ಡಿಸಿಎಂ ಡಿಕೆಶಿ ಮತದಾನ

| Published : Jun 04 2024, 12:30 AM IST

ಸಾರಾಂಶ

ಕನಕಪುರ: ವಿಧಾನ ಪರಿಷತ್‌ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಕನಕಪುರಕ್ಕೆ ಆಗಮಿಸಿ ತಾಲೂಕು ಕಚೇರಿಯಲ್ಲಿರುವ ಮತ ಕೇಂದ್ರ-71ದಲ್ಲಿ ಮತದಾನ ಮಾಡಿದರು.

ಕನಕಪುರ: ವಿಧಾನ ಪರಿಷತ್‌ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಕನಕಪುರಕ್ಕೆ ಆಗಮಿಸಿ ತಾಲೂಕು ಕಚೇರಿಯಲ್ಲಿರುವ ಮತ ಕೇಂದ್ರ-71ದಲ್ಲಿ ಮತದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನನಗೆ ಬೆಂಗಳೂರಿನಲ್ಲಿ ಮತವಿತ್ತು. ಈ ಬಾರಿ ಕನಕಪುರದಲ್ಲಿ ಮತ ಇರುವುದರಿಂದ ಇಲ್ಲಿಗೆ ಬಂದು ಮತದಾನ ಮಾಡಿದ್ದೇನೆ. ಇದು ಗುಪ್ತ ಮತದಾನ ಆಗಿರುವದರಿಂದ ಯಾರಿಗೆ ಮತ ಹಾಕಿದ್ದೇನೆ ಎಂದು ಹೇಳುವುದಿಲ್ಲ. ಆದರೆ ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ. ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬರಲಿದೆ. ಮಾಧ್ಯಮದವರು ಚುನಾವಣೋತ್ತರ ಸಮೀಕ್ಷೆಯ ಎಕ್ಸಿಟ್‌ ಪೋಲ್‌ಗಳಲ್ಲಿ ಬಂದಿರುವ ಫಲಿತಾಂಶದ ಬಗ್ಗೆ ಕೇಳಿದರೂ ಯಾವುದೇ ಪ್ರತಿಕ್ರಿಯೆ ನೀಡದೆ, ನನಗೆ ಬೆಂಗಳೂರಿನಲ್ಲಿ 3 ಗಂಟೆಗೆ ಸಭೆಯಿದೆ ಎಂದು ಹೇಳಿ ಹೊರಟರು.ಕೆ ಕೆ ಪಿ ಸುದ್ದಿ 06:ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಪ್ರಯುಕ್ತ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಮತದಾನ ಮಾಡಿದರು.