ಗ್ಯಾರಂಟಿ ಯೋಜನೆ ಟೀಕೆಗೆ ಅಭಿವೃದ್ಧಿ ಕಾರ್ಯಗಳೇ ಉತ್ತರ: ಶಿವಣ್ಣನವರ

| Published : Oct 14 2025, 01:02 AM IST

ಗ್ಯಾರಂಟಿ ಯೋಜನೆ ಟೀಕೆಗೆ ಅಭಿವೃದ್ಧಿ ಕಾರ್ಯಗಳೇ ಉತ್ತರ: ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆ ಕುರಿತು ಟೀಕೆ ಮಾಡುವ ವಿಪಕ್ಷಗಳಿಗೆ ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಉತ್ತರವಾಗಿವೆ. ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ರಾಣಿಬೆನ್ನೂರು: ಗ್ಯಾರಂಟಿ ಯೋಜನೆ ಕುರಿತು ಟೀಕೆ ಮಾಡುವ ವಿಪಕ್ಷಗಳಿಗೆ ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಉತ್ತರವಾಗಿವೆ. ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ತಾಲೂಕಿನ ಕಾಕೋಳ ಗ್ರಾಮದಲ್ಲಿ ಸೋಮವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲಾದ ಸಾರ್ವಜನಿಕ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆಗಳು ಪೂರಕವಾಗಿವೆ. ಶಕ್ತಿ ಯೋಜನೆಯಡಿ ಇದುವರೆಗೂ ಸುಮಾರು 5 ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣ ಮಾಡಿದ್ದು, ಇದೊಂದು ವಿಶ್ವ ದಾಖಲೆಯಾಗಿದೆ. ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಅಗುತ್ತಿದೆ. ಕಾಕೋಳ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ 4ಕೋಟಿ ಖರ್ಚು ಮಾಡಲಾಗಿದೆ. ಗ್ರಾಮದ ಜನರು ಸಮುದಾಯ ಭವನದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಶಾಂತವ್ವ ಕಿವುಡನವರ, ಉಪಾಧ್ಯಕ್ಷೆ ಶಾಂತವ್ವ ಕನ್ನಜ್ಜನವರ, ಸದಸ್ಯರುಗಳಾದ ನಂದಾ ಕೊಂಬಳಿ, ಜಗದೀಶ ಛಪ್ಪರದ, ನೀಲಪ್ಪ ಮೋಟೆಬೆನ್ನೂರ, ಪ್ರೇಮಾ ಹಳ್ಳಳ್ಳಿ, ಗಂಗವ್ವ ಬಾರ್ಕಿ, ಕರಿಯಪ್ಪ ಕುದರಿಹಾಳ, ಗೌರಮ್ಮ ಸುಂಕದ, ದ್ಯಾಮವ್ವ ಮಾಳಗಿ, ಜಯಣ್ಣ ಶಿಡಗನಹಾಳ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿದೇಶಕ ಎಸ್.ಎಚ್.ತಿಮ್ಮೇಶಕುಮಾರ, ಪಿಡಿಒ ಪೂಜಾರ, ಫಕ್ಕೀರಪ್ಪ ಕೊಂಬಳಿ, ಎಚ್.ಎಮ್.ನಾಯ್ಕ, ರಾಜಶೇಖರಗೌಡ ಪಾಟೀಲ, ಅಂದಾನೆಪ್ಪ ಮುಚ್ಚಟ್ಟಿ, ಶಿವಪ್ಪ ನವಲಿ, ಚಂದ್ರಶೇಖರ ಕುದರಿಹಾಳ ಮತ್ತಿತರರಿದ್ದರು.