ಕೃಷಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ: ಆಚಾರ್ಯ

| Published : Mar 02 2024, 01:46 AM IST

ಸಾರಾಂಶ

ಇಳಕಲ್ಲ: ಇಂದು ನಾವು ಕೃಷಿ ಕೇತ್ರದ ಅಭಿವೃದ್ದಿಗಾಗಿ ಕಾರ್ಯ ಮಾಡುತ್ತಿದ್ದೇವೆ. ಇಲ್ಲಿ ಕೃಷಿ ಅಭಿವೃದ್ಧಿಯ ಗುರಿ ಇಟ್ಟುಕೊಂಡು ಸೇವೆ ಮಾಡಿದರೆ ರೈತರ ಹಾಗೂ ದೇಶದ ಅಭಿವೃದ್ಧಿ ಮಾಡಿದಂತೆ. ಅದಕ್ಕಾಗಿ ಪ್ರತಿಯೊಬ್ಬ ಗೊಬ್ಬರ ವ್ಯಾಪಾರಿಗಳು ಕೃಷಿ ಅಭಿವೃದ್ಧಿಗೆ ಕಾರ್ಯ ಮಾಡಬೇಕು ಎಂದು ಗಂಗವಾತಿಯ ಅಭಿಷೇಕ ಅಗ್ರೋ ವಿತರಕ ಸಂಸ್ಥೆಯ ಮಾಲೀಕ ಆಚಾರ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲಇಂದು ನಾವು ಕೃಷಿ ಕೇತ್ರದ ಅಭಿವೃದ್ದಿಗಾಗಿ ಕಾರ್ಯ ಮಾಡುತ್ತಿದ್ದೇವೆ. ಇಲ್ಲಿ ಕೃಷಿ ಅಭಿವೃದ್ಧಿಯ ಗುರಿ ಇಟ್ಟುಕೊಂಡು ಸೇವೆ ಮಾಡಿದರೆ ರೈತರ ಹಾಗೂ ದೇಶದ ಅಭಿವೃದ್ಧಿ ಮಾಡಿದಂತೆ. ಅದಕ್ಕಾಗಿ ಪ್ರತಿಯೊಬ್ಬ ಗೊಬ್ಬರ ವ್ಯಾಪಾರಿಗಳು ಕೃಷಿ ಅಭಿವೃದ್ಧಿಗೆ ಕಾರ್ಯ ಮಾಡಬೇಕು ಎಂದು ಗಂಗವಾತಿಯ ಅಭಿಷೇಕ ಅಗ್ರೋ ವಿತರಕ ಸಂಸ್ಥೆಯ ಮಾಲೀಕ ಆಚಾರ್ಯ ತಿಳಿಸಿದರು.ಇಲ್ಲಿಯ ಪುಷ್ಟರ ಸಭಾಭವನದಲ್ಲಿ ಇಳಕಲ್ಲ ಮತ್ತು ಹುನಗುಂದ ತಾಲೂಕು ಗೊಬ್ಬರ ಹಾಗೂ ಔಷಧ ವ್ಯಾಪಾರಸ್ಥರ ಒಂದು ದಿನದ ಸಭೆ ಉದ್ದೇಶಿಸಿ ಮಾತನಾಡಿ, ತಮ್ಮ ಕಂಪನಿಯವರ ಗುಣಮಟ್ಟದ ಔಷಧಗಳನ್ನು ತಯಾರಿಸುತ್ತಿದ್ದಾರೆ. ರೈತರಿಗೆ ಅವುಗಳ ಮಹತ್ವ ಮನವರಿಕೆ ಮಾಡಿ ವ್ಯಾಪಾರ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಇಳಕಲ್ಲ ಮತ್ತು ಹುನಗುಂದ ತಾಲೂಕು ಗೊಬ್ಬರ ಮತ್ತು ಔಷಧ ವಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಮಠದ ಮಾತನಾಡಿದರು. ಸಂಘದ ಕಾರ್ಯದರ್ಶಿ ಮಹೇಶ ಪಾಟೀಲ, ಸುರೇಶ ತೆಗ್ಗಿ. ಬಸವರಾಜ ಹೋರಪ್ಯಾಟಿ, ಶರಣು ಮನ್ನಿ. ಶರಣಪ್ಪ ಹೊದ್ಲೂರ. ಆನಂದ ಕರಡಿ, ಗುರು ಸಜ್ಜನ, ಬೆಳ್ಳಪ್ಪ ಕಮತಗಿ ಇತರರು ಇದ್ದರು. ಇಳಕಲ್ಲ ಹಾಗೂ ಹುನಗುಂದ ತಾಲೂಕು ಗೊಬ್ಬರ ಮತ್ತು ಔಷಧ ವ್ಯಾಪಾರಸ್ತರ ಸಂಘ ದಿಂದ ಗಂಗಾವತಿಯ ಆಚಾರ್ಯ ಇವರನ್ನು ಗೌರವಿಸಿ ಸತ್ಕರಿಸಲಾಯಿತು. --