ಮೋದಿಯಿಂದ ಅಭಿವೃದ್ಧಿಗೆ ವೇಗ: ಎಂಎಲ್‌ಸಿ ಚಿದಾನಂದ

| Published : Sep 18 2024, 01:49 AM IST

ಸಾರಾಂಶ

ಮೋದಿಯಿಂದ ಅಭಿವೃದ್ಧಿಗೆ ವೇಗ: ಎಂಎಲ್‌ಸಿ ಚಿದಾನಂದ

ಕನ್ನಡಪ್ರಭ ವಾರ್ತೆ ಶಿರಾ ನರೇಂದ್ರ ಮೋದಿಯವರ ಉತ್ತಮ ಆಡಳಿತದಿಂದ ಕಳೆದ 10 ವರ್ಷಗಳಿಂದ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ನೆರೆಯ ಅಕ್ಕಪಕ್ಕದ ರಾಷ್ಟ್ರಗಳು ಮೋದಿಯವರನ್ನು ವಿಶ್ವಗುರು ಎಂದು ಒಪ್ಪಿಕೊಂಡಿದ್ದಾರೆ. ಮೋದಿಯವರು ದೇಶದ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಗಳಾದ ನಂತರದಲ್ಲಿ ಭಾರತವು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ದೇಶದ ಜಿಡಿಪಿ ಸುಮಾರು 7.4 ರಷ್ಟು ದಾಖಲಾಗಿದೆ. ಮೋದಿಯವರ ಉಳಿದ ಆಡಳಿತದ ಅವಧಿಯಲ್ಲಿ ಅವರ ಆಶಯ ಸಂಪೂರ್ಣವಾಗಿ ಈಡೇರಲಿದೆ. ಕಳೆದ 10 ವರ್ಷಗಳಲ್ಲಿ ಹಾಕಿರುವ ಬುನಾದಿಯ ಅದರ ಆಧಾರದ ಮೇಲೆ ನಾವೆಲ್ಲರೂ ಸುವರ್ಣಕಾಲವನ್ನು ನೋಡಲಿದ್ದೇವೆ ಎಂದರು. ನಗರ ಬಿಜೆಪಿ ಅಧ್ಯಕ್ಷ ಗಿರಿಧರ್ ಮಾತನಾಡಿ ನರೇಂದ್ರ ಮೋದಿಯವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಪಾಕ್ಷಿಕ ಮಾಡುವಂತೆ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಶಾಲೆಗಳ ಸ್ವಚ್ಛತೆ, ದೇವಸ್ಥಾನಗಳ ಸ್ವಚ್ಛತೆ, ಗಿಡಗಳನ್ನು ನೆಡುವುದು ಹಾಗೂ ಜನರಿಗೆ ಸಾಮಾಜಿಕ ಅರಿವು ಮೂಡಿಸುವ ಕೆಲಸ ಮಾಡುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಅ. 2 ಗಾಂಧಿ ಜಯಂತಿಯವರೆಗೂ ಸಹ ಹಮ್ಮಿಕೊಳ್ಳಲಿದ್ದೇವೆ ಎಂದರು. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಚಿಕ್ಕಣ್ಣ ಮಾತನಾಡಿ ನರೇಂದ್ರ ಮೋದಿಯವರು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಡಿಯಲ್ಲಿ ಯಾವುದೇ ಜಾತಿ, ಧರ್ಮ ಬೇದಭಾವವಿಲ್ಲದೆ ಎಲ್ಲಾ ವರ್ಗದವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮೋದಿಯವರಿಗೆ ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಶಕ್ತಿ ದೇವರು ನೀಡಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ರಾಜ್ಯ ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿಕೆ ಮಂಜುನಾಥ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಡಿ.ಎಂ ಗೌಡ, ಮಾಜಿ ನಗರಸಭೆ ಅಧ್ಯಕ್ಷ ಅಂಜಿನಪ್ಪ, ನಗರಸಭಾ ಸದಸ್ಯರಾದ ರಂಗರಾಜು, ಮಾಜಿ ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಪ್ರಧಾನ ಕಾರ್ಯದರ್ಶಿಗಳಾದ ನಟರಾಜ್ ಮತ್ತು ನರಸಿಂಹರಾಜು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಮದ್ದೇವಳ್ಳಿ ರಾಮಕೃಷ್ಣಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷ ಈರಣ್ಣ ಪಟೇಲ್, ಗ್ರಾ.ಪಂ. ಸದಸ್ಯ ಎಂ.ಶಿವಲಿಂಗಯ್ಯ, ಕೊಟ್ಟ ಸಿದ್ದಪ್ಪ, ನಾದೂರು ಕುಮಾರ್, ಕೊಟ್ಟ ಶ್ರೀನಿವಾಸ್ ಗೌಡ, ಮುಖಂಡರಾದ ಭಾಸ್ಕರ್, ವೀರೇಶ್, ವಾಜರಹಳ್ಳಿ ಕೃಷ್ಣೇಗೌಡ, ಚಂಗಾವರ ವೆಂಕಟೇಶ್, ಬೊಪ್ಪರಾಯಪ್ಪ, ಮಹೇಶ್, ಲಕ್ಷ್ಮೀ ನಾರಾಯಣ್, ಪಡಿರಮೇಶ್, ಶ್ರೀಧರ್ ಮೂರ್ತಿ, ಶಿವಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷರಾದ ಲಲಿತಮ್ಮ, ಶೋಭಾ, ಕವಿತಾ, ತಿಮ್ಮರಾಜಮ್ಮ, ವಿಜಯಲಕ್ಷ್ಮೀ ಮಾಲತೇಶ್, ಕೋಟೆ ನಾಗರಾಜ, ಜೈರಾಮ್, ಶ್ರೀರಂಗಪ್ಪ, ಶ್ರೀನಿವಾಸ್, ವಕೀಲರಾದ ಆದರ್ಶ್, ಸುರೇಶ್, ಬಂಬೂ ನಾಗರಾಜ್, ವರುಣ್, ದತ್ತಣ್ಣ, ಗಂಗಾಧರ, ಮಲ್ಲಿಕಾರ್ಜುನ್, ಅರುಣ, ಪುಟ್ಟಮ್ಮ, ಮಾದೇವಪ್ಪ, ಮಂಜು ಮಲ್ಲಿಕಾಪುರ, ಗೋಕುಲ್, ಕಾಂತರಾಜ್, ವರುಣ್ ಸೇರಿದಂತೆ ಹಲವರು ಹಾಜರಿದ್ದರು.