ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಮಕ್ಕಳ ಕೈಯಲ್ಲಿ ಮೊಬೈಲ್ ನೀಡದೆ ಗ್ರಂಥಾಲಯಕ್ಕೆ ಕರೆತಂದು ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿದ್ದಲ್ಲಿ ಅವರಲ್ಲಿ ಜ್ಞಾನಾರ್ಜನೆ ಹೆಚ್ಚುವುದಲ್ಲದೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬಹುದು ಎಂದು ಎನ್.ವೈ.ಗೋಪಾಲಕೃಷ್ಣ ಹೇಳಿದರು.ತಾಲೂಕಿನ ಮುರುಡಿ ಗ್ರಾಮದಲ್ಲಿ ಐಡಿಬಿಐ ಬ್ಯಾಂಕ್ ಹಾಗೂ ಹಳೆ ವಿದ್ಯಾರ್ಥಿಗಳು ಸಹಕಾರದೊಂದಿಗೆ ನಿರ್ಮಿಸಿರುವ ನೂತನ ಗ್ರಂಥಾಲಯ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆ ಮೊಬೈಲ್ ಗೆ ದಾಸರಾಗುತ್ತಿದ್ದಾರೆ. ಮಕ್ಕಳು ಪುಸ್ತಕಕ್ಕಿಂತ ಮೊಬೈಲ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಶಿಕ್ಷಣದಿಂದಲೇ ಗಡಿ ಗ್ರಾಮಗಳ ಅಭಿವೃದ್ಧಿ ಸಾದ್ಯ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕೆ ಹಲವಾರು ಯೋಜನೆ ಜಾರಿ ಮಾಡಿದೆ. ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿ ನಾನಾ ಸೌಲಭ್ಯ ನೀಡುತ್ತಿದೆ. ತಂದೆ ತಾಯಿ ಮಕ್ಕಳಿಗೆ ಮೊಬೈಲ್ ಕೊಡಿಸುವುದು ಬಿಟ್ಟು ಪುಸ್ತಕ ನೀಡಬೇಕು. ಪುಸ್ತಕ ಓಡುವ ಅಭಿರುಚಿ ಬೆಳೆಸಬೇಕು. ಹಳೆ ವಿದ್ಯಾರ್ಥಿಗಳು ಮತ್ತು ಬ್ಯಾಂಕಿನವರು ಗಡಿ ಗ್ರಾಮದಲ್ಲಿ ಗ್ರಣತಾಲಯ ನಿರ್ಮಿಸಿರುವುದು ಶ್ಲಾಘನೀಯ. ಇಂಥಹ ಸೇವಾ ಮನೋಭಾವನೆ ಎಲ್ಲರಲ್ಲಿ ಮೂಡಬೇಕು. ಪ್ರತಿಯೊಬ್ಬರು ಗ್ರಂಥಾಲಯಗಳ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡಲ್ಲಿ ಸಮಾಜದಲ್ಲಿ ವಿದ್ಯಾವಂತರಾಗಿ ಬಾಳಬಹುದು ಎಂದರು.
ಇದೇ ವೇಳೆ ನೂತನ ಗ್ರಂಥಾಲಯವನ್ನು ಉದ್ಘಾಟಿಸಿ ಪರಿಶೀಲನೆ ನಡೆಸಿದರು ಹಾಗೂ ಅಲ್ಲಿನ ಸಾರ್ವಜನಿಕರು ಗಡಿ ಶಾಲೆಯ ಕೊಠಡಿ ದುರಸ್ತಿ ಮತ್ತು ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಬೇಕು. ಅಲ್ಲದೆ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಪಾರ್ವತಿ, ತಾಲೂಕು ಪಂಚಾಯತ್ ಇಒ ಹನುಮಂತಪ್ಪ, ಪಿ.ಆರ್.ಡಿ ಲಿಂಗರಾಜ್, ಐಡಿಬಿಐ ಬ್ಯಾಂಕ್ ನ ಭರತ್ ಕುಮಾರ್ ಭೂಪತಿ, ಸದಸ್ಯರಾದ ಹೇಮಲತಾ, ಪಿಡಿಒ ಎಸ್‌ಟಿಎಂಸಿ ಅಧ್ಯಕ್ಷ ವೀರೇಶ್, ಪಿಡಿಒ ಗುಂಡಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ಖಾದರ್, ಮುಖಂಡರಾದ ಗುರುಲಿಂಗಪ್ಪ ಗೋವಿಂದಪ್ಪ ಅಂಜಿನಪ್ಪ ಇದ್ದರು.