ಚನ್ನಪಟ್ಟಣ: ರೈತರೇ ದೇಶದ ಬೆನ್ನೆಲುಬಾಗಿದ್ದು, ವಿದ್ಯಾರ್ಥಿಗಳು ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಬಾಲು ಪಬ್ಲಿಕ್ ಶಾಲೆ ಜಂಟಿ ಕಾರ್ಯದರ್ಶಿ ವಿ.ಬಾಲಸುಬ್ರಮಣ್ಯಂ ತಿಳಿಸಿದರು.

ಚನ್ನಪಟ್ಟಣ: ರೈತರೇ ದೇಶದ ಬೆನ್ನೆಲುಬಾಗಿದ್ದು, ವಿದ್ಯಾರ್ಥಿಗಳು ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಬಾಲು ಪಬ್ಲಿಕ್ ಶಾಲೆ ಜಂಟಿ ಕಾರ್ಯದರ್ಶಿ ವಿ.ಬಾಲಸುಬ್ರಮಣ್ಯಂ ತಿಳಿಸಿದರು.

ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕೃಷಿಯ ಕುರಿತು ಆಸಕ್ತಿ ಮೂಡಿಸುವ ಜತೆಗೆ ಅವರಿಗೆ ಕೃಷಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ೨೦೧೭ರಿಂದಲೇ ಸಾವಯವ ಕೃಷಿ ತರಬೇತಿಯನ್ನು ನೀಡಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳ ಕೈಯಿಂದಲೇ ತರಕಾರಿ ಸೊಪ್ಪುಗಳನ್ನು ಬೆಳೆಸಲಾಗುತ್ತಿದೆ. ವಿದ್ಯಾರ್ಥಿಗಳು ರೈತರನ್ನು ಗೌರವವಿಸಬೇಕು ಎಂದು ಸಾವಯುವ ಕೃಷಿಯ ಮಹತ್ವವನ್ನು

ರೈತ ಮುಖಂಡರಾದ ಕೃಷ್ಣೇಗೌಡ, ಶಾಲೆಯ ರೈತ ಪೋಷಕರಾದ ಮಹೇಂದ್ರ, ಮಹೇಶ್, ಪುಟ್ಟ ಸಿದ್ದೇಗೌಡ ಇತರರು ಕಾರ್ಯಕ್ರಮಕ್ಕೆ ಆಗಮಿಸಿ ಶಾಲೆಯ ಮೇಲ್ಚಾವಣಿಯಲ್ಲಿ ಬೆಳೆದ ಪಾಲಕ್, ಮೂಲಂಗಿ, ದಂಟು, ಸೌತೆಕಾಯಿ, ಕೋಸು, ಚೆಂಡು ಹೂವು ,ಟೊಮೋಟೋ, ಬೀನ್ಸ್, ಬೀಟ್ರೂಟ್ ಬೆಂಡೆಕಾಯಿ ಮುಂತಾದ ಹಸಿರು ತರಕಾರಿಗಳನ್ನು ಮಕ್ಕಳೊಂದಿಗೆ ಸೇರಿ ಕಟಾವು ಮಾಡಿದರು.

ಶಾಲೆಯ ಅಧ್ಯಕ್ಷೆ ಡಾ. ಕೆ .ಪಿ. ಶೈಲಜಾ, ಟ್ರಸ್ಟಿ ಕವಿತಾ ಬಾಲಸುಬ್ರಮಣ್ಯಂ, ಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತಾ, ಶಿಕ್ಷಕರಾದ ಶುಕನ್ಯಾ, ವಿವೇಕ್ ಗೀತಾ, ಉಮಾ, ಪ್ರಸನ್ನಕುಮಾರ್ ಇತರರು ಇದ್ದರು.