ಸಾರಾಂಶ
ಮಣೂರು ಮಹಾಲಿಂಗೇಶ್ವರ ಕಲ್ಯಾಣಮಂಟಪದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ ನಡೆಯಿತು. ಕೆಎಂಎಫ್ ವಿಸ್ತರಣಾಧಿಕಾರಿ ಸರಸ್ವತಿ ಹೈನುಗಾರಿಗೆ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಕೋಟ
ಜಿಲ್ಲೆಯಲ್ಲಿ ಐಟಿಬಿಟಿ ಕಂಪನಿಗಳು ಕಾಲಿರಿಸಿದರೆ ಹೈನುಗಾರಿಕೆ ತನ್ನಿಂತಾನೆ ಅಭಿವೃದ್ಧಿಗೊಳ್ಳುತ್ತದೆ ಎಂದು ಕೆಎಂಎಫ್ ವಿಸ್ತರಣಾಧಿಕಾರಿ ಸರಸ್ವತಿ ಹೇಳಿದರು.ಅವರು ಇಲ್ಲಿನ ಮಣೂರು ಮಹಾಲಿಂಗೇಶ್ವರ ಕಲ್ಯಾಣಮಂಟಪದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಹೈನುಗಾರಿಗೆ ಮಾಹಿತಿ ನೀಡಿದರು.ಪ್ರಸ್ತುತ ಹೈನುಗಾರಿಕೆ ಉದ್ಯಮ ಕುಂಠಿತಗೊಳ್ಳುತ್ತಿದೆ, ಮಕ್ಕಳು ಶಿಕ್ಷಣ ಪಡೆದು ಪರವೂರಿಗೆ ಉದ್ಯೋಗಕ್ಕೆ ತೆರಳಿದರೆ ಹೆತ್ತವರು ಹೈನುಗಾರಿಕೆ ಕೈಬಿಡುತ್ತಿದ್ದಾರೆ. ಇದಕ್ಕೆ ಪರಿಹಾರ ಎಂದರೆ ಜಿಲ್ಲೆಯಲ್ಲಿ ಐಟಿಬಿಟಿ ಕಂಪನಿಗಳು ನೆಲೆಯಾದರೆ ಅದರಲ್ಲಿ ಹೈನುಗಾರರ ಮಕ್ಕಳು ಕಾರ್ಯನಿರ್ವಹಿಸಿದರೆ ಮನೆಯವರು ಸ್ವಾವಲಂಬಿ ಬದುಕನ್ನು ಹೈನುಗಾರಿಕೆ ಮೂಲಕ ಕಂಡುಕೊಳ್ಳುತ್ತಾರೆ ಎಂದರಲ್ಲದೆ ಹೈನುಗಾರಿಕೆ ಬೇಕಾಗುವ ಸವಲತ್ತು, ಅನುಸರಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿ ಸಂಚಾರಿ ವೈದ್ಯಕೀಯ ಸೇವೆ ಪಡೆದುಕೊಳ್ಳಲು ಸರ್ಕಾರ ೧೯೬೨ ಕರೆ ಮಾಡಲು ಸಲಹೆ ನೀಡಿದರು.ಇದೇ ವೇಳೆ ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಹೈನುಗಾರರನ್ನು ಬಹುಮಾನ ನೀಡಿ ಗೌರವಿಸಲಾಯಿತು.ಸಭೆಯಲ್ಲಿ ಸಂಘ ಉಪಾಧ್ಯಕ್ಷ ಶ್ರೀಕಾಂತ್, ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಕೃಷ್ಣ ದೇವಾಡಿಗ ವರದಿ ಮಂಡಿಸಿದರು. ಇತ್ತೀಚಿಗೆ ನಿಧನರಾದ ಸಂಘದ ಸದಸ್ಯರಾದ ಸದಾಶಿವ ಹೊಳ್ಳ, ರಾಮಕೃಷ್ಣ ಆಚಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಿಇಓ ರಾಜೇಶ್ ನಡಾವಳಿ ಬಗ್ಗೆ ವಿವರಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸಭೆಯನ್ನು ನಿರ್ವಹಿಸಿದರು.