ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವುದರಿಂದಾಗಿ ಈ ದಿನವು ಹೆಚ್ಚು ಮಹತ್ವವನ್ನು ಪಡೆದಿದ್ದು, ಅಂದು ಮನೆಯಲ್ಲಿ ಸೂರ್ಯಾಸ್ತದ ನಂತರ ಲಕ್ಷ್ಮೀ ಪೂಜೆಯನ್ನು ಕೈಗೊಳ್ಳುವುದರ ಮೂಲಕ ಸಂಪತ್ತು ಸಮೃದ್ಧಿಯನ್ನು ಕರುಣಿಸಲು ಪ್ರಾರ್ಥಿಸಲಾಗುತ್ತದೆ. ಧನ ಅಥವಾ ವ್ಯಾಪಾರಕ್ಕೆ ಸಂಬಂಧ ಹೊಂದಿರುವ ಕಾರಣದಿಂದ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಯೆಂದು ಕರೆಯಲ್ಪಡುತ್ತದೆ. ಅಂದು ವ್ಯಾಪಾರಿಗಳು ತಮ್ಮ ಲೆಕ್ಕಾಚಾರದ ಪುಸ್ತಕಗಳನ್ನು ಶ್ರೀದೇವಿಯ ಮುಂದಿರಿಸಿ ಪ್ರಾರ್ಥಿಸುವುದು ಸಂಪ್ರದಾಯ.

ಹೊಳೆನರಸೀಪುರ: ಪಟ್ಟಣದಲ್ಲಿ ದೀಪಾವಳಿಯ ಬಲಿಪಾಢ್ಯಮಿ ದಿನದಂದು ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ಶ್ರೀಧನಲಕ್ಷ್ಮಿ ಪೂಜೆ ನೆರವೇರಿಸಿ, ಪೂರ್ವಿಕರ ಆಚರಣೆ ಹಾಗೂ ಸಂಪ್ರದಾಯದ ಪಾಲನೆ ಮಾಡುವ ಮೂಲಕ ಸಂಭ್ರಮಿಸಿದರು. ದೀಪಾವಳಿ ಕೇವಲ ಹಬ್ಬವಾಗಿರದೇ, ಕತ್ತಲೆಯಿಂದ ಬೆಳಕಿನ ಕಡೆಗೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಹಾಗಾಗಿ ನಮ್ಮ ಸನಾತನ ಧರ್ಮದಲ್ಲಿ ದೀಪಾವಳಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡಲಾಗಿದೆ. ಧನಲಕ್ಷ್ಮಿ ಪೂಜೆ ಅಥವಾ ಲಕ್ಷ್ಮಿ ಪೂಜೆಯನ್ನು ದೀಪಾವಳಿ ಹಬ್ಬದಲ್ಲಿ ಆಚರಿಸಲಾಗುತ್ತದೆ. ಆ ದಿನದಂದು ಧನಲಕ್ಷ್ಮಿದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಸಂಪತ್ತು ಸಮೃದ್ಧಿಯಾಗುವುದು ಎಂಬ ಪೂರ್ವಿಕರ ನಂಬಿಕೆ ಇಂದಿಗೂ ಪಾಲನೆಯಾಗುತ್ತಿದೆ. ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವುದರಿಂದಾಗಿ ಈ ದಿನವು ಹೆಚ್ಚು ಮಹತ್ವವನ್ನು ಪಡೆದಿದ್ದು, ಅಂದು ಮನೆಯಲ್ಲಿ ಸೂರ್ಯಾಸ್ತದ ನಂತರ ಲಕ್ಷ್ಮೀ ಪೂಜೆಯನ್ನು ಕೈಗೊಳ್ಳುವುದರ ಮೂಲಕ ಸಂಪತ್ತು ಸಮೃದ್ಧಿಯನ್ನು ಕರುಣಿಸಲು ಪ್ರಾರ್ಥಿಸಲಾಗುತ್ತದೆ. ಧನ ಅಥವಾ ವ್ಯಾಪಾರಕ್ಕೆ ಸಂಬಂಧ ಹೊಂದಿರುವ ಕಾರಣದಿಂದ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಯೆಂದು ಕರೆಯಲ್ಪಡುತ್ತದೆ. ಅಂದು ವ್ಯಾಪಾರಿಗಳು ತಮ್ಮ ಲೆಕ್ಕಾಚಾರದ ಪುಸ್ತಕಗಳನ್ನು ಶ್ರೀದೇವಿಯ ಮುಂದಿರಿಸಿ ಪ್ರಾರ್ಥಿಸುವುದು ಸಂಪ್ರದಾಯ. ಲಕ್ಷ್ಮಿಪೂಜೆಯ ಐತಿಹ್ಯದ ಪ್ರಕಾರ ಸಂಪತ್ತು, ಸಮೃದ್ಧಿಯ ಅಧಿದೇವತೆ ಧನಲಕ್ಷ್ಮಿಯನ್ನು ಪೂಜಿಸಿ ಸಂತಸಗೊಳಿಸುವುದರಿಂದ ಸಕಲ ಸುಖ, ಸಂಪತ್ತುಗಳು ಲಭಿಸುವುದು ಎಂಬುದು ನಂಬಿಕೆ ಹಾಗೂ ಆಚರಣೆಯ ಪಾಲನೆ ಮಹತ್ವ ಪಡೆದಿದೆ.