ಸಾರಾಂಶ
- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ.ಯಲ್ಲಿ ಮಹಾಶಿವರಾತ್ರಿ ಮಹೋತ್ಸವ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಇಂದಿನ ಯಾಂತ್ರಿಕ ಜೀವನಶೈಲಿಯಲ್ಲಿ ಮನಸ್ಸಿಗೆ ನೆಮ್ಮದಿ, ಶಾಂತಿ, ಸಮಾಧಾನಗಳು ಬೇಕಾದರೆ ಈಶ್ವರಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಬೇಕು ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.ಪಟ್ಟಣದ ಎಲ್.ಐ.ಸಿ. ಕಚೇರಿ ಸಮೀಪದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಭಾ ಭವನದಲ್ಲಿ ಏರ್ಪಡಿಸಿದ್ದ 89ನೇ ಮಹಾಶಿವರಾತ್ರಿಯ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಯುವಸಮೂಹ ಹಬ್ಬಗಳನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸದೇ, ಹಬ್ಬದ ಹೆಸರಿನಲ್ಲಿ ಮೋಜು, ಮಸ್ತಿಗಳ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಶಿವರಾತ್ರಿ ಹಬ್ಬದ ಜಾಗರಣೆ ದಿನ ಶಿವನಾಮ ಸ್ಮರಣೆ ಮಾಡುತ್ತಾ, ಹಬ್ಬ ಆಚರಣೆ ಮಾಡಿದರೆ, ಬದುಕಿನಲ್ಲಿ ಶ್ರೇಯಸ್ಸು ದೊರೆಯಲಿದೆ ಎಂದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವಿಶ್ವದ 125ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಜನರಲ್ಲಿ ಆಧ್ಯಾತ್ಮಿಕ ಭಾವನೆಗಳನ್ನು ಬೆಳೆಸಿ, ಶಾಂತಿ, ನೆಮ್ಮದಿ, ಸಮಾಧಾನ ನೀಡುವಲ್ಲಿ ನಿರತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಮಾತನಾಡಿ, ಈಶ್ವರೀಯ ವಿಶ್ವವಿದ್ಯಾಲಯ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವಂತಹ ಕೇಂದ್ರವಾಗಿದೆ. ಇಲ್ಲಿ ನಡೆಯುವ ವಿಚಾರ ಸಂಕಿರಣಗಳಲ್ಲಿ ಭಾಗಿಯಾಗಿ ಆಧ್ಯಾತ್ಮಿಕ ವಿಚಾರಗಳನ್ನು ಅರಿತು, ಮೈಗೂಡಿಸಿಕೊಂಡಾಗ ಸಾತ್ವಿಕ ಸಮಾಜ ನಿರ್ಮಾಣ ಸಾಧ್ಯ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ರಾಜಯೋಗಿನಿ ಬ್ರಹ್ಮಕುಮಾರಿ ಮಹಾದೇವಿ ಅಕ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತುಮ್ಕೋಸ್ ನಿರ್ದೇಶಕರಾದ ಎಂ.ಎನ್. ಗಂಗಾಧರಪ್ಪ, ಕೆ.ಜಿ.ಓಂಕಾರಮೂರ್ತಿ, ವಿಜಯಕುಮಾರ್, ಟಿ.ವಿ.ರಾಜು, ಜಿ,ಆರ್. ಶಿವಕುಮಾರ್, ಮಂಜುನಾಥ್, ಚನ್ನಬಸಪ್ಪ, ಮೀನಾಕ್ಷಿ, ಶೋಭಾ, ಬಸವರಾಜ್, ಲೋಕೇಶ್ವರ್ ವಿಶ್ವವಿದ್ಯಾಲಯದ ತಾರಾ ಅಕ್ಕ, ಜಯಶ್ರೀ ಅಕ್ಕ ಹಾಜರಿದ್ದರು.
- - - -24ಕೆಸಿಎನ್‌ಜಿ1:ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ ಶಾಸಕ ಬಸವರಾಜ ಉದ್ಘಾಟಿಸಿದರು.