ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ದೇವರಾಜು.ಎನ್ ಅವರು ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ದೇವರಾಜು.ಎನ್ ಅವರು ಆಯ್ಕೆಯಾದರು. ದೇವರಾಜು.ಎನ್ ಅವರು ೧೮ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಕೆ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವೀರಭದ್ರಸ್ವಾಮಿ, ಬಾಲಕೃಷ್ಣೆಗೌಡ, ಕಾರ್ಯದರ್ಶಿಗಳಾಗಿ ಓಂಕಾರಪ್ಪ ಬಿ.ಎನ್, ಮಹಮದ್ ಫಕ್ರುದ್ದೀನ್, ಖಜಾಂಚಿ ಮಧುಸೂಧನ್, ನಿರ್ದೇಶಕರುಗಳಾಗಿ ಬಿ. ದಿವಾಕರ್, ಲಕ್ಷ್ಮೀಕಾಂತ್. ಜಿ, ಸೂಫಿಯನ್, ಹನುಮಂತರಾಜು, ನಟರಾಜು. ಟಿ. ಎಲ್. ಮಧುಸೂಧನ್ ಪಿ.ಆರ್. ನಟರಾಜ್ ಜಿ. ಆರ್. ಆಯ್ಕೆಯಾದರು.

ಈ ಸಂದರ್ಭದಲ್ಲಿ ನೂತನ ತಂಡಕ್ಕೆ ಶುಭಕೋರಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ಗಮಿತ ಅಧ್ಯಕ್ಷ ಎಲ್.ಯೋಗೇಶ್ ಅವರು, ಶಿರಾ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಘದ ಸಾಧನೆಗಳನ್ನು ಮುಂದುವರೆಸುವಂತೆ ಸಲಹೆ ನೀಡಿದರು, ಪತ್ರಕರ್ತರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.

ಶಿರಾ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಸ್.ಎನ್.ಜಯಪಾಲ್ ಅವರು ಮಾತನಾಡಿ ಶಿರಾ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಸದಸ್ಯರಿಗೆ ೫ ಲಕ್ಷದ ಆರೋಗ್ಯ ವಿಮೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ನಿವೇಶನವನ್ನು ನಗರಸಭೆಯಿಂದ ಕೊಡಿಸಲಾಗುವುದು ಎಂದು ತಿಳಿಸಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಶುಭಕೋರಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೇವರಾಜು. ಎನ್ ಅವರು ಮಾತನಾಡಿ ತಾಲೂಕು ಮಟ್ಟದಲ್ಲಿ ಪತ್ರಕರ್ತರ ಸಂಘವನ್ನು ಇನ್ನಷ್ಟು ಬಲಪಡಿಸುವುದಾಗಿ ಹಾಗೂ ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಶಿರಾ ತಾಲೂಕಿನ ಕಾರ್ಯನಿರತ ಪತ್ರಕರ್ತರಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಕೆ ಕುಮಾರ್ ಮಾತನಾಡಿ ಸಂಘದ ಆಡಳಿತವನ್ನು ಪಾರದರ್ಶಕವಾಗಿ ನಡೆಸುವುದಾಗಿ ಹೇಳಿದರು. ಈ ವೇಳೆ ಸಂಘದ ಸದಸ್ಯರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವುದಾಗಿ ಭರವಸೆ ನೀಡಿದರು,

ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ, ಯಶಸ್ ಪದ್ಮನಾಭ, ಸಹಾಯಕ ಚುನಾವಣಾ ಅಧಿಕಾರಿ ರಘುರಾಮ್.ಟಿ.ಈ, ಜಿಲ್ಲಾ ಉಪಾಧ್ಯಕ್ಷ ದಶರಥ, ಜಯಣ್ಣ ಜಯನುಡಿ, ಖಜಾಂಚಿ ಹಾರೋಗೆರೆ ಸತೀಶ್, ನಿರ್ದೇಶಕ ಜಯಣ್ಣ ಬೆಳೆಗೆರೆ, ಪುರುಷೋತ್ತಮ್, ಸುರೇಶ್, ಹಿರಿಯ ವರದಿಗಾರರಾದ ಬರಗೂರು ವಿರೂಪಾಕ್ಷ, ಅನಂತರಾಮು, ಶಿವಕುಮಾರ್, ಮುಬಾರಕ್ ಪಾಷ, ಮಂಜುನಾಥ್, ವಿನೋದ್ ಕುಮಾರ್, ಎಂ.ಎಲ್.ನಾಗರಾಜು, ವಿಜಯಕುಮಾರ್, ತಂಗವೇಲು, ರಾಧಾಕೃಷ್ಣ, ಪಿ.ಡಿ.ಮಹೇಶ್, ವಲಿಸಾಬ್, ಕಿರಣ್ ಕುಮಾರ್, ಸೇರಿದಂತೆ ಹಲವರು ಹಾಜರಿದ್ದರು.