ದೇವಲಾಪೂರ ಉಡಚಮ್ಮದೇವಿ ಜಾತ್ರೆ: ಇಂದು ದೇವಿಗೆ ಸಹಸ್ರ ದೀಪೋತ್ಸವ

| Published : Apr 21 2025, 12:57 AM IST

ದೇವಲಾಪೂರ ಉಡಚಮ್ಮದೇವಿ ಜಾತ್ರೆ: ಇಂದು ದೇವಿಗೆ ಸಹಸ್ರ ದೀಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬೈಲಹೊಂಗಲ ತಾಲೂಕಿನ ಸುಕ್ಷೇತ್ರ ದೇವಲಾಪೂರ ಗ್ರಾಮದೇವತೆ ಉಡಚಮ್ಮದೇವಿ 18ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ 22 ರವರೆಗೆ ಜರುಗುವುದು.

ಕನ್ನಡಪ್ರಭ ವಾರ್ತೆ ದೇವಲಾಪೂರ

ಬೈಲಹೊಂಗಲ ತಾಲೂಕಿನ ಸುಕ್ಷೇತ್ರ ದೇವಲಾಪೂರ ಗ್ರಾಮದೇವತೆ ಉಡಚಮ್ಮದೇವಿ 18ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ 22 ರವರೆಗೆ ಜರುಗುವುದು.

ಸಾನ್ನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಮಹಾಸ್ವಾಮಿಗಳು ಬೈಲಹೊಂಗಲ ಶಿವಾನಂದ ಮಠದ ಮಹದೇವ ಸರಸ್ವತಿ ಸ್ವಾಮಿಗಳು ವಹಿಸುವರು. ಬೆಳಗ್ಗೆ 6 ಗಂಟೆಗೆ ಮಹಾಭಿಷೇಕ, ಬೆಳಗ್ಗೆ 9 ಗಂಟೆಗೆ ಉಡಚಮ್ಮದೇವಿ ಗೆಳೆಯರ ಬಳಗದ ವತಿಯಿಂದ ಮುಕ್ತ ರಂಗೋಲಿ ಸ್ಪರ್ಧೆ, ಸಂಜೆ 6 ಗಂಟೆಗೆ ದೇವಿಗೆ ಸಹಸ್ರ ದೀಪೋತ್ಸವ, ಸಂಜೆ 6.30 ಗಂಟೆಗೆ ಭಕ್ತಿ ಸಂಗೀತ ಕಾರ್ಯಕ್ರಮ, ಸಂಜೆ 7.30 ಗಂಟೆಗೆ ಶ್ರೀಗಳಿಂದ ಪ್ರವಚನ ಹಾಗೂ ಪೂಜ್ಯರಿಗೆ ಗೌರವ ಸಮರ್ಪಣೆ. 2012ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಬಳಗದವರಿಂದ ಪ್ರಸಾದ ಸೇವೆ. ರಾತ್ರಿ 10.30 ಗಂಟೆಗೆ 12 ವರ್ಷ ಮೇಲ್ಪಟ್ಟ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು. ನೇತೃತ್ವವನ್ನು ಮಲ್ಲಾಪುರ ಗಾಲೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು, ಹುಣಸ್ಯಾಳ ಪಿ.ಜಿ.ಸಿದ್ದಲಿಂಗ ಕೈವಲ್ಲ್ಯಾಶ್ರಮದ ನಿಜಗುಣ ದೇವರು, ಚಿಕ್ಕ ಮುನವಳ್ಳಿ ಆರೂಢಮಠ ಶಿವಪುತ್ರ ಮಹಾಸ್ವಾಮಿಗಳು ವಹಿಸುವರು ಎಂದು ದೇವಸ್ಥಾನದ ಜೀರ್ಣೋದ್ಧಾರ ಟ್ರಸ್ಟ್‌ ಕಮಿಟಿ, ಉಡಚಮ್ಮದೇವಿ ಸದ್ಭಕ್ತ ಮಂಡಳಿ ಹಾಗೂ ಗ್ರಾಮದ ಎಲ್ಲ ಸಂಘಟನೆಗಳ ಸರ್ವ ಸದಸ್ಯರು, ಗ್ರಾಮದ ಎಲ್ಲ ಭಜನಾ ಮಂಡಳಿಗಳ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.