ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದ್ದಾರೆ.
- ಮಾದಾರ ಚೆನ್ನಯ್ಯ ಜಯಂತಿ । ಪ್ರತಿಭಾ ಪುರಸ್ಕಾರ, ಜನಜಾಗೃತಿ ಸಮಾವೇಶ
- - -ಕನ್ನಡಪ್ರಭ ವಾರ್ತೆ ಹರಿಹರ
ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.ಮಾದಾರ ಚೆನ್ನಯ್ಯ ಜಯಂತಿ ಅಂಗವಾಗಿ ತಾಲೂಕು ಮಾದಿಗ ಸಮಾಜ ವತಿಯಿಂದ ನಗರದ ಕಾಟ್ವೆ ಸಮುದಾಯ ಭವನದಲ್ಲಿ ಸಮಾಜದ 2024-25 ಹಾಗೂ 25-26ನೇ ಸಾಲಿನ ಎಸ್ ಎಸ್ ಎಲ್ ಹಾಗೂ ಪಿಯುಸಿ ಯಲ್ಲಿ ಶೇ 75ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ಕಿಟ್ ವಿತರಣಾ ಹಾಗೂ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಸಂವಿಧಾನದ ಮೂಲಕ ಸರ್ವಸ್ವವನ್ನು ನೀಡಿದ್ದಾರೆ. ಅದರ ಸಮಗ್ರ ಲಾಭವನ್ನು ಪಡೆಯಲು ಶಿಕ್ಷಣವೇ ಶಕ್ತಿಯಾಗಿದೆ. ಆದ್ದರಿಂದ ಸರ್ವರೂ ಶಿಕ್ಷಣವಂತರಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಮಾದಿಗ ಸಮಾಜ ಅಧ್ಯಕ್ಷ ಎಂ.ಎಸ್. ಆನಂದಕುಮಾರ್ ಮಾತನಾಡಿ, 7 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಬಂದಿದೆ. ಈ ವರ್ಷ ಎಸ್.ಎಸ್ ಎಲ್.ಸಿ. ಹಾಗೂ ಪಿ.ಯು.ಸಿ.ಯ ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸಿದ 65 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, 300 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕಿಟ್ ವಿತರಿಸಿದ್ದೇವೆ. ಮಾದಿಗ ಸಮಾಜದಲ್ಲಿ ಜನಿಸಿರುವ ಪ್ರಜ್ಞಾವಂತರೆಲ್ಲಾ ನಮ್ಮ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದು, ಅದಕ್ಕೆ ಸರ್ವರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದರು.ಒಳಮೀಸಲಾತಿ, ಶಿಕ್ಷಣ ಮತ್ತು ಉದ್ಯೋಗದ ಕುರಿತು ಹೊನ್ನಾಳಿಯ ನ್ಯಾಯವಾದಿ ಎಂ.ಸಿ. ಮೋಹನ್ ಕುಮಾರ್ ವಿಶೇಷ ಉಪನ್ಯಾಸ ನೀಡಿದರು. ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರವಿನಾರಾಯಣ ಶಿಕ್ಷಣ ಮಹತ್ವದ ಕುರಿತು ಮಾತನಾಡಿದರು.
ರಾಜ್ಯ ಮರಾಠ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಚ್. ಮರಿಯೋಜಿ ರಾವ್ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್‌ಗಳನ್ನು ವಿತರಣೆ ಮಾಡಿದರು. ಮಾಜಿ ಶಾಸಕ ಎಸ್.ರಾಮಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮುಖಂಡ ಹಾಲೇಶಗೌಡ, ತಾಲೂಕು ಮಾದಿಗ ಸಮಾಜದ ಗೌರವಾಧ್ಯಕ್ಷ ಎಲ್.ಬಿ. ಹನುಮಂತಪ್ಪ, ಮಾದರ ಚೆನ್ನಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೆ. ಭೂಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಎಂ.ಬಿ.ಧರ್ಮದತ್, ಉಪಾಧ್ಯಕ್ಷ ಹನುಮಂತಪ್ಪ ದೊಡ್ಮನೆ ಹಳ್ಳಿಹಾಳ್, ಎಂ.ಎಸ್. ಶ್ರೀನಿವಾಸ್, ಕಾರ್ಯದರ್ಶಿ ಎಚ್.ಶಿವಪ್ಪ, ನಿರ್ದೇಶಕರಾದ ಬಿ.ಡಿ.ಬಸವರಾಜಪ್ಪ ಕೊಕ್ಕನೂರು, ಎಚ್.ಎಂ. ಹನುಮಂತಪ್ಪ ಬನ್ನಿಕೋಡ್, ಎ.ಕೆ.ನಾಗೇಂದ್ರಪ್ಪ ರಾಜನಹಳ್ಳಿ, ಚೌಡಪ್ಪ ಹೊಳೆಸಿರಿಗೆರೆ ಮುಂತಾದವರು ಉಪಸ್ಥಿತರಿದ್ದರು.
- - --30ಎಚ್.ಆರ್‌ಆರ್02:
ಹರಿಹರದ ಕಾಟ್ವೆ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಬಿ.ಹರೀಶ್ ಉದ್ಘಾಟಿಸಿದರು.