ಸಾರಾಂಶ
ಕಾಳಗಿ:
ತಾಲೂಕಿನ ಸೂಗೂರು (ಕೆ) ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ದ್ವಾದಶಿ ದಿನದಂದು ಬಿತ್ತದೆ ಬೆಳೆಯುವ ವಿಸ್ಮಯ ಭತ್ತದ ಪ್ರಸಾದ ಸ್ವೀಕರಿಸಿ ಭಕ್ತರು ಪುನೀತರಾದರು.ದ್ವಾದಶಿ ದಿನದಂದು ಬೆಳಗ್ಗೆ ವೆಂಕಟೇಶ್ವರ ಮೂರ್ತಿಗೆ ಪ್ರಧಾನ ಅರ್ಚಕ ಸನ್ನತದಾಸ ಮಹಾರಾಜ ವೈದಿಕತ್ವದಲ್ಲಿ ವಿಶೇಷ ಅಭಿಷೇಕ, ಅರ್ಚನೆ, ಮಂಗಳಾರತಿ ನಡೆಯಿತು. ನಂತರ ದೇವಸ್ಥಾನ ಪಕ್ಕದ ಸುವರ್ಣಗಿರಿ ಬೆಟ್ಟದ ಮೇಲೆ ಬಿತ್ತದೇ ಉಳಿಮೆ ಮಾಡದೆ ಬೆಳೆಯುವ ವಿಸ್ಮಯಕಾರಿ ಭತ್ತದ ನೈವೇದ್ಯವನ್ನು ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಿ, ಭಕ್ತರಿಗೆ ಮಹಾ ಪ್ರಸಾದ ವಿತರಿಸಲಾಯಿತು.
ಏಕದಶಿ, ದ್ವಾದಶಿ ನಿಮಿತ್ತ ವೆಂಕಟೇಶ್ವರ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದ ಭಕ್ತರ ದಂಡು ಆಗಮಿಸಿ ಉತ್ತರಾಭಿಮುಖವಾಗಿ ವೈಕುಂಠ ದ್ವಾರದ ಮೂಲಕ ಲಕ್ಷ್ಮೀ ವೆಂಕಟೇಶ್ವರ ದೇವರ ದರ್ಶನ ಪಡೆದು ಪುನೀತರಾದರು.ದೇವಸ್ಥಾನ ಪ್ರಧಾನ ಅರ್ಚಕ ಸನ್ನತದಾಸ ಮಹಾರಾಜ, ದೇವಸ್ಥಾನ ಸಂಚಾಲಕ ಕೃಷ್ಣದಾಸ ಮಹಾರಾಜ, ಅರ್ಚಕ ಕೇಶವದಾಸ ಮಹಾರಾಜ, ಬಾಲಕದಾಸ ನಾಗಸಾಧು, ಅರ್ಚಕ ಕೇಶವದಾಸ ಮಹಾರಾಜರು, ಜಿಲ್ಲಾ ನೇಕಾರ ಒಕ್ಕೂಟ ಅಧ್ಯಕ್ಷ ಪ್ರದೀಪ ಸಂಗಾ, ಮುಖಂಡರಾದ ಶಂಭುಲಿಂಗ ಗುಂಡಗುರ್ತಿ, ಪರಮೇಶ್ವರ ಪಾಟೀಲ, ಅಶೋಕ ರಮ್ಮಣ್ಣಿ ದತ್ತಾತ್ರೇಯ ಮುಚ್ಚಟ್ಟಿ ನಿಂಗಯ್ಯ ಗುತ್ತೇದಾರ, ಬಸವರಾಜ ಪೂಜಾರಿ, ಸಿದ್ದು ಕೇಶ್ವಾರ, ಖೇಮು ರಾಠೋಡ, ನರಸಿಂಗ್ ಚವ್ಹಾಣ, ಅಣ್ಣರಾವ ರಾಠೋಡ, ಸಂಜು ಕಾರಬಾರಿ, ಜಗನ್ನಾಥ ಕೊಳ್ಳಿ, ಭೀಮಶಾ ಅಂಕನ, ಭೀಮರಾವ್ ರಾಠೋಡ, ಉಮೇಶ ಸಿಎ, ದೀಲಿಪ ಪರಥನ್, ಶಿವಕುಮಾರ ಕಲಶೆಟ್ಟಿ, ದಾವುದ ಮೌಜಾವರ, ಮೊಹನ ಚವ್ಹಾಣ, ಅನಿಲಕುಮಾರ ಚವ್ಹಾಣ, ಶಾಮರಾವ ಒಡೆಯರಾಜ, ಶಿವಾನಂದ ಹಡಪದ, ಬಾಬುರಾವ ಕುಂಬಾರ ಇದ್ದರು.