ಸಾರಾಂಶ
- 5ಕೋಟಿ ರು. ವೆಚ್ಚದ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಚಾಲನೆ: ಅಪಘಾತ ವಲಯಗಳಿಗೆ ಮುಕ್ತಿ.ಕನ್ನಡಪ್ರಭ ವಾರ್ತೆ,ಬೀರೂರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ ಎನ್ನುವ ವಿರೋಧ ಪಕ್ಷದವರಿಗೆ ಸದ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳೇ ಉತ್ತರ ನೀಡಲಿವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಹೋಬಳಿಯ ಹುಲ್ಲೇಹಳ್ಳಿ ಗ್ರಾಮ ಸಮೀಪ ಬುಧವಾರ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ ಮಂಜುರಾದ 5 ಕೋಟಿ ರು. ವೆಚ್ಚದ ರಸ್ತೆ ವಿಸ್ತರಣೆ ಮತ್ತು ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅಭಿವೃದ್ಧಿಗಾಗಿ ಕಡೂರು ಕ್ಷೇತ್ರಕ್ಕಾಗಿ ಬಹಳಷ್ಟು ಅನುದಾನ ತರಲಾಗಿದ್ದು, ಮುಖ್ಯವಾಗಿ ಪಿಡಬ್ಲೂಡಿ ಇಲಾಖೆ, ಕಾಲೇಜು ಕಟ್ಟಡ ಅಭಿವೃದ್ಧಿಗಾಗಿ ಕ್ಷೇತ್ರ ಒಂದಲ್ಲ ಒಂದು ವಿಚಾರದಲ್ಲಿ ಕ್ಷೇತ್ರದ ಮುಂದೆ ತರುವಲ್ಲಿ ಕೆಲಸ ಮಾಡುತ್ತಿದ್ದು.ರಾಜ್ಯ ಸರ್ಕಾರ ಸಹ ಸಕಾರಾತ್ಮಕವಾಗಿ ಸ್ಪಂದಿಸಿ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ ಎಂದರು.
ಇಂದು ಯಾವುದೇ ಇಲಾಖೆ ನೋಡಿದರು ನೀರಾವರಿ, ಸಮಾಜ ಕಲ್ಯಾಣ , ಶಿಕ್ಷಣ , ಹಿಂದುಳಿದ ವರ್ಗ ಈ ಎಲ್ಲಾ ಇಲಾಖೆಗಳಿಗೂ ಕಳೆದ 3 ವರ್ಷಗಳಿಂದ ಬಿಜೆಪಿ ಸರ್ಕಾರ ಬಜೆಟ್ ಮಂಡಿಸಿದ್ದರೂ, ಅದಕ್ಕಿಂತ ಹೆಚ್ಚಿಗೆ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಕೊಡುವ ಜೊತೆಯಲ್ಲಿ ಬಜೆಟ್ ನಲ್ಲಿ ಹೆಚ್ಚಿಗೆ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ ಎಂದರೆ ಅಭಿವೃದ್ದಿ ಕುಂಠಿತವಾಗುವ ಪ್ರಶ್ನೆಯೇ ಇಲ್ಲ ಎಂದರು.ಹೆಚ್ಚು ವಾಹನ ದಟ್ಟಣೆ ಇರುವ ಕೆಲವು ಗ್ರಾಮೀಣ ಭಾಗಕ್ಕೆ ತಲುಪುವ ರಸ್ತೆಗಳು ತುಂಬಾ ಕಿರಿದಾಗಿದ್ದು, ಸದ್ಯ ಅವುಗಳನ್ನು ಗುರುತಿಸಿ ಈಗಾಗಲೇ 5.5ಮೀ ಅಗಲವಿದ್ದ ರಸ್ತೆಗಳನ್ನು 7 ಮೀ.ವರೆಗೆ ವಿಸ್ತರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಬೀರೂರು ಯಗಟಿ ರಸ್ತೆ ಕ್ರಾಸ್ ನಿಂದ 4ಕಿ.ಮೀ ರಸ್ತೆ ಅಗಲೀಕರಣವಾಗುವುದು. ಕಡೂರು ತಾಲೂಕಿನ ರಾಜ್ಯ ಹೆದ್ದಾರಿ 57 ಕೈಮರದಿಂದ ರಾಷ್ಟ್ರೀಯ ಹೆದಾರಿ 234ಕ್ಕೆ ಸೇರುವ ರಸ್ತೆ ಮಾರ್ಗ ಅತ್ತಿಗುಂಡಿ, ಕೆಮ್ಮಣ್ಣು ಗುಂಡಿ, ಲಿಂಗದಹಳ್ಳಿ, ಬೀರೂರು, ಯಗಟಿ, ಸಿಂಗಟಗೆರೆ, ಶಾಣೆಗೆರೆ ರಸ್ತೆ ಕಿ.ಮೀ.71 ನಿಂದ 71.50ಕಿ.ಮೀ ವರೆಗೆ ಮತ್ತು 76.20ರಿಂದ 79.20ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಸರ್ಕಾರ ಸದ್ಯ 5ಕೋಟಿ ರು. ವಿಸ್ತರಣೆ ಕಾಮಗಾರಿಗೆ ಅನುಮೋದನೆ ನೀಡಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಿವೈ ಎಸ್ ಎಸ್ ರಸ್ತೆಯನ್ನು ಯಗಟಿಪುರದ ವರೆಗೆ ವಿಸ್ತರಣೆ ಮಾಡಲಾಗುವುದು ವಿವರಿಸಿದರು.ಈ ಸಂದರ್ಭದಲ್ಲಿ ಹುಲ್ಲೇಹಳ್ಳಿ ಗ್ರಾಪಂ ಅಧ್ಯಕ್ಷ ಲೋಕೇಶಪ್ಪ, ಸದಸ್ಯ ಮೂರ್ತಪ್ಪ, ನರಸಿಂಹಮೂರ್ತಿ, ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಬಿ.ಆರ್.ರವಿಕುಮಾರ್, ಕಾರ್ಯಕರ್ತರಾದ ಕೀರ್ತಿ ಯತೀಶ್, ಮುರ್ಗಿ ಹರ್ಷ, ಅನಂತ್, ಸಂತೋಷ್ ಕುಮಾರ್, ಮನು, ಪಿಡಬ್ಲುಡಿ ಇಲಾಖೆ ಎಇಇ ಬಸವರಾಜ್, ಇಂಜಿನಿಯರ್ ಗಿರೀಶ್ ಸೇರಿದಂತೆ ಮತ್ತಿತರರು ಇದ್ದರು.
6 ಬೀರೂರು 1ಬೀರೂರು ಸಮೀಪದ ಹುಲ್ಲೇಹಳ್ಳಿ ಗೇಟ್ ಬಳಿ ಬಿವೈಎಸ್‌ಎಸ್ ರಸ್ತೆ ಅಗಲೀಕರಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು. ಗ್ರಾ.ಪಂ.ಅಧ್ಯಕ್ಷ ಲೋಕೇಶಪ್ಪ, ಬಿ.ಕೆ.ಶಶಿಧರ್, ಎಲೆರವಿಕುಮಾರ್, ಕೀರ್ತಿಯತೀಶ್ ಇದ್ದರು