ಲಿಂಗಭ್ರೂಣ ಪತ್ತೆ ಗರ್ಭಪಾತಕ್ಕೆ ಕಾರಣ

| Published : Apr 26 2024, 12:51 AM IST

ಸಾರಾಂಶ

ಗರ್ಭಪಾತಕ್ಕೆ ಲಿಂಗ ನಿರ್ಣಯವೂ ಒಂದು ದೊಡ್ಡ ಕಾರಣವಾಗಿದೆ. ಹೀಗಾಗಿ ಭ್ರೂಣಲಿಂಗದ ನಿರ್ಣಯ ಮಾಡುವುದು ಹಾಗೂ ಪ್ರಚೋದನೆ ಮಾಡುವುದು ಎರಡು ಕಾನೂನು ಬಾಹೀರ ಎಂದು ಕೆಜಿಎಂಒಎ ಅಧ್ಯಕ್ಷೆ ಡಾ.ವಿದ್ಯಾ ಥೊಬ್ಬಿ ಹೇಳಿದರು.

ಕನ್ನಡಪ್ರಭ ವಾರ್ತೆ ತಿಕೋಟಾ

ಗರ್ಭಪಾತಕ್ಕೆ ಲಿಂಗ ನಿರ್ಣಯವೂ ಒಂದು ದೊಡ್ಡ ಕಾರಣವಾಗಿದೆ. ಹೀಗಾಗಿ ಭ್ರೂಣಲಿಂಗದ ನಿರ್ಣಯ ಮಾಡುವುದು ಹಾಗೂ ಪ್ರಚೋದನೆ ಮಾಡುವುದು ಎರಡು ಕಾನೂನು ಬಾಹೀರ ಎಂದು ಕೆಜಿಎಂಒಎ ಅಧ್ಯಕ್ಷೆ ಡಾ.ವಿದ್ಯಾ ಥೊಬ್ಬಿ ಹೇಳಿದರು.

ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಭ್ರೂಣ ಹತ್ಯೆ ಕುರಿತು ಹೆಣ್ಣು ಮಕ್ಕಳಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಹೆಣ್ಣು ಮಕ್ಕಳು ಜನಸಿದರೆ ಅನಿಷ್ಠ ಎನ್ನುವ ಕಲ್ಪನೆ ಪಾಲಕರಲ್ಲಿ ಇದೆ. ಭಾರತದಲ್ಲಿ ಪ್ರತಿವರ್ಷ ಗರ್ಭಪಾತಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಅನೇಕ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಗರ್ಭಪಾತಗಳು ಮಹಿಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದರು.

ನಂತರ ಡಾ.ಜೈಬುನಿಸ್ಸಾ ಬೀಳಗಿ ಮಾತನಾಡಿ, ಮಗಳು ಭಾರವಲ್ಲ, ಅವಳು ಆಧಾರಳು. ಜೀವನ ಅವಳ ಹಕ್ಕು ಶಿಕ್ಷಣವು ಅವಳ ಆಯುಧ. ಹೆಣ್ಣು ಮಕ್ಕಳನ್ನು ರಕ್ಷಿಸಿ ದೇಶದ ಸಂಪತ್ತನ್ನು ಹೆಚ್ಚಿಸಿ. ಸಾಕ್ಷರ ನಾರಿ ಪ್ರಗತಿಗೆ ದಾರಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಮಹಿಳೆಯರಿಗೆ ಶಿಕ್ಷಣ, ಮಾನವೀಯತೆಯ ಶಿಕ್ಷಣ, ಹೆಣ್ಣು ಮಕ್ಕಳ ಸರ್ವಾಂಗೀಣ ವಿಕಾಸ ದೇಶದ ಅಭಿವೃದ್ಧಿ ಸಂಕೇತ, ಹೆಣ್ಣು ಗಂಡು ಭೇದ ಬೇಡ, ಭ್ರೂಣ ಹತ್ಯೆ ನಿಲ್ಲಿಸಿ, ಲಿಂಗ ಸಮಾನತೆ ಉಳಿಸಿ ಎಂದು ತಿಳಿಸಿದರು.

ಡಾ.ನವ್ಯಾ ಹಾಗೂ ಸಂಗಡಿಗರಿಂದ (ಆಲ್ ಅಮೀನ್‌ ಮೆಡಿಕಲ್ ಕಾಲೇಜ ವಿಜಯಪುರ) ಮೂಖ ಪಾತ್ರ ಅಭಿನಯದ ಮುಖಾಂತರ ಭ್ರೂಣ ಹತ್ಯೆ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.

ಡಾ.ಸಂತೋಷ ಶಟ್ಟಿ, ಡಾ.ಅಕ್ಷಯ ವಾಗಮೋರೆ, ರಮೇಶ ಪಡಸಲಗಿ, ಗೋಪಾಲ ರಬಕವಿ, ಕಮಲಾ ತಳವಾರ,ಅರವಿಂದ ಚೌಧರಿ ಇತರರು ಇದ್ದರು.