ಸಾರಾಂಶ
ಕೋಲಾರ ಜಿಲ್ಲಾ ಕೈಪಿಡಿ ಪ್ರತಿ ಮಗುವು ಗಮನ ಕೊಡುವ ವಿಧಾನಗಳು ರೂಡಿಗೆ ಬರಬೇಕಾದ ಅನಿವಾರ್ಯ ಇದೆ. ಮಕ್ಕಳ ಮುಂದಿನ ವಿದ್ಯಾಭ್ಯಾಸವನ್ನು ಮಾಡುವ ನಿಟ್ಟಿನಲ್ಲಿ ತರಬೇತಿಗೆ ಅನುಕೂಲವಾಗಲಿದೆ. ಕೈಪಿಡಿಯಲ್ಲಿ ನಾವು ವಾಸ ಮಾಡುವ ಪ್ರದೇಶದ ಹಾಗೂ ಮೇರು ವ್ಯಕ್ತಿಗಳ ಬಗ್ಗೆ ಮಾಹಿತಿ ಇದೆ.
ಕನ್ನಡಪ್ರಭ ವಾರ್ತೆ ಮುಳಬಾಗಿಲು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡವರು ಸಮಾಜದ ಉತ್ತುಂಗ ಶಿಖರವನ್ನು ತಲುಪುತ್ತಾರೆ. ಇಂತಹ ಉದಾಹರಣೆಗಳನ್ನು ನೋಡಬಹುದು ಎಂದು ತಹಸೀಲ್ದಾರ್ ವಿ.ಗೀತಾ ಹೇಳಿದರು.ತಾಲೂಕಿನ ಕೀಲುಹೊಳಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಗ್ರಾಮ ವಿಕಾಸ, ಲೇಕ್ ಸೈಡ್ ರೋಟರಿ ಕ್ಲಬ್, ಕೋವನ್ ನೆಟ್‌ವರ್ಕ್ ಸಂಸ್ಥೆಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವರಾಯಸಮುದ್ರ, ಯಳಗೊಂಡ್ಲಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅರಿವು ಭಾರತದ ಕೋಲಾರ ಜಿಲ್ಲಾ ಕೈಪಿಡಿ ಪುಸ್ತಕ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮೇರು ವ್ಯಕ್ತಿಗಳ ಮಾಹಿತಿ
ಅರಿವು ಭಾರತ ಸಮಿತಿ ಮುಖ್ಯಸ್ಥ ಶಿವಪ್ಪ ಅರಿವು ಮಾತನಾಡಿ, ನಾವು ವಾಸ ಮಾಡುವ ಪ್ರದೇಶದ ಹಾಗೂ ಮೇರು ವ್ಯಕ್ತಿಗಳ ಬಗ್ಗೆ ಈ ಪುಸ್ತಕದಲ್ಲಿ ಮಾಹಿತಿ ಇದೆ. ಇದನ್ನು ಎಲ್ಲಾ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕೆಂದು ಸಲಹೆ ಮಾಡಿದರು.ಗ್ರಾಮ ವಿಕಾಸ ಸಂಸ್ಥೆ ನಿರ್ದೇಶಕ ಎಂ.ವಿ.ಎನ್. ರಾವ್ ಮಾತನಾಡಿ, ಈ ಕೈಪಿಡಿ ಪ್ರತಿ ಮಗುವು ಗಮನ ಕೊಡುವ ವಿಧಾನಗಳು ರೂಡಿಗೆ ಬರಬೇಕಾದ ಅನಿವಾರ್ಯ ಇದೆ. ಮಕ್ಕಳ ಮುಂದಿನ ವಿದ್ಯಾಭ್ಯಾಸವನ್ನು ಮಾಡುವ ನಿಟ್ಟಿನಲ್ಲಿ ತರಬೇತಿಯನ್ನು ನಡೆಸಲು ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.ವಿಜ್ಞಾನಿ ಎಚ್.ಎ.ಪುರುಷೋತ್ತಮ್ ರಾವ್, ಗ್ರಾ.ಪಂ ಅಧ್ಯಕ್ಷೆ ಸುವರ್ಣ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಅಬ್ದುಲ್ ನವೀದ್, ದೇವರಾಯಸುದ್ರ ಪ್ರೌಢಶಾಲೆ ಮುಖ್ಯ ಶಿಕ್ಷಕ ಜನಾರ್ಧನ್ ರಾವ್, ಯಳಗೊಂಡ್ಲಹಳ್ಳಿ ಶಾಲೆ ಮೋಹನ್ ಬಾಬು ಮತ್ತಿತರರು ಇದ್ದರು.