ಮೌಢ್ಯ ರಹಿತ ಆಚರಣೆ ತ್ಯಜಿಸಿದಾಗ ಸಮಾಜದ ಅಭಿವೃದ್ಧಿ

| Published : Dec 26 2023, 01:30 AM IST / Updated: Dec 26 2023, 01:31 AM IST

ಸಾರಾಂಶ

ಸಮಾಜದಲ್ಲಿ ಬೆಳವಣಿಗೆಯಾಗಬೇಕೆಂದರೆ ಸಮಾಜದಲ್ಲಿ ನಡೆಯುವ ಮೌಢ್ಯ ಚಟುವಟಿಕೆಗಳನ್ನು ತ್ಯಜಿಸಬೇಕು.

ಹೊನ್ನಾಳಿ: ಕುರುಬ ಸಮಾಜ ಅಭಿವೃದ್ಧಿ ಕಾಣಬೇಕಾದರೆ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮೌಢ್ಯದಿಂದ ಕೂಡಿದ ಹಬ್ಬ ಆಚರಣೆಗಳಿಂದ ದೂರವಿದ್ದು, ಪ್ರತಿಯೊಬ್ಬರೂ ಕೂಡ ಸ್ವ-ಪ್ರತಿಷ್ಠೆ ತೊರೆದು ಸಂಘಟಿತರಾಗಬೇಕು ಎಂದು ಕನಕ ಗುರುಪೀಠದ ಜಗದ್ಗುರು ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಕನಕ ರಂಗ ಮಂದಿರದ ಅವರಣದಲ್ಲಿ ಸೋಮವಾರ ಆವಳಿ ತಾಲೂಕುಗಳ ಕರುಬ ಸಮಾಜದವತಿಯಿಂದ ಆಯೋಜಿಸಲಾಗಿದ್ದ ದಾಸ ಶ್ರೇಷ್ಠ ಕನಕದಾಸರ 536ನೇ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.

ಸಮಾದ ಪ್ರತಿಯೊಬ್ಬರಲ್ಲಿ ಕೂಡ ಒಗ್ಗಟ್ಟಿನ ಮನೋಭಾವನೆ ಬೆಳಿಸಿಕೊಂಡು ಆರ್ಥಿಕತೆಗೆ ಪೆಟ್ಟುಕೊಡುವಂತಹ ಮೌಢ್ಯದಿಂದ ಕೂಡಿದ ಹಬ್ಬ ಆಚರಣೆಗಳಿಂದ ದೂರವಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂುಲಕ ತಾವುಗಳು ಇತರೆ ಸಮಾಜಗಳಂತೆ ಆರ್ಥಿಕ, ಶೈಕ್ಷಣಿಕವಾಗಿ, ಸಮಾಜಿಕವಾಗಿ ಆಭಿವೃದ್ಧಿಹೊಂದುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಬಾಯಿ ಚಪಲ ತೀರಿಸುವ ಹಬ್ಬಗಳಿಗೆ ಬ್ರೇಕ್ ಹಾಕಬೇಕು ಸಾಲ ಮಾಡಿ ಹಬ್ಬ ಆಚರಣೆಗಳನ್ನು ಮಾಡಬಾರದು ಇದರಿಂದ ಸಮಾಜದ ಕುಟುಂಬಗಳು ಆರ್ಥಿಕವಾಗಿ ಹಿಂದುಳಿಯುವುದು ತಪ್ಪುತ್ತದೆ ಎಂದ ಅವರು ಇಂತಹ ದುಂದು ಖರ್ಚುಗಳ ಹಬ್ಬಗಳ ಆಚರಣೆ ಕೈಬಿಟ್ಟು ಇದೇ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿದ್ದೇ ಆದಲ್ಲಿ ಇಡೀ ಸಮಾಜ ಉನ್ನತ ಸ್ಥಿತಿಗೆ ತಪ್ಪುವಲ್ಲಿ ಯಾವುದೇ ಆನುಮಾನವಿಲ್ಲ ಎಂದು ಹೇಳಿದರು.

ಸಮಾಜ ನನಗೆ ಏನು ಕೊಡುತ್ತದೆ ಎನ್ನುವುದು ಮುಖ್ಯವಲ್ಲ ತಾವು ಸಮಾಜಕ್ಕೆ ಏನನ್ನು ಕೂಡಬಲ್ಲೆವು ಎಂಬ ಅರಿವು ಮುಖ್ಯವಾಗುತ್ತದೆ ಕರುಬ ಸಮಾಜದ ಸಹೋದರ ಸಮಾಜವಾಗಿರುವ ಕುಂಚಿಟಿಗ ಸಮಾಜ ಸಣ್ಣದಾಗಿದ್ದರೂ ಕೂಡ ಆ ಸಮಾಜದಲ್ಲಿನ ಜನರು ಎಲ್ಲಾ ಸಮಾಜದ ಮುಖಂಡರನ್ನು ಬಳಿಸಿಕೊಂಡು ಕೋಟಿ ಕೋಟಿ ಹಣದಲ್ಲಿ ಸುಂದರವಾದ ಸಮುದಾಯ ಭವನ ನಿರ್ಮಿಸಲು ಮಂದಾಗಿದೆ, ಆದರೆ ಸಂಖ್ಯೆಯಲ್ಲಿ ದೊಡ್ಡ ಸಮಾಜವಾಗಿರುವ ಕುರುಬ ಸಮಾಜ ಕನಕ ಭವನ ನಿರ್ಮಾಣಕ್ಕಾಗಿ ಒಂದು ನಿವೇಶ ಮಂಜೂರು ಮಾಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ ಈ ಬಗ್ಗೆ ಸಮಾಜದ ಪ್ರಮುಖರು ಚಿಂತಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂಡನ್ನಗಲಿದೆ ಗೋವು ಹುಲಿಗೆ ಮೇವು ಎನ್ನುವ ಸ್ಥಿತಿಗೆ ಹೊನ್ನಾಳಿ ಕುರುಬ ಸಮಾಜದ ಪರಿಸ್ಥಿತಿಯಾಗಿದೆ ಒಗ್ಗಟ್ಟು ತೋರಿಸದಿದ್ದರೆ ಇದರ ಲಾಭ ಇತರರು ಪಡೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದು ಹೇಳಿದರು. .

ರಾಷ್ಟ್ರದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿರುವ ಕುರುಬ ಸಮಾಜ ಸರಿಸುಮಾರ 12 ಕೋಟಿಗೂ ಆಧಿಕ ಸಂಖ್ಯೆಯಲ್ಲಿದೆ ಎಂದು ಹೇಳಿದರು.

ನೆನೆಗುದಿಗೆ ಬಿದ್ದಿರುವ ಸಮಾಜದ ನಿವೇಶನ ಮಂಜೂರಾತಿಯನ್ನು ಸಮಾಜದ ಮುಖಂಡರು ಈ ಬಗ್ಗೆ ಮಾಹಿತಿ ನೀಡಿದರೆ ತಾವು ಸ್ವಾಮೀಜಿಯವರ ಸಹಕಾರದಿಂದ ಸರ್ಕಾರದ ಹಂತದಲ್ಲಿ ಗಂಭೀರ ಪ್ರಯತ್ನ ನಡೆಸುವ ಭರವಸೆ ನೀಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಎಚ್.ಬಿ.ಮಂಜಪ್ಪ ಮಾತನಾಡಿ, ಕನಕಜಯಂತಿ ಉದ್ದೇಶ ಸಮಾಜದ ಸಂಘಟನೆಗಾಗಿ ಮಾಡಲಾಗುತ್ತಿದ ಇದಕ್ಕೆ ಸಮಾಜದ ಪ್ರತಿಯೊಬ್ಬರು ಭಿನ್ನಾಭಿಪ್ರಾಯಗಳನ್ನು ಮರೆತು ಒಂದುಗೋಡಿ ಸಮಾಜ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾಗಿದೆ ಪಟ್ಟಣದಲ್ಲಿ ಸಿ.ಎ. ನಿವೇಶನಕ್ಕಾಗಿ ಪುರಸಭೆಯಿಂದ ನಡವಳಿ ಮಾಡಿ ಶಿಫಾರಸ್ಸು ಮಾಡಬೇಕಾಗಿದ್ದು, ಇದು ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಹಾಲಿ ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಡಾ.ಡಿ.ಬಿ.ಗಂಗಪ್ಪ ಅವರು ಮಾತನಾಡಿ, ನಿವೇಶದ ಬಗ್ಗೆ ನಾವು ಪ್ರಮಾಣಿಕ ಪ್ರಯತ್ನ ಮಾಡಿದ್ದು ಕೆಲ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀದೇವಿಧರ್ಮಪ್ಪ, ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ಸಮಾರಂಭದಲ್ಲಿ ಅವಳಿ ತಾಲೂಕುಗಳ ಸಮಾಜದ ಅಧ್ಯಕ್ಷ ಎಂ.ಸಿ.ಮೋಹನ್, ಎಂ.ಆರ್.ಮಹೇಶ್, ಧರ್ಮಪ್ಪ, ಎಚ್.ಬಿ.ಗಿಡ್ಡಪ್ಪ, ಎಚ್.ಬಿ.ಅಣ್ಣಪ್ಬ, ಎಚ್.ಎ.ರಾಜಪ್ಪ, ತೆಂಗಿನಮರದ ಮಾದಪ್ಪ, ಸಮಾಜದ ಗೌರವಾಧ್ಯಕ್ಷ ಪ್ರಕಾಶ್ ಆರುಂಡಿ, ಎಚ್ಎ.ನರಸಿಂಹಪ್ಪ, ಸೇರಿದಂತೆ ಹಲವಾರು ಜನ ಮುಖಂಡರು ಇದ್ದರು.

ಎನ್.ಆಂಜನೇಯ ಸ್ವಾಗತಿಸಿದರು. ದೊಂಕತ್ತಿ ನಾಗರಾಜ್ ನಿರೂಪಿಸಿದರು. ಮುಖಂಡ ಎಂ.ಆರ್.ಮಹೇಶ್ ಪ್ರಸ್ತಾವಿಕವಾಗಿ ಮಾತನಾಡಿದರು.

ಸ್ವಾಮಿಯವರನ್ನು ರಥದಲ್ಲಿ ಪಟ್ಟಣದ ಟಿ.ಬಿ.ವೃತ್ತದಿಂದ ವಿವಿಧ ವಾದ್ಯಗಳೊಂದಿಗೆ ಮೇರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಅವಳಿ ತಾಲೂಕುಗಳ ಕುರುಬ ಸಮಾಜ ಪದಾಧಿಕಾರಿಗಳು ಭಾಗವಹಿಸಿದ್ದರು.