ಸಾರಾಂಶ
ಬಾದಾಮಿ: ಶ್ರೀ ಬನಶಂಕರಿ ದೇವಿ ಜನ್ಮ ದಿನೋತ್ಸವ ಕಾರ್ಯಕ್ರಮ ಜೂ.5ರಂದು ನಡೆಯಲಿದೆ.
ಬಾದಾಮಿ: ಶ್ರೀ ಬನಶಂಕರಿ ದೇವಿ ಜನ್ಮ ದಿನೋತ್ಸವ ಕಾರ್ಯಕ್ರಮ ಜೂ.5ರಂದು ನಡೆಯಲಿದ್ದು, ಇದರ ಅಂಗವಾಗಿ ವಿವಿದ ಕಾರ್ಯಕ್ರಮನಡೆಯಲಿವೆ.
ಮೊದಲ ಎರಡು ದಿನ ಲೋಕ ಕಲ್ಯಾಣಾರ್ಥವಾಗಿ ಪೂಜಾರ ಬಂಧುಗಳಿಂದ ಶ್ರೀದೇವಿಯ ಮೂಲ ಮಾಲಾ ಮಂತ್ರ ಜಪ, ತಪ ಕವಚ ವಾರಾಯಣ ಜರುಗುತ್ತವೆ. ಕೊನೆಯ ದಿನ ದೇವಿ ಅವತರಿಸಿದ ದಿನವಾದ 5ರಂದು ಶ್ರೀ ಬನಶಂಕರಿ ದೇವಿಗೆ ಘೋಡಕ್ಷ ದ್ರವ್ಯಗಳಿಂದ ಅಭಿಷೇಕ, ಮಾವಿನಹಣ್ಣಿನ ಅಭಿಷೇಕ, ಅಂದು ಬೆಳಗ್ಗೆ 4 ಗಂಟೆಗೆ ಪೂಜಾ ಹಾಗೂ ಪುಷ್ಪ ಅಲಂಕಾರ ನಡೆಯಲಿದೆ. ಸುಮಂಗಲೆಯರಿಂದ ಕುಂಕುಮಾರ್ಚನೆ ಪೂಜೆ ನಡೆಯಲಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರಲಿದೆ ಎಂದು ಶ್ರೀ ಬನಶಂಕರಿ ದೇವಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಎಂ.ಎಸ್.ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.