ದೇಶದ ಅಭಿವೃದ್ಧಿ, ಕಾಂಗ್ರೆಸ್ ಫ್ರೀ ಸ್ಕಿಂಗಳ ನಡುವೆ ಚುನಾವಣೆ: ಮಂಗಳ ನವೀನ್‌ಕುಮಾರ್

| Published : Mar 25 2024, 12:54 AM IST

ದೇಶದ ಅಭಿವೃದ್ಧಿ, ಕಾಂಗ್ರೆಸ್ ಫ್ರೀ ಸ್ಕಿಂಗಳ ನಡುವೆ ಚುನಾವಣೆ: ಮಂಗಳ ನವೀನ್‌ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಪ್ರಧಾನಿ ಮೋದಿ ಅವರು ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಲು ಲೋಕಸಭೆಯಲ್ಲಿ ಶೇ.22ರಷ್ಟು ಮೀಸಲಾತಿ ನೀಡುವ ಮೂಲಕ ಮಹಿಳೆಯರು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈ ಲೋಕಸಭಾ ಚುನಾವಣೆ ದೇಶದ ಅಭಿವೃದ್ಧಿ ಮತ್ತು ಕಾಂಗ್ರೆಸ್‌ನ ಫ್ರೀ ಸ್ಕಿಂಗಳ ನಡುವೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಲೋಕಸಭಾ ಚುನಾವಣೆ ದೇಶದ ಅಭಿವೃದ್ಧಿ ಮತ್ತು ಕಾಂಗ್ರೆಸ್‌ನ ಫ್ರೀ ಸ್ಕಿಂಗಳ ನಡುವೆ ನಡೆಯುತ್ತಿದೆ. ಜನರು ಉಚಿತ ಯೋಜನೆಗಳಿಗೆ ಮರಳಾಗದೆ ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚ್ ಅಧ್ಯಕ್ಷೆ ಮಂಗಳ ನವೀನ್‌ಕುಮಾರ್ ಹೇಳಿದರು.

ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಘಟನೆ ಹಾಗೂ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕುರಿತು ಮನೆಮನೆಗೆ ಭೇಟಿಕೊಟ್ಟು ಜನರಿಗೆ ಅರಿವು ಮೂಡಿಸಿ ಮಾತನಾಡಿದರು.

ದೇಶದಲ್ಲಿ ಪ್ರಧಾನಿ ಮೋದಿ ಅವರು ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಲು ಲೋಕಸಭೆಯಲ್ಲಿ ಶೇ.22ರಷ್ಟು ಮೀಸಲಾತಿ ನೀಡುವ ಮೂಲಕ ಮಹಿಳೆಯರು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಸ್ವಚ್ಛ ಭಾರತ್ ಅಭಿಮಾನದಡಿ ಮನೆಮನೆಗೆ ಶೌಚಾಲಯ ನಿರ್ಮಿಸಿ ಕೊಟ್ಟಿದೆ. ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಸಬ್ಸಡಿಯಲ್ಲಿ ಗ್ಯಾಸ್ ವಿತರಿಸುತ್ತಿದೆ. ಕಿಸಾನ್ ಸನ್ಮಾನ್ ಯೋಜನೆಯಡಿ ರೈತರ ಖಾತೆಗೆ ನೇರವಾಗಿ ಹಣ ನೀಡುತ್ತಿದೆ. ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ, ಮುದ್ರಾ ಯೋಜನೆಯಡಿ ಸಾಲಸೌಲಭ್ಯ ನೀಡಿದೆ ಎಂದರು.

ಇನ್ನೂ ಜನರಿಗೆ ತಲಾ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿ ಅಕ್ಕಿ ನೀಡಿದೆ ಜನರಿಗೆ 5 ಕೆಜಿಗೆ ಅಕ್ಕಿಗೆ ಹಣ ನೀಡುತ್ತಿದೆ. ಅದು ಸಹ ಸರಿಯಾಗಿ ಜನರಿಗೆ ತಲುಪುತ್ತಿಲ್ಲ ಎಂದು ಕಿಡಿಕಾರಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರು ಸಹ ಅವರಿಗೆ ಮತ ಕೊಟ್ಟು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸುವ ಮೂಲಕ ಮೋದಿ ಅವರು 3ನೇ ಬಾರಿಗೆ ದೇಶದಲ್ಲಿ ಆಳ್ವಿಕೆ ನಡೆಸಲು ಸಹಕಾರಿಯಾಗಬೇಕು ಎಂದರು.

ತಾಲೂಕಿನ ಕುರಹಟ್ಟಿ, ಹೆಗ್ಗಡಹಳ್ಳಿ, ಚಿಕ್ಕಮರಳಿ, ಕನಗನಮರಡಿ, ವದೆಸಮುದ್ರ ಹಾಗೂ ದುದ್ದ ಹೋಬಳಿಯ ಗೊರವಾಲೆ ಗ್ರಾಮದ ಮನೆಮನೆಗಳಿಗೆ ಭೇಟಿಕೊಟ್ಟು ಕೇಂದ್ರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳ ಶಂಕರ್‌ನಾಗ್, ಸವಿತಪುಟ್ಟರಾಜು, ನಿರ್ಮಲ್‌ ರಮೇಶ್‌ರಾಜ್ ಸೇರಿದಂತೆ ಹಲವರು ಇದ್ದರು.