ಯಲಬುರ್ಗಾ: ಪ್ರತಿಯೊಬ್ಬರೂ ಸಮಾಜ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ನಿವೃತ್ತ ಡಿಡಿಪಿಐ ಶಂಕ್ರಪ್ಪ ಗಾಂಜಿ ಹೇಳಿದರು.
ಪಟ್ಟಣದ ಸಾಯಿ ಪ್ಯಾಲೇಸ್‌ನಲ್ಲಿ ಬಸವ ಶಿವಯೋಗ ಸಮಿತಿಯಿಂದ ಹಮ್ಮಿಕೊಂಡಿದ್ದ ಮಾಸಿಕ ಬಸವಾನುಭವ ಶಿವಶರಣರ ಚಿಂತನಾಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.ಎಲ್ಲರೂ ಮೊದಲು ಸರಳ ಜೀವನ ಶೈಲಿ ರೂಢಿಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಸಮಾನತೆ ಸ್ಥಾಪಿಸಲು ಶಿವಶರಣರು ವಚನ ಕ್ರಾಂತಿ ಮೂಲಕ ತಮ್ಮದೇ ಕೊಡುಗೆ ನೀಡಿದ್ದಾರೆ. ಅಂಥ ಮಹಾತ್ಮರ ಅದರ್ಶ ಪಾಲಿಸಬೇಕು ಎಂದರು.
ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆ ಜತೆಗೆ ಸಂಸ್ಕಾರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಎಲ್ಲ ಶರಣರು ಮನುಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗ ಸ್ಫೂರ್ತಿದಾಯಕವಾಗಿವೆ ಎಂದರು.ನಿವೃತ್ತ ಪ್ರಾಚಾರ್ಯ ಕೆ.ಎಚ್.ಛತ್ರದ ಮಾತನಾಡಿ, ಬಸವ ಶಿವಯೋಗ ಸಮಿತಿಯವರು ವಿದ್ಯಾರ್ಥಿಗಳು, ಸಾಧಕರು, ನಿವೃತ್ತ ನೌಕರರನ್ನು ಗೌರವಿಸುವ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ. ಎಲ್ಲರೂ ಸಮಾಜದಲ್ಲಿ ಒಳ್ಳೆಯ ಕೆಲಸಕ್ಕೆ ಸಹಕಾರ ನೀಡಿದಾಗ ಪರೋಪಕಾರ ಮಾಡಲು ಸಾಧ್ಯವಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಶರಣ ವಚನಗಳ ಪಾಲನೆ ಮಾಡುವುದು ಕರ್ತವ್ಯವಾಗಬೇಕು ಎಂದರು.
ಬಸವ ಶಿವಯೋಗ ಸಮಿತಿ ಅಧ್ಯಕ್ಷ ಸಂಗಣ್ಣ ತೆಂಗಿನಕಾಯಿ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್ ಮಾತನಾಡಿದರು.
ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ನಿವೃತ್ತ ನೌಕರರನ್ನು ಬಸವ ಸಮಿತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಬಿಸಿಎಂ ಅಧಿಕಾರಿ ಡಾ. ಶಿವಶಂಕರ ಕಡರಕಲ್, ಸರ್ಕಾರಿ ನೌಕರರ ಸಂಘದ ಸಿದ್ದಲಿಂಗಪ್ಪ ಶ್ಯಾಗೋಟಿ, ವೀರಭದ್ರಪ್ಪ ಅಂಗಡಿ, ಅನುಸೂಯಾ ತೆಂಗಿನಕಾಯಿ, ವಿಜಯಲಕ್ಷ್ಮಿ ತೆಂಗಿನಕಾಯಿ, ದಾದಪೀರ ಮುದಗಲ್ಲ, ಬಸವರಾಜ ಕಜ್ಜಿ, ಬಸವರಾಜ ಹಾಲಕೇರಿ, ದೇವಪ್ಪ ವಾಲ್ಮೀಕಿ, ಬುಡ್ನೆಸಾಬ್ ನಾಯಕ, ಬಸವರಾಜ ಕೊಂಡಗುರಿ, ಅಶೋಕ ಮಾಲಿಪಾಟೀಲ, ಶರಣಪ್ಪ ಹಳ್ಳಿಕೇರಿ ಹಾಗೂ ವಿದ್ಯಾರ್ಥಿಗಳು ಇದ್ದರು.