ಕುಟುಂಬದ ಅಭಿವೃದ್ಧಿಯೇ ಗಾಂಗ್ರೆಸ್‌ ಗುರಿ: ಭಗವಂತ ಖೂಬಾ ಟೀಕೆ

| Published : Apr 08 2024, 01:03 AM IST

ಕುಟುಂಬದ ಅಭಿವೃದ್ಧಿಯೇ ಗಾಂಗ್ರೆಸ್‌ ಗುರಿ: ಭಗವಂತ ಖೂಬಾ ಟೀಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೇಸ್ ಕೇವಲ ಕುಟುಂಬದ ಅಭಿವೃದ್ಧಿ ಮಾಡುತ್ತಿದೆ, ಈ ಚುನಾವಣೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು, ಕಾಂಗ್ರೆಸ್‌ಸ್ ನಾಯಕರ ಮಕ್ಕಳು, ಅಳಿಯಂದಿರು ಆಗಿದ್ದಾರೆ, ಯಾಕೆಂದರೆ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗೆ ಬೆಲೆಯಿಲ್ಲಾ, ಹಾಗಾಗಿ ೬೫ ವರ್ಷ ದೇಶವಾಳಿದ ಕಾಂಗ್ರೆಸ್‌ನಿಂದ ಕೇವಲ ಕುಟುಂಬದ ಅಭಿವೃದ್ಧಿಯಾಗಿದೆ ಹೊರತು ದೇಶದ ಅಭಿವೃದ್ಧಿಯಾಗಿಲ್ಲ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ದೇಶದಲ್ಲಿ ೬೦ ವರ್ಷಗಳ ಕಾಲ ಗಾಂಧಿ ಪರಿವಾರದ ಕೈಯಲ್ಲಿ ಉಳಿದು, ದೇಶದ ಆರ್ಥಿಕ ಪರಿಸ್ಥಿತಿ, ಜನರ ರಕ್ಷಣೆ, ಸ್ವಾಭಿಮಾನ ಎಲ್ಲದಕ್ಕೂ ಕೊಡಲಿ ಪೆಟ್ಟು ಬಿದ್ದಿತ್ತು, ಆದರೆ ೨೦೧೪ರಿಂದ ದೇಶದಲ್ಲಿ ಮೋದಿಜಿಯವರ ಆಡಳಿತ ಪ್ರಾರಂಭವಾದ ಮೇಲೆ, ದೇಶದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿವೆ ಹಾಗೂ ದೇಶ ಸಮೃದ್ಧಿಯತ್ತ ಸಾಗುತ್ತಿದೆ, ತಾವೇಲ್ಲರೂ ಮತ್ತೊಮ್ಮೆ ಮೋದಿಜಿಯವರ ಶಕ್ತಿ ವೃದ್ಧಿಸಲು ಶ್ರಮಿಸಬೇಕೆಂದು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಬೀದರ್‌ ಲೋಕಸಭಾ ಕ್ಷೇತ್ರದ ಕಾಳಗಿ ಮಂಡಲದ ಟೆಂಗಳಿ ಮಹಾಶಕ್ತಿ ಕೇಂದ್ರದ ಕೊಡದೂರ ಗ್ರಾಮ ಹಾಗೂ ಅರಣಕಲ್ ಶಕ್ತಿ ಕೇಂದ್ರದ ಅರಣಕಲ್ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೇಸ್ ಕೇವಲ ಕುಟುಂಬದ ಅಭಿವೃದ್ಧಿ ಮಾಡುತ್ತಿದೆ, ಈ ಚುನಾವಣೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು, ಕಾಂಗ್ರೆಸ್‌ಸ್ ನಾಯಕರ ಮಕ್ಕಳು, ಅಳಿಯಂದಿರು ಆಗಿದ್ದಾರೆ, ಯಾಕೆಂದರೆ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗೆ ಬೆಲೆಯಿಲ್ಲಾ, ಹಾಗಾಗಿ ೬೫ ವರ್ಷ ದೇಶವಾಳಿದ ಕಾಂಗ್ರೆಸ್‌ನಿಂದ ಕೇವಲ ಕುಟುಂಬದ ಅಭಿವೃದ್ಧಿಯಾಗಿದೆ ಹೊರತು ದೇಶದ ಅಭಿವೃದ್ಧಿಯಾಗಿಲ್ಲ ಎಂದರು.

ಚಿಂಚೋಳಿ-ಕಾಳಗಿ ತಾಲೂಕಿನ ಅಭಿವೃದ್ಧಿಗೆ ನಾನು ಹಗಲಿರುಳು ಶ್ರಮಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿಯೂ ಇನ್ನು ಹೆಚ್ಚಿನ ಕೆಲಸ ಮಾಡಿ, ಚಿಂಚೋಳಿಯನ್ನು ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿಯನ್ನು ತೆಗೆಯುವ ಜವಬ್ದಾರಿ ನನ್ನದು ಎಂದು ವಿಶ್ವಾಸ ನೀಡಿದರು.

ಸ್ಥಳಿಯ ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ, ಭಗವಂತ ಖೂಬಾ ಅವರು ಸಂಸದರಾದ ಮೇಲೆ ಅನೇಕ ಅಭಿವೃದ್ಧಿ ಕೆಲಸಗಳು ಈ ಭಾಗದಲ್ಲಾಗಿವೆ, ನಾವೆಲ್ಲರೂ ಮೋದಿಯವರ ಹಾಗೂ ಖೂಬಾ ಅವರ ಸಾಧನೆಗಳನ್ನು ಜನರಿಗೆ ತಲುಪಿಸಬೇಕು, ಭಾರತ ಮತ್ತಷ್ಟು ಬಲಿಷ್ಠ ದೇಶವಾಗಲು ಪ್ರಧಾನಿಯಾಗಿ ನರೇಂದ್ರ ಮೋದಿಯವರು ಆಗಬೇಕಾಗಿರುವುದು ಅವಶ್ಯಕವಾಗಿದೆ, ಖೂಬಾ ಅವರ ಗೆಲುವಿನಿಂದ ಕ್ಷೇತ್ರದ ಅಭಿವೃದ್ಧಿ ಹಾಗೂ ಮೋದಿಯವರಿಗೆ ಇನ್ನು ಹೆಚ್ಚಿನ ಶಕ್ತಿ ಬರಲಿದೆ ಎಂದರು.

ವಿಧಾನಪರಿಷ್ಯತ ಸದಸ್ಯರಾದ ಸುನಿಲ್ ವಲ್ಯಾಪೂರೆ ಮಾತನಾಡಿ, ಭಗವಂತ ಖೂಬಾರವರು ಸರಳ ವ್ಯಕ್ತಿತ್ವವುಳ್ಳವರಾಗಿದ್ದಾರೆ, ಜನರಿಗೆ ಬೇಗ ಸ್ಪಂದನೆ ಮಾಡುತ್ತಾರೆ, ಎಂದು ಯಾರ ಮಧ್ಯೆಯೂ ಭೇದ ಭಾವ ಮಾಡುವುದಿಲ್ಲ, ಎಲ್ಲರ ಕೆಲಸಗಳು ಮಾಡಿಕೊಡುತ್ತಾರೆ, ನಾವೇಲ್ಲರೂ ಒಂದೆ ಮನಸ್ಸಿನಿಂದ ಕೆಲಸ ಮಾಡಿ, ಈ ಚುನಾವಣೆಯಲ್ಲಿ ಭಗವಂತ ಖೂಬಾರವರನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ನಮ್ಮೇಲ್ಲರದಾಗಿದೆ ಎಂದರು.

ತಾಲೂಕು ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಟಿ, ಮುಖಂಡರಾದ ಗಿರಿಶ ನಾಟಿಕಾರ್, ಶಶಿಕಲಾ ಟೆಂಗಳಿ, ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ಭಿಮಶೇಟ್ಟಿ ಮುರುಡಾ, ರಾಮು ರಾಠೋಡ, ಶಿವರಾಜ ಪಾಟೀಲ್, ಮಹೇಂದ್ರ ಪೂಜಾರಿ, ಶಿವಕುಮಾರ ಪಾಟೀಲ್ ಹೇರೂರ, ರವಿ ಸಿಂಗೆ, ಶಿವಕುಮಾರ ಮುಕರಂಬಿ, ಶರಣು ಮೊಳಕೇರಿ, ಶರಣು ಚೆಂಗಟಾ, ಮಲ್ಲಿನಾಥ ಪಾಟೀಲ್, ಶಂಕರ ಚೋಕಾ ಹಾಗೂ ಎಲ್ಲಾ ಶಕ್ತಿ ಕೇಂದ್ರ ಮತ್ತು ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.