ಸಾರಾಂಶ
ಶಟಲ್ ಬ್ಯಾಡ್ಮಿಂಟನ್ ಮಹಿಳೆಯರ ಡಬಲ್ಸ್‌ನಲ್ಲಿ ಬಿಜಿಎಸ್ ಕಪ್ ಪ್ರಶಸ್ತಿಯನ್ನು ಧನ್ಯ ಯಡೂರು ತಂಡ ಮತ್ತು ಪುಷ್ಪಾಂಜಲಿ ಯಡೂರು ತಂಡ ಮುಡಿಗೇರಿಸಿಕೊಂಡಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕೊಡಗು ಜಿಲ್ಲಾ ಮತ್ತು ಕುಶಾಲನಗರ ತಾಲೂಕು ಒಕ್ಕಲಿಗ ಗೌಡ ಯುವ ವೇದಿಕೆ, ಜಿಲ್ಲಾ ಒಕ್ಕಲಿಗರ ರಿಕ್ರಿಯೇಶನ್ ಸ್ಪೋರ್ಟ್ಸ್ ಕ್ಲಬ್ ಹಾಗು ಜಂಪ್‌ಸ್ಮಾಶ್ ಅಕಾಡೆಮಿ ಕುಶಾಲನಗರ ವತಿಯಿಂದ ಜಂಪ್‌ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಮಹಿಳೆಯರ ಡಬಲ್ಸ್ನಲ್ಲಿ ಬಿ.ಜಿ.ಎಸ್ ಕಪ್ ಪ್ರಶಸ್ತಿಯನ್ನು ಸೋಮವಾರಪೇಟೆ ತಾಲೂಕಿನ ಧನ್ಯ ಯಡೂರು ಮತ್ತು ಪುಷ್ಪಾಂಜಲಿ ಯಡೂರು ತಂಡ ಮುಡಿಗೇರಿಸಿಕೊಂಡಿತು.ಕುಶಾಲನಗರ ತಾಲೂಕಿನ ಚೈತ್ರ ಭಾರತೀಶ್ ಮತ್ತು ರಾಣಿ ಉಲ್ಲಾಶ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ಡಬಲ್ಸ್ನಲ್ಲಿ ಕುಶಾಲನಗರ ತಾಲೂಕಿನ ಅಭಿಷೇಕ್ ಮತ್ತು ದಿನೇಶ್ ತಂಡ ಪ್ರಥಮ ಹಾಗು ಸೋಮವಾರಪೇಟೆ ತಾಲೂಕಿನ ಗೌತಮ್ ಕಿರಂದೂರು ಮತ್ತು ಕಾರ್ತಿಕ್ ಮಾದಪ್ಪ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರು.ಮಹಿಳೆಯರ ಸಿಂಗಲ್ಸ್ನಲ್ಲಿ ಮೊದಲ ಬಹುಮಾನವನ್ನು ಸೋಮವಾರಪೇಟೆ ತಾಲೂಕಿನ ಸಿರಿ ಹಿರಿಕರ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ವಿರಾಜಪೇಟೆಯ ಶನಯ ಪಡೆದುಕೊಂಡರು. ಪುರುಷರ ಸಿಂಗಲ್ಸ್ನಲ್ಲಿ ಕುಶಾಲನಗರ ಆಕರ್ಷ್ ಪ್ರಥಮ ಹಾಗು ಅಭಿ ದ್ವಿತೀಯ ಸ್ಥಾನ ಪಡೆದುಕೊಂಡರು. 15 ವರ್ಷ ಒಳಗಿನ ಬಾಲಕರ ವಿಭಾಗದಲ್ಲಿ ಆದಿತ್ಯ(ಪಥಮ್ರ), ಪೃಥ್ವಿ(ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಶನಯ(ಪ್ರ), ರಿತಾನ್ಯ(ದ್ವಿ), ಮಿಕ್ಸ್ಡ್ ಡಬಲ್ಸ್ ನಲ್ಲಿ ಅಭಿಷೇಕ್ ಮತ್ತು ಚರಿತ್ರ(ಪ್ರ), ಆಕರ್ಷ್ ಮತ್ತು ವನಿತ(ದ್ವಿ), 75 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಅಭಿಷೇಕ್ ಮತ್ತು ದಿನೇಶ್(ಪ್ರ), ಜೈರಾಜ್ ಮತ್ತು ರವಿ ದ್ವಿತೀಯ ಸ್ಥಾನ ಗಳಿಸಿದರು. ಕುಶಾಲನಗರ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ.ಭಾರತೀಶ್ ಪ್ರಮುಖರಾದ ಅನಿಲ್ ಕುಮಾರ್, ಕೆ.ಪಿ.ಶರತ್, ಜಯರಾಜ್, ಪವನ್ ಇದ್ದರು.