ದೇರಳಕಟ್ಟೆ: 26ರಂದು ಬ್ಯಾರೀಸ್ ಟರ್ನಿಂಗ್‌ ಪಾಯಿಂಟ್‌ ಶುಭಾರಂಭ

| Published : Apr 24 2025, 12:00 AM IST

ದೇರಳಕಟ್ಟೆ: 26ರಂದು ಬ್ಯಾರೀಸ್ ಟರ್ನಿಂಗ್‌ ಪಾಯಿಂಟ್‌ ಶುಭಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ದೇರಳಕಟ್ಟೆ ‘ಬ್ಯಾರೀಸ್‌ ಟರ್ನಿಂಗ್‌ ಪಾಯಿಂಟ್‌’ ಉದ್ಘಾಟನಾ ಸಮಾರಂಭ ೨೬ರಂದು ಸಂಜೆ ೪.೩೦ಕ್ಕೆ ನಡೆಯಲಿದೆ.೪ ಪರದೆಗಳ ಮಲ್ಟಿಪ್ಲೆಕ್ಸ್‌ ಥಿಯೇಟರ್‌, ಫುಡ್‌ ಕೋರ್ಟ್‌ ಹಾಗೂ ಗೇಮ್ಸ್‌ ಇಲ್ಲಿನ ಆಕರ್ಷಣೆಯ ಕೇಂದ್ರಬಿಂದು ಆಗಿದೆ. ಮೊದಲ ದಿನ ಎಳೆಯರಿಂದ ವಯಸ್ಕರವರೆಗೂ ಗೇಮ್ಸ್‌ ಸಂಪೂರ್ಣ ಉಚಿತವಾಗಿ ಆರಂಭದ ಆಫರ್‌ ನೀಡಲಾಗಿದೆ

ಕನ್ನಡಪ್ರಭ ವಾರ್ತೆ ಉಳ್ಳಾಲ

ಶೈಕ್ಷಣಿಕ, ಉನ್ನತ ಶಿಕ್ಷಣ ಹಾಗೂ ರಿಯಲ್‌ ಎಸ್ಟೇಟ್‌ ನಲ್ಲಿ ಪರಿಸರ ಸ್ನೇಹಿ ಸಂರಚನೆ ಮೂಲಕ ಖ್ಯಾತಿ ಗಳಿಸಿರುವ ಬ್ಯಾರೀಸ್‌ ಗ್ರೂಪ್‌ನ ನೂತನ ವೈಶಿಷ್ಟ್ಯಪೂರ್ಣ ಅಪಾರ್ಟ್‌ ಮೆಂಟ್, ಶಾಪಿಂಗ್‌ ಮಾಲ್‌, ರೀಟೈಲ್‌ ಮಳಿಗೆಗಳನ್ನು ಒಳಗೊಂಡಿರುವ ದೇರಳಕಟ್ಟೆ ‘ಬ್ಯಾರೀಸ್‌ ಟರ್ನಿಂಗ್‌ ಪಾಯಿಂಟ್‌’ ಉದ್ಘಾಟನಾ ಸಮಾರಂಭ ೨೬ರಂದು ಸಂಜೆ ೪.೩೦ಕ್ಕೆ ನಡೆಯಲಿದೆ.೪ ಪರದೆಗಳ ಮಲ್ಟಿಪ್ಲೆಕ್ಸ್‌ ಥಿಯೇಟರ್‌, ಫುಡ್‌ ಕೋರ್ಟ್‌ ಹಾಗೂ ಗೇಮ್ಸ್‌ ಇಲ್ಲಿನ ಆಕರ್ಷಣೆಯ ಕೇಂದ್ರಬಿಂದು ಆಗಿದೆ. ಮೊದಲ ದಿನ ಎಳೆಯರಿಂದ ವಯಸ್ಕರವರೆಗೂ ಗೇಮ್ಸ್‌ ಸಂಪೂರ್ಣ ಉಚಿತವಾಗಿ ಆರಂಭದ ಆಫರ್‌ ನೀಡಲಾಗಿದೆ ಎಂದು ಸಂಸ್ಥೆಯ ರಿಟೈಲ್‌ ಹೆಡ್‌ ಕೆ. ನಂದಕುಮಾರ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾರೀಸ್‌ ಸಂಸ್ಥೆಯ ಬಹುನಿರೀಕ್ಷಿತ ಯೋಜನೆ ನಗರದ ಜೀವನಶೈಲಿ, ಶಾಪಿಂಗ್‌ ಮತ್ತು ಕುಟುಂಬ ಮನರಂಜನೆ ನಿರ್ವಹಿಸಲು ಸಿದ್ಧವಾಗಿದೆ. ಯೋಜನೆಯ ಹೃದಯಭಾಗದಲ್ಲಿ ಫ್ಯಾಮಿಲಿ ಎಂಟರ್‌ ಟೈನ್‌ ಮೆಂಟ್‌ ಸೆಂಟರ್‌, ಆಧುನಿಕ ೪ ಪರದೆಗಳ ಮಲ್ಟಿಪ್ಲೆಕ್ಸ್‌ ಹಾಗೂ ವಿವಿಧ ಪಾಕವಿಧಾನಗಳನ್ನು ಒಳಗೊಂಡ ಫುಡ್‌ ಕೋರ್ಟ್‌ ಕಾರ್ಯಾರಂಭಗೊಳ್ಳಲಿದೆ ಎಂದರು.

ಮಾರ್ಕೆಟಿಂಗ್‌ ವಿಭಾಗದ ಅಸಿಸ್ಟೆಂಟ್‌ ಮೆನೇಜರ್‌ ಪ್ರಫುಲ್ಲಾ ಪುಷ್ಪರಾಜ್‌ ಮಾತನಾಡಿ, ಬೌಲಿಂಗ್‌ (ಟೆನ್‌ ಪಿನ್‌ ಬೌಲಿಂಗ್)‌, ಕ್ರಿಕೆಟ್‌, ವಾಲ್‌ ಕ್ಲೈಂಬಿಂಗ್‌ ( ಮಂಗಳೂರಿನಲ್ಲೇ ಪ್ರಥಮ ಬಾರಿ), ಡ್ಯಾಷಿಂಗ್‌ ಕಾರು, ಸಾಪ್ಟ್ಲಿ(ಮಕ್ಕಳಿಗೆ), ವಿಡಿಯೋ ಗೇಮ್ಸ್‌ ರಿಡೆಂಪ್ಷನ್‌ ಗೇಮ್ಸ್‌ ಹಾಗೂ ಕಿಡ್ಡಿ ಟ್ರೈನ್‌ ಗೇಮ್ಸ್‌ ಒಳಗೊಂಡಿದ್ದು, ಒಂದು ವರ್ಷದಿಂದ ೬೦ರ ಹರೆಯದವರ ವರೆಗೂ ಆಟವಾಡಬಹುದಾಗಿದೆ. ಕುಟುಂಬದ ಜೊತೆಗೆ ಮಹಿಳೆಯರಿಗೂ ಆಟವಾಡಲು ಉತ್ತಮ ವಾತಾವರಣವಿದೆ ಎಂದು ಮಾಹಿತಿ ನೀಡಿದರು.

ಎರಡನೇ ಮಹಡಿಯಲ್ಲಿ ಮಲ್ಟಿಪ್ಲೆಕ್ಸ್‌ ಎಂಟರ್‌ಟೈನ್‌ಮೆಂಟ್‌ ಸೆಂಟರ್‌ ಮತ್ತು ಫುಡ್‌ ಕೋರ್ಟ್‌ ಒಂದೇ ಜಾಗದಲ್ಲಿ ಸಂಯೋಜನಗೊಂಡಿದೆ. ಫುಡ್‌ ಕೋರ್ಟಿನಲ್ಲಿ ೪೫ ಮಳಿಗೆಗಳು ಶುಭಾರಂಭಗೊಳ್ಳಲಿದ್ದು, ಆಕರ್ಷಕ ತಿಂಡಿ ತಿನುಸುಗಳನ್ನು ಗ್ರಾಹಕರಿಗೆ ಪೂರೈಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಇಂಟೀರಿಯರ್‌ ಸೀನಿಯರ್‌ ಮೆನೇಜರ್‌ ಕೋಡಿ ಮೊಹಮ್ಮದ್‌ ಇಕ್ಬಾಲ್‌ , ಮಾರ್ಕೆಟಿಂಗ್‌ ವಿಭಾಗದ ಅಸಿಸ್ಟೆಂಟ್‌ ಮೆನೇಜರ್‌ ಪ್ರಫುಲ್ಲಾ ಪುಷ್ಪರಾಜ್‌ , ಪಬ್ಲಿಕ್‌ ರಿಲೇಷನ್ಸ್‌ ಆಫೀಸರ್‌ ಬಾಬು ನಯನಾರ್‌ ಇದ್ದರು.