ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಬೀದಿ ಬೀದಿಗಳಲ್ಲಿ ರೊಟ್ಟಿ ತುಂಬಿದ ಬುಟ್ಟಿಗಳನ್ನು ತಲೆ ಮೇಲೆ ಹೊತ್ತು ತರುತ್ತಿರುವ ನೂರಾರು ಮಹಿಳೆಯರು ಕಂಡುಬಂದರು. ಆನಂತರ ಶ್ರೀಮಠದಲ್ಲಿ ರೊಟ್ಟಿ‌ ತಂದು ಸಂಗ್ರಹಿಸಿದರು. ಈ ವೇಳೆ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಲಕ್ಷ್ಮೇಶ್ವರ: ಸಮೀಪದ ಹೂವಿನ ಶಿಗ್ಲಿ ಗ್ರಾಮದ ವಿರಕ್ತಮಠದ 47ನೇ ಜಾತ್ರಾ ಮಹೋತ್ಸದ ಅಂಗವಾಗಿ ಶನಿವಾರ ಭಕ್ತರ ಮನೆಯಿಂದ ರೊಟ್ಟಿಗಳನ್ನು ಬಂಡಿಯಲ್ಲಿ ತರುತ್ತಿರುವ ದೃಶ್ಯ ವೈಭವ ಶನಿವಾರ ಕಂಡು ಬಂದಿತು.

ಸಮೀಪದ ಹೂವಿನ ಶಿಗ್ಲಿಯ ಗ್ರಾಮದ ವಿರಕ್ತಮಠದ 47ನೇ ವರ್ಷದ ಜಾತ್ರಾ ಮಹೋತ್ಸವ ಜ. 13ರಿಂದ 15ರವರೆಗೆ ನಡೆಯಲಿದೆ. ವಿರಕ್ತಮಮಠ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಪ್ರತಿಯೊಂದು ಮನೆಯಿಂದ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ರೊಟ್ಟಿ ಊಟ ನೀಡಬೇಕು ಎನ್ನುವ ಉದ್ದೇಶದಿಂದ ಸಾವಿರಾರು ರೊಟ್ಟಿಗಳನ್ನು ಶ್ರೀಮಠಕ್ಕೆ ಶೃಂಗರಿಸಿದ ಎತ್ತಿನ ಬಂಡಿಯಲ್ಲಿ ತರಲಾಯಿತು.

ರೊಟ್ಟಿ ತರುತ್ತಿರುವ ಭಕ್ತರೊಂದಿಗೆ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು, ಕುಂದಗೋಳದ ಕಲ್ಯಾಣಪುರದ ಬಸವಣ್ಣಜ್ಜರವರು, ಬಟಗುರ್ಕಿಯ ಗದಗಯ್ಯ ದೇವರ ಸಾನ್ನಿಧ್ಯದಲ್ಲಿ ಗ್ರಾಮದಲ್ಲಿ ಮಹಿಳೆಯರು ಮತ್ತು ಚಕ್ಕಡಿಗಳಲ್ಲಿ ಭಕ್ತರು ಶ್ರೀಮಠದ ಜಾತ್ರೆಗಾಗಿಯೇ ಮಾಡಿ ಇಟ್ಟ ರೊಟ್ಟಿಗಳನ್ನು ಬುಟ್ಟಿಗಳಲ್ಲಿ ತುಂಬಿ ಬಿಳಿಯ ಬಟ್ಟೆ ಹೊದಕೆ ಹಾಕಿ ಶ್ರೀಗಳ ಆರ್ಶೀವಾದದೊಂದಿಗೆ ರೊಟ್ಟಿಗಳನ್ನು ಚಕ್ಕಡಿಗಳಲ್ಲಿ ಹಾಕಿದರು.

ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಬೀದಿ ಬೀದಿಗಳಲ್ಲಿ ರೊಟ್ಟಿ ತುಂಬಿದ ಬುಟ್ಟಿಗಳನ್ನು ತಲೆ ಮೇಲೆ ಹೊತ್ತು ತರುತ್ತಿರುವ ನೂರಾರು ಮಹಿಳೆಯರು ಕಂಡುಬಂದರು. ಆನಂತರ ಶ್ರೀಮಠದಲ್ಲಿ ರೊಟ್ಟಿ‌ ತಂದು ಸಂಗ್ರಹಿಸಿದರು. ಈ ವೇಳೆ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ರೊಟ್ಟಿ ಜಾತ್ರೆಯಲ್ಲಿ ಅಂದಾನಯ್ಯ ಹೀರೇಮಠ, ನಿಂಗಪ್ಪ ಹೊಸೂರು, ಆರ್.ಎಸ್. ಪಾಟೀಲ, ಮಹಾದೇವಪ್ಪ ಬಿಷ್ಟನ್ನವರ, ನಿಂಗಪ್ಪ ಕಳ್ಳಿಮನಿ, ಪಿ.ಎಚ್. ಪಾಟೀಲ, ಶಿವಲಿಂಗಯ್ಯ ಹಿರೇಮಠ, ಮಹಾಲಿಂಗಪ್ಪ ಅಡರಕಟ್ಟಿ, ವಿರೂಪಾಕ್ಷಪ್ಪ‌‌ ಚೂರಿ, ಯೋಗಪ್ಪ ಕುಂದರಗಿ, ನಿಂಗಪ್ಪ ರಾಯಣ್ಣವರ, ಮಲ್ಲಪ್ಪ ಯಳವಂಕಿ, ದೇವಪ್ಪ ಪಾಲ್ಗೊಂಡಿದ್ದರು.ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಭಕ್ತರು

ಸಮೀಪದ ಹೂವಿನ ಶಿಗ್ಲಿ ಗ್ರಾಮದಲ್ಲಿ ಶನಿವಾರ ಇಡೀ ಗ್ರಾಮ ವಿರಕ್ತಮಠದ ಜಾತ್ರಾ ಮಹೋತ್ಸವದ ಅಂಗವಾಗಿ ರೊಟ್ಟಿ ಜಾತ್ರೆಯ ಸಂಭ್ರಮದಲ್ಲಿ ಇತ್ತು. ಇಡಿ ಗ್ರಾಮದಲ್ಲಿ ಜಾತಿ, ಧರ್ಮ ಎನ್ನದೆ ಎಲ್ಲರೂ ಭಕ್ತಿ ಭಾವದಿಂದ ರೊಟ್ಟಿಗಳನ್ನು ನೀಡುತ್ತಿದ್ದರು. ಈ ಗ್ರಾಮದಲ್ಲಿ ನಾಲ್ಕೈದು ಮುಸ್ಲಿಂ ಕುಟುಂಬಗಳಿದ್ದು. ಪ್ರತಿ ವರ್ಷದಂತೆ ಈ ವರ್ಷವೂ ಮುಸ್ಲಿಂ ಕುಟುಂಬುಗಳು ಶ್ರದ್ಧಾಭಕ್ತಿಯಿಂದ ರೊಟ್ಟಿ ಕಾಣಿಕೆ ನೀಡಿ ಕೋಮು ಸೌಹಾರ್ದತೆ ಮೆರೆದರು.