ನಿತ್ಯ ಕಾಯಕದೊಂದೊಂದಿಗೆ ದೇವರನ್ನು ದರ್ಶಿಸಿಕೊಂಡ ದೇವರದಾಸಿಮಯ್ಯ ಅವರು ವಚನ ಸಾಹಿತ್ಯಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾದುದು ಎಂದು ಶಿಕ್ಷಕ ಡಾ. ದಿವಾಕರ ನಾರಾಯಣ ಅಭಿಪ್ರಾಯ ಪಟ್ಟರು.
ಹೊಸಪೇಟೆ: ನಿತ್ಯ ಕಾಯಕದೊಂದೊಂದಿಗೆ ದೇವರನ್ನು ದರ್ಶಿಸಿಕೊಂಡ ದೇವರದಾಸಿಮಯ್ಯ ಅವರು ವಚನ ಸಾಹಿತ್ಯಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾದುದು ಎಂದು ಶಿಕ್ಷಕ ಡಾ. ದಿವಾಕರ ನಾರಾಯಣ ಅಭಿಪ್ರಾಯ ಪಟ್ಟರು.
ನಗರದ ನೀಲಕಂಟೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚಿಗೆ ಹೊಸಪೇಟೆ ತಾಲೂಕು ನೇಕಾರ ಸಂಘ ಹಮ್ಮಿಕೊಂಡ ಶ್ರೀ ದೇವರದಾಸಿಮಯ್ಯನವರ ಜಯಂತಿಯಲ್ಲಿ ಮುಖ್ಯಉಪನ್ಯಾಸ ನೀಡಿ ಮಾತನಾಡಿದರು.ಬಸವಣ್ಣರವರು ತಮ್ಮ ವಚನಗಳಲ್ಲಿ ದೇವರ ದಾಸಿಮಯ್ಯ ಅವರನ್ನು ಆದ್ಯ ವಚನಕಾರರೆಂದು ಸ್ತುತಿಸಿದ್ದಾರೆ. ಅಲ್ಲದೇ ಸ್ತ್ರೀ ಪುರುಷ ಬೇಧ-ಭಾವ ಇಲ್ಲದಂತೆ ಎಲ್ಲರೂ ಸಮಾನರು ಎಂಬ ಭಾವ ಹೊಂದಿರಬೇಕು ಎಂದು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಇಂತಹ ಮಹಾನ್ ಶರಣರ ಜೀವನವನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಡಾ. ಗೋವಿಂದ ಮಾತನಾಡಿ, ದಾಸಿಮಯ್ಯ ಅವರು ಈ ನಾಡು ಕಂಡ ಹಿರಿಯ ವಚನಕಾರರು. ಅವರ ವಚನಗಳಲ್ಲಿ ಸಮಾಜ ಪರಿವರ್ತನೆ ಮಾಡುವ ಶಕ್ತಿ ಅಡಗಿದೆ ಎಂದರು.ದೇವರ ದಾಸಿಮಯ್ಯನವರ ಕುರಿತು ಪ್ರಕಟವಾದ ಪುಸ್ತಕಗಳನ್ನು ಕೊಂಡು ತಂದು ಓದುವ ಮನೋಭಾವವನ್ನು ಸಮಾಜದ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ಸಮಾಜದ ಬೆಳವಣಿಗೆಯಲ್ಲಿ ದಾಸಿಮಯ್ಯ ಅವರ ಪಾತ್ರ ಏನೆಂದು ತಿಳಿಯುತ್ತದೆ ಎಂದು ಹೇಳಿದರು.
ತಾಲೂಕು ನೇಕಾರರ ಸಂಘದ ಅಧ್ಯಕ್ಷ ಕೆಂಜೆ ಮಹೇಶ್ ಕುಮಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ಥಳೀಯ ಮುಖಂಡರಾದ ಬಸವರಾಜ್ ನಾಲತ್ವಡ್, ವಗ್ಗಾ ಜಯರಾಮ್, ಕಾಶಿ ವಿಶ್ವನಾಥ, ಕೊಳಗದ ಗಣಪತಿ, ಶಿವಶಂಕ್ರಪ್ಪ, ಪಟ್ಟಸಾಲಿ ವಿರೂಪಾಕ್ಷ, ಸಜ್ಯೋಜಾತಪ್ಪ, ಶ್ರೀನಿವಾಸರಾವ್, ಯರ್ರಿಸ್ವಾಮಿ, ಸತೀಶ, ರಾಮಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಿವೃತ್ತ ಅಧ್ಯಾಪಕ ನಾಗರಾಜ ಸ್ವಾಗತಿಸಿದರು. ಪಂಪಾಪತಿ ವಂದಿಸಿದರು. ಐಲಿ ಪೂಜಾ ನಿರೂಪಿಸಿದರು.ಚಂದನ ಅವರು ಭರತನಾಟ್ಯ ನೃತ್ಯ ಪದರ್ಶನ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಜಯಂತಿ ಅಂಗವಾಗಿ ಹಮ್ಮಿಕೊಂಡ ಕ್ರೀಡಾಕೂಟದ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.