ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ರೇಸ್ ಕ್ಲಬ್ ನಲ್ಲಿ ಭಾನುವಾರ ಡರ್ಬಿ ರೇಸ್, ಅ. 26 ರಂದು ಎರಡು ದಿನಗಳ ಮಾನ್ಸೂನ್ ರೇಸ್ ಆಯೋಜಿಸಲಾಗಿದೆ.ಶನಿವಾರ ಡರ್ಬಿ ಹೊರತಾದ ರೇಸ್ ನಡೆಯುತ್ತದೆ. ದಿ ಕ್ಯೂಬಿಕ್ ಮೈಸೂರು ಡರ್ಬಿ- 2024 ಭಾನುವಾರ ಸಂಜೆ 4ಕ್ಕೆ ನಡೆಯಲಿದೆ. 1.20 ಕೋಟಿ ರೂ. ಡರ್ಬಿಯ ಒಟ್ಟು ಬಹುಮಾನ ಮೊತ್ತ ಎಂದು ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ಕೆ.ಎನ್. ಸುರೇಶ್ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮೊದಲ ಬಹುಮಾನವಾಗಿ 68.82 ಲಕ್ಷ ರೂ. ನೀಡಲಾಗುತ್ತದೆ. ಭಾನುವಾರ ಮಧ್ಯಾಹ್ನ 1.30ಕ್ಕೆ ರೇಸ್ ಆರಂಭವಾಗುತ್ತದೆ. ರಾಯಲ್ ಕಲ್ಕತ್ತಾ ಟರ್ಫ್ ಕ್ಲಬ್ ಟ್ರೋಫಿ, ರಾಯಲ್ ವೆಸ್ಟರ್ನ್ ಇಂಡಿಯಾ ಟರ್ಫ್ ಕ್ಲಬ್ ಟ್ರೋಫಿ, ಹೈದರಾಬಾದ್ ರೇಸ್ ಕ್ಲಬ್ ಟ್ರೋಫಿ, ಬೆಂಗಳೂರು ಟರ್ಫ್ ಕ್ಲಬ್ ಟ್ರೋಫಿ, ಮೈಸೂರು ರೇಸ್ ಕ್ಲಬ್ ಆ್ಯನಿವರ್ಸರಿ ಕಪ್, ಮದ್ರಾಸ್ ರೇಸ್ ಕ್ಲಬ್ ಟ್ರೋಫಿಗಾಗಿಯೂ ಸ್ಪರ್ಧೆ ನಡೆಯುತ್ತದೆ ಎಂದು ಅವರು ಹೇಳಿದರು.ಎಂ.ಆರ್.ಸಿ ಕಾರ್ಯದರ್ಶಿ ಡಾ. ಜಗನ್ನಾಥ್, ಪದಾಧಿಕಾರಿಗಳಾದ ಡಾ. ಅಜಿತ್ ಕುಮಾರ್, ನಾಗಪ್ಪನ್, ವೈ.ಪಿ. ಉದಯಶಂಕರ್ ಮೊದಲಾದವರು ಇದ್ದರು.