ಸಾರಾಂಶ
ಇಳಕಲ್ಲ: ಫೇಸ್ಬುಕ್ ಖಾತೆಯಲ್ಲಿ ಹಿಂದು ದೇವರ ಬಗ್ಗೆ ಅಶ್ಲೀಲ ಚಿತ್ರ ಪೋಸ್ಟ್ ಹಾಕುವ ಮೂಲಕ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದ್ದು, ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಇಳಕಲ್ಲ ತಾಲೂಕು ಹಿಂದು ಜಾಗರಣಾ ವೇದಿಕೆ ನಗರದ ಪೋಲಿಸ್ ಠಾಣೆಯ ಪಿಎಸ್ಐ ಹಾಗೂ ತಾಲೂಕು ಗ್ರೇಡ್-೨ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಫೇಸ್ಬುಕ್ ಖಾತೆಯಲ್ಲಿ ಹಿಂದು ದೇವರ ಬಗ್ಗೆ ಅಶ್ಲೀಲ ಚಿತ್ರ ಪೋಸ್ಟ್ ಹಾಕುವ ಮೂಲಕ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದ್ದು, ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಇಳಕಲ್ಲ ತಾಲೂಕು ಹಿಂದು ಜಾಗರಣಾ ವೇದಿಕೆ ನಗರದ ಪೋಲಿಸ್ ಠಾಣೆಯ ಪಿಎಸ್ಐ ಹಾಗೂ ತಾಲೂಕು ಗ್ರೇಡ್-೨ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.ಸಾಮಾಜಿಕ ಜಾಲತಾಣದಲ್ಲಿ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಪೋಸ್ಟ್ ಹಾಕಿರುವ ಯಲ್ಲಪ್ಪ ರಾಜಾಪುರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆ ಮುಖಂಡ ಶರಣು ಪಾಟೀಲ ಒತ್ತಾಯಿಸಿದ್ದರು. ಕಠಿಣ ಕ್ರಮ ಜರುಗಿಸದಿದ್ದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಹಿಂದು ಜಾಗರಣಾ ವೇದಿಕೆ ಇಲಕಲ್ಲ ತಾಲೂಕು ಅಧ್ಯಕ್ಷ ರಾಘವೇಂದ್ರ ಮ್ಯಾಕಲ್ ಹಾಗೂ ಪ್ರದೀಪ್ ಅಮರಣನವರ, ಪರಶುರಾಮ ಬಿಸಲದ್ನಿನಿ, ಶರಣು ಪಾಟೀಲ, ಶಿವು ಚಿಲ್ಲೆವೇರಿ, ಗುರುಲಿಂಗ ಅಂಗಡಿ, ಮಲ್ಲು ಕುಂಬಾರ, ಶ್ಯಾಮ ತಳವಾರ, ಕಿರಣ ಗರಡಿಮನಿ, ಪ್ರಶಾಂತ ಮಡಿವಾಳರ, ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.