ದೇವಾಂಗ ಜ್ಯೋತಿಯ ಆಹ್ವಾನ ನೀಡುವ ಉದ್ದೇಶದಿಂದ ದೇವಾಂಗ ಜ್ಯೋತಿ ಕಳುಹಿಸಲಾಗಿದೆ

ಹನುಮಸಾಗರ: ಪಟ್ಟಣದ ಶ್ರೀಬನಶಂಕರಿ ದೇವಸ್ಥಾನಕ್ಕೆ ಶನಿವಾರ ಆಗಮಿಸಿದ ದೇವಾಂಗ ಜ್ಯೋತಿಯನ್ನು ಅರ್ಚಕ ರಾಘವೇಂದ್ರ ಸಿನ್ನೂರ ಹಾಗೂ ಮಂಜುನಾಥ ಸಿನ್ನೂರ ಪೂಜೆ ಸಲ್ಲಿಸಿ ದೇವಾಂಗ ಜಾಗೃತಿ ಜ್ಯೋತಿ ಬೀಳ್ಕೊಡಲಾಯಿತು.

ಅಖಿಲ ಭಾರತ ದೇವಾಂಗ (ನೇಕಾರ) ಜಾಗೃತ ಸಮಾವೇಶದ ಅಂಗವಾಗಿ ಹಂಪಿ ಹೇಮಕೂಟ ಪೀಠಾಧಿಪತಿ ದಯಾನಂದಪುರಿ ಮಹಾಸ್ವಾಮೀಜಿ 36ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭದ ಅಂಗವಾಗಿ ದೇವಾಂಗ ಸಮಾಜ ಬಾಂಧವರ ಜಾಗೃತಿಗಾಗಿ ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಪೂಜೆಗೊಂಡು ರಾಜ್ಯಾದ್ಯಂತ ಜಾಗೃತಿ ಮೂಡಿಸಿ ಮೇ 9 ಮತ್ತು 10ನೇ ಶನಿವಾರ ಮತ್ತು ಭಾನುವಾರ ಬಾದಾಮಿ ಬನಶಂಕರಿಯಲ್ಲಿ 36ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭಕ್ಕೆ ಆಗಮಿಸುವ ಮೂಲಕ ದೇವಾಂಗ ಜ್ಯೋತಿಯ ಆಹ್ವಾನ ನೀಡುವ ಉದ್ದೇಶದಿಂದ ದೇವಾಂಗ ಜ್ಯೋತಿ ಕಳುಹಿಸಲಾಗಿದೆ ಎಂದು ಜಾಗೃತಿ ಸಮಿತಿ ತಿಳಿಸಿದರು.

ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ,ಉಪಾಧ್ಯಕ್ಷ ಸುರೇಶ ಸಿನ್ನೂರ,ಮಹೇಶ ಹುಲಮನಿ, ಶಂಕ್ರಪ್ಪ ಸಪ್ಪಂಡಿ, ಬಸವಂತಪ್ಪ ಸಿನ್ನೂರ, ರವಿ ಸಿನ್ನೂರ ,ರಾಜೇಂದ್ರ ಹುಲಮನಿ, ವಿಶಾಲ ಸಿನ್ನೂರ,ಶಂಕರ ಹುಲಮನಿ,ಅನಿಲ ಸಿನ್ನೂರ, ವತ್ಸಲ,ಭುವನೇಶ್ವರಿ, ಭಾರತಿ ಕಾಳಗಿ,ಸರಸ್ವತಿ ಸೇರಿದಂತೆ ದೇವಾಂಗ ಸಮಾಜದ ಹಿರಿಯರು, ಮಹಿಳೆಯರು ಹಾಗೂ ಯುವಕರು ಇತರರು ಇದ್ದರು.