಿ ಕಾರ್ಯಕ್ರಮಕ್ಕೆ ಆಯುರ್ವೇದ ವೈದ್ಯ ಡಾ.ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು.