ಸಾರಾಂಶ
ಕನ್ನಡಪ್ರಭ ವಾರ್ತೆ ಧರ್ಮಸ್ಥಳ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ ೧ರಂದು ಸಂಜೆ ೬.೪೫ಕ್ಕೆ ಗೋಧೋಳಿ ಲಗ್ನದಲ್ಲಿ ೫೨ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ.ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಳ ಸೂತ್ರ, ಹೂವಿನ ಹಾರ ನೀಡಲಾಗುವುದು. ಎರಡನೇ ವಿವಾಹಕ್ಕೆ ಅವಕಾಶವಿರುವುದಿಲ್ಲ. ಮದುವೆಯ ಎಲ್ಲ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದಲೇ ಭರಿಸಲಾಗುವುದು.ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ೧೯೭೨ರಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಈತನಕ ಒಟ್ಟು ೧೨,೭೭೭ ಜೋಡಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಮದುವೆ ಆಗಲಿಚ್ಛಿಸುವವರು ಏ.೨೦ರೊಳಗೆ ಸವಿವರ ಮಾಹಿತಿ ಹಾಗೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದೂರವಾಣಿ ೦೮೨೫೬-೨೬೬೬೪೪, ವಾಟ್ಸಪ್ ನಂ. ೯೬೬೩೪೬೪೬೪೮, ೮೧೪೭೨೬೩೪೨೨.ಧರ್ಮಸ್ಥಳ ಕ್ಷೇತ್ರದ ಕುರಿತುಹಚ್ಚಹಸಿರಿನಿಂದ ಕಂಗೊಳಿಸುವ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ, ನೇತ್ರಾವತಿ ನದಿಯ ಸಮೀಪದ ಧರ್ಮಸ್ಥಳದ ಪುಣ್ಯಭೂಮಿಯಲ್ಲಿ ನೆಲೆಸಿರುವ ಶ್ರೀ ಮಂಜುನಾಥ ಸ್ವಾಮಿಯು ಶತ-ಶತಮಾನಗಳಿಂದ ನಾಡಿನ ಭಕ್ತ-ಜನರಆರಾಧ್ಯಶಕ್ತಿಯಾಗಿ ಲೋಕದ ದುಃಖ-ದುರಿತಗಳನ್ನು ಕಳೆಯುತ್ತಿದ್ದಾರೆ. ಅತ್ಯಂತ ಪವಿತ್ರಕ್ಷೇತ್ರವಾಗಿ ಮಾತ್ರವಲ್ಲದೆಅನ್ನ, ಅಭಯ, ಔಷಧ ಮತ್ತು ಶಿಕ್ಷಣ (ವಿದ್ಯೆ) ಈ ಚತುರ್ದಾನಪರಂಪರೆಯನ್ನು ಅನೂಚಾನವಾಗಿನಡೆಸಿಕೊಂಡು ಬರಲಾಗುತ್ತಿದೆ. ದಿನಕ್ಕೆ ಸಹಸ್ರಾರುಜನರುಅನ್ನಪೂರ್ಣಛತ್ರದಲ್ಲಿದೇವರ ಪ್ರಸಾದವನ್ನು ಸ್ವೀಕರಿಸುತ್ತಾರೆ. ಶ್ರೀ ಹೆಗ್ಗಡೆಯವರು ಬೀಡಿನಲ್ಲಿ ಸಮಸ್ಯೆಗಳನ್ನು ಅಳಲನ್ನು ಹೊತ್ತುತಂದಸಾವಿರಾರುಜನರಿಗೆ ಸ್ವಾಂತನ ಹೇಳಿ ಪರಿಹಾರ ಸೂಚಿಸಿ ಅಭಯದಾನ ಮಾಡುತ್ತಾರೆ. ನಾಡಿನಾದ್ಯಂತ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾದಾನದಕೈಂಕರ್ಯ ನಡೆಯುತ್ತಿದ್ದರೆ ಆಸ್ಪತ್ರೆಗಳನ್ನು ನಿರ್ಮಿಸಿ ಔಷಧದಾನಕಾರ್ಯ ಮಾಡಲಾಗುತ್ತಿದೆ. ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕಇನ್ನಿತರ ಸೇವಾ ಕಾರ್ಯಗಳಿಗೂ ಕ್ಷೇತ್ರವು ನಾಡಿನೆಲ್ಲೆಡೆ ಪ್ರಸಿದ್ಧಿಹೊಂದಿದೆ.ಇದುವರೆಗೂ ಶ್ರೀ ಕ್ಷೇತ್ರದಲ್ಲಿಈ ಹಿಂದಿನ ಹೆಗ್ಗಡೆಯವರು ಪಟ್ಟದಲ್ಲಿದ್ದುಕೊಂಡುಕ್ಷೇತ್ರದ ಮಹಿಮೆಯನ್ನು ನಾಡಿನುದ್ದಗಲಕ್ಕೂ ಪಸರಿಸಿದ್ದಾರೆ. ಶ್ರೀ ಸ್ವಾಮಿ ಹಾಗೂ ಧರ್ಮದೇವತೆಗಳ ಸೇವೆಯಲ್ಲಿ ಲೋಪವಾಗದಂತೆ ಶ್ರದ್ಧಾ-ಭಕ್ತಿಯಿಂದ ಕೈಂಕರ್ಯಗಳನ್ನು ನಡೆಸಿದ್ದಾರೆ. ಕ್ಷೇತ್ರದಅಭಿವೃದ್ಧಿಯಜೊತೆಗೆಚತುರ್ದಾನ ಸಂಪ್ರದಾಯಗಳನ್ನು ಅನೂಚಾನವಾಗಿ ಮುನ್ನಡೆಸಿದ್ದಾರೆ. ನಮ್ಮತಂದೆ ಪೂಜ್ಯರತ್ನವರ್ಮ ಹೆಗ್ಗಡೆಯವರ ಮೂಲಕ ಕ್ಷೇತ್ರವುತನ್ನ ಸೇವಾಕಾರ್ಯ ವಿಸ್ತಾರಗೊಳ್ಳಲು ಆರಂಭಿಸಿತು. ತದನಂತರ ನಾನುಕ್ಷೇತ್ರದಧರ್ಮಾಧಿಕಾರಿಯಾದ ಮೇಲೆ ಈ ಹಿಂದೆಇದ್ದ ಹಲವು ಕಾರ್ಯಕ್ರಮಗಳ ಜೊತೆಗೆಜನಸೇವೆಯೇಜನಾರ್ದನ ಸೇವೆ ಎಂಬಂತೆ ಮತ್ತಷ್ಟು ನೂತನ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು.ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ ಸ್ನಾತಕೋತ್ತರದವರೆಗೆ ವಿವಿಧ ಶಿಕ್ಷಣ ಸಂಸ್ಥೆಗಳಿವೆ. ವೈದ್ಯಕೀಯ, ದಂತ ವೈದ್ಯ, ತಾಂತ್ರಿಕ, ಫಿಸಿಯೋಥೆರಪಿ, ಪಾಲಿಟೆಕ್ನಿಕ್, ಕೈಗಾರಿಕಾತರಬೇತಿ ಕೇಂದ್ರಗಳು, ಆಯುರ್ವೇದ ಫಾರ್ಮಸಿ, ಆಸ್ಪತ್ರೆಗಳು, ಕಾಲೇಜುಗಳು, ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನಕಾಲೇಜು, ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಕಾಲೇಜ್‌ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್, ಎಸ್‌ಡಿಎಂ ಸ್ವಾಯತ್ತಕಾಲೇಜು, ಸ್ನಾತಕೋತ್ತರ ಆಡಳಿತೋದ್ಯಮ ಕೇಂದ್ರ, ಕಾನೂನು ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಮತ್ತು ಸಂಶೋಧನಾಕೇಂದ್ರ, ಎಸ್‌ಡಿಎಂ ವಿಶ್ವವಿದ್ಯಾಲಯಧಾರವಾಡ ಹೀಗೆ ಹಲವು ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಜೊತೆಗೆಜೀವನ ಮೌಲ್ಯಗಳನ್ನು ಧಾರೆಯೆರೆಯುತ್ತಿವೆ.
ಔಷಧದಾನದಉದ್ದೇಶದಿಂದ ಶ್ರೀ ಧ.ಮಂ. ಮೆಡಿಕಲ್‌ಟ್ರಸ್ಟ್ ಮೂಲಕವಾಗಿ ವಿವಿಧ ಆಸ್ಪತ್ರೆಗಳಿಗೆ ಸಿ.ಟಿ. ಸ್ಕಾ÷್ಯನಿಂಗ್‌ಉಪಕರಣಒದಗಣೆ, ವಿಶೇಷ ಉಚಿತ ಶಿಬಿರಗಳು, ಬಡರೋಗಿಗಳಿಗೆ ರಿಯಾಯಿತಿದರದಲ್ಲಿಔಷಧ, ಶಸ್ತ್ರಚಿಕಿತ್ಸೆ, ಆರೋಗ್ಯ ವಿಮಾ ಸೌಲಭ್ಯ ಹೀಗೆ ವಿವಿಧ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಮೂಲಕ ಗ್ರಾಮೀಣಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವ ಸಹಾಯ ಸಂಘಗಳನ್ನು ರಚಿಸಿ ಅವರಿಗೆ ಮಾಹಿತಿ, ಆರ್ಥಿಕ ಸಹಕಾರ, ಮಾಗದರ್ಶನ, ತರಬೇತಿಗಳನ್ನು ಒದಗಿಸಿ ಸ್ವಾವಲಂಬಿ ಬದುಕು ನಡೆಸಲು ಅನುವು ಮಾಡಿಕೊಡಲಾಗುತ್ತಿದೆ. ಪ್ರಸ್ತುತರಾಜ್ಯದಾದ್ಯಂತ ೬,೪೦,೮೦೭ ಸ್ವ ಸಹಾಯ ಸಂಘಗಳು ಚಾಲ್ತಿಯಲ್ಲಿದ್ದು, ಲಕ್ಷಾಂತರಜನರು ವಿವಿಧ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.
ಸ್ವ-ಉದ್ಯೋಗತರಬೇತಿ ಸಂಸ್ಥೆ, ರುಡ್‌ಸೆಟ್ ಮತ್ತು ಆರ್‌ಸೆಟಿಗಳ ಮೂಲಕ ವಿವಿಧ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರುದ್ಯೋಗಿಗಳನ್ನು ಸ್ವ-ಉದ್ಯೋಗಿಗಳನ್ನಾಗಿಸುವ ಕಾರ್ಯಅವಿರತವಾಗಿ ನಡೆಯುತ್ತಿದೆ. ಶಾಂತಿವನಟ್ರಸ್ಟ್ನಡಿಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯಗಳು ಆರೋಗ್ಯ ಸೇವೆಯನ್ನು ನೀಡುತ್ತಿವೆ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯೋಗತರಬೇತಿ, ಮೌಲ್ಯಾಧಾರಿತ ಪುಸ್ತಕಗಳ ಪ್ರಕಟಣೆ, ಅಂಚೆ-ಕುಂಚೆ ಸ್ಪರ್ಧೆಗಳನ್ನು ಆಯೋಜಿಸುತ್ತಾ ನೈತಿಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ''''ಮಂಜೂಷಾ'''' ವಸ್ತು ಸಂಗ್ರಹಾಲಯ, ಸಂಸ್ಕöÈತಿ ಸಂಶೋಧನ ಪ್ರತಿಷ್ಠಾನ, ಕಾರ್‌ಮ್ಯೂಸಿಯಂಗಳೆಲ್ಲ ಜ್ಞಾನ-ಅರಿವು ಮೂಡಿಸುವಲ್ಲಿ ನಿರತವಾಗಿವೆ. ಗ್ರಾಮಾಭಿವೃದ್ಧಿಯೋಜನೆಯ ನಿರಂತರ ಹಾಗೂ ಕ್ಷೇತ್ರದ ಮಂಜುವಾಣಿಕನ್ನಡ ಮಾಸ ಪತ್ರಿಕೆಗಳು ಪ್ರಕಟಗೊಳ್ಳುತ್ತಿವೆ.ಶ್ರೀ ಕ್ಷೇತ್ರದಗ್ರಾಮಾಭಿವೃದ್ಧಿಯೋಜನೆ ಮೂಲಕ ಸಹಸ್ರಾರು ಮಂದಿ ಸಮಾಜದಲ್ಲಿಉತ್ತಮ ಬದುಕನ್ನು ನಡೆಸುವಂತಾಗಿದ್ದಾರೆ. ಮದ್ಯವ್ಯಸನವನ್ನು ತ್ಯಜಿಸಿ ನವಜೀವನ ಮಾಡುತ್ತಿದ್ದಾರೆ. ಶಾಲೆಗಳಿಗೆ ಪೀಠೋಪಕರಣಒದಗಣೆ, ಶುದ್ಧಕುಡಿಯುವ ನೀರಿನ ಸೌಲಭ್ಯ, ಕೆರೆಗಳ ಅಭಿವೃದ್ಧಿ, ಸ್ವಚ್ಛತಾಕಾರ್ಯಕ್ರಮ, ಆಸ್ಪತ್ರೆಗಳಿಗೆ ನೆರವು, ಅಶಕ್ತರಿಗೆ ಮೂಲಭೂತ ಸೌಕರ್ಯಗಳ ಒದಗಣೆ, ವಿಕಲಚೇತನರಿಗೆಅಗತ್ಯ ವಸ್ತುಗಳ ಪೂರೈಕೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಸ್ವ-ಸಹಾಯ ಸಂಘಗಳ ಮೂಲಕ ಗ್ರಾಮೀಣರಿಗೆ ಸಾಮಾಜಿಕ, ಆರ್ಥಿಕ, ಆರೋಗ್ಯ, ಶಿಕ್ಷಣ ಇತ್ಯಾದಿ ವಿಷಯಗಳ ಮಾಹಿತಿ ನೀಡಿ, ಜಾಗೃತಿ ಮೂಡಿಸಿ ಕುಟುಂಬಗಳ ಅಭಿವೃದ್ಧಿಯಜೊತೆಗೆ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಂತೆ ವಾತ್ಸಲ್ಯಕಾರ್ಯಕ್ರಮ, ಸರಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿಕಾಮನ್‌ಸರ್ವಿಸ್ ಸೆಂಟರ್‌ಗಳನ್ನು ಪ್ರಾರಂಭಿಸಿದ್ದು, ಈಗಾಗಲೇ ೪೫ ಲಕ್ಷಕ್ಕೂ ಹೆಚ್ಚುಈ-ಶ್ರಮ್‌ಕಾರ್ಡ್ನ್ನುಅರ್ಹರಿಗೆ ವಿತರಿಸಲಾಗಿದೆ. ಸಿರಿ ಗ್ರಾಮೋದ್ತೋಗ ಸಂಸ್ಥೆಯ ಮೂಲಕ ಗ್ರಾಮೀಣ ಮಹಿಳೆಯರನ್ನು ಸ್ವ- ಉದ್ಯೋಗಿಗಳನ್ನಾಗಿಸಲು ಮತ್ತು ಸ್ವಾವಲಂಬಿಗಳನ್ನಾಗಿಸಲು ಕಾರ್ಯಕ್ರಮರೂಪಿಸಲಾಗಿದೆ. ಇದರಜೊತೆಗೆ ವಿವಿಧ ಸೇವೆಗಳನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸಲಾಗುತ್ತಿದೆ. ''''ಶೌರ್ಯ'''' ವಿಪತ್ತು ಪರಿಹಾರ ತಂಡಗಳ ಮೂಲಕ ವಿವಿಧ ಸಂದರ್ಭಗಳಲ್ಲಿ ಸಹಾಯಹಸ್ತಚಾಚಲಾಗಿದೆ. ಭೂಕುಸಿತ, ಬರಗಾಲ, ಜಲಪ್ರಳಯ, ನೆರೆ ಪ್ರವಾಹ, ಕೊರೋನ ಸಂಕಷ್ಟ ಕಾಲದಲ್ಲಿಜನತೆಗೆ ಶ್ರೀ ಕ್ಷೇತ್ರದಿಂದ ಸಹಾಯಹಸ್ತಚಾಚಲಾಗಿದೆ. ಸಾಮೂಹಿಕ ವಿವಾಹ, ಜನಮಂಗಲ, ಮದ್ಯವರ್ಜನ ಶಿಬಿರ, ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಕ್ಷೇತ್ರದಲ್ಲಿ ಭಜನಾತರಬೇತಿ ಶಿಬಿರ, ಪುರಾಣ ವಾಚನ ಪ್ರವಚನ, ಸಾಂಸ್ಕöÈತಿಕ ಕಾರ್ಯಕ್ರಮಗಳ ಆಯೋಜನೆ, ಯಕ್ಷಗಾನ, ಕಲೆ-ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಕಲಾ ಪೋಷಣೆ ಮಾಡುವ ಮೂಲಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಕ್ಷೇತ್ರವುಧಾರ್ಮಿಕ ನೆಲೆಗಟ್ಟನ್ನು ಹೊರತಾಗಿ ಸಾಮಾಜಿಕ, ಶೈಕ್ಷಣಿಕೆಇನ್ನಿತರ ಕ್ಷೇತ್ರಗಳಲ್ಲಿಯೂ ತೊಡಗಿಕೊಂಡು ಸೇವಾ ಕಾರ್ಯವನ್ನು ಮಾಡಲು ಸಾಧ್ಯವೆಂಬುದು ನಮ್ಮ ಈ ಪ್ರಯತ್ನಗಳಿಂದ ನಾವು ಕಂಡುಕೊಂಡ ಸತ್ಯವಾಗಿದೆ.ಶಿಥಿಲಾವಸ್ಥೆಯ ದೇಗುಲಗಳ ಪುನರ್‌ನಿರ್ಮಾಣ
ನಮ್ಮ ನಾಡಿನಲ್ಲಿ ಐತಿಹಾಸಿಕ ಪುರಾತನದೇವಸ್ಥಾನ, ಸ್ಮಾರಕಗಳಿವೆ. ಹಲವು ದೇವಾಲಯಗಳು ಶಿಥಿಲಾವಸ್ಥೆಯಲ್ಲಿರುವುದನ್ನು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾಗಕಂಡಿದ್ದೆ. ಬಹುತೇಕಊರಿನಜನರ ಮನಸ್ಸಿನಲ್ಲಿ ಜೀರ್ಣೋದ್ಧಾರಮಾಡುವ ಕನಸಿದ್ದು, ಹಣಕಾಸುಅಭಾವದಿಂದ ಸರಿಯಾದ ಪ್ರೋತ್ಸಾಹವಿಲ್ಲದಿರುವುದರಿಂದ, ಅಸಹಾಯಕರಾಗಿರುವುದನ್ನು ಗಮನಿಸಿ, ಪುರಾತನ ಶಿಥಿಲಗೊಂಡಿರುವ, ಶಿಲಾಮಯ ದೇವಸ್ಥಾನಗಳ ಸಂರಕ್ಷಣೆಗಾಗಿ ೧೯೯೧ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಧರ್ಮೋತ್ಥಾನಟ್ರಸ್ಟ್ ಎಂಬ ಟ್ರಸ್ಟನ್ನು ಸ್ಥಾಪಿಸಿದೆವು.ಟ್ರಸ್ಟ್ ನೇತೃತ್ವದಲ್ಲಿ ಸ್ಥಳೀಯರ ಸಹಭಾಗಿತ್ವದಲ್ಲಿಜೀರ್ಣೋದ್ಧಾರಕಾರ್ಯವನ್ನು ಸಂಪ್ರದಾಯಬದ್ಧವಾಗಿ, ಪುನರ್ ನಿರ್ಮಾಣಕಾರ್ಯವನ್ನುಕಟ್ಟಡದ ಮೂಲಸ್ವರೂಪಕ್ಕೆಧಕ್ಕೆಯುಂಟಾಗದಂತೆಅಧಿಕೃತ ಸಂರಕ್ಷಣಾಕೈಪಿಡಿಯಲ್ಲಿ ನಮೂದಿಸುವ ನಿಯಮಾವಳಿಗಳಿಗನುಸಾರವಾಗಿ ಹಾಗೂ ಇತ್ತೀಚೆಗಿನ ವೈಜ್ಞಾನಿಕ ವಿದ್ಯಮಾನಗಳನ್ನು ಅನುಸರಿಸಿಕೊಂಡು ಸಮರ್ಪಕರೀತಿಯಲ್ಲಿ ಕೆಲಸ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಈ ಕಾರ್ಯಕ್ಕೆಧರ್ಮೋತ್ಥಾನಟ್ರಸ್ಟ್, ಪುರಾತತ್ವಶಾಸ್ತ್ರ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ, ಕಲೆ, ಆಡಳಿತ ಇತ್ಯಾದಿ ಕ್ಷೇತ್ರದಲ್ಲಿ ಪರಿಣತಿಯುಳ್ಳ ಹಿರಿಯತಂತ್ರಜ್ಞರ ಸಲಹೆ, ಮಾರ್ಗದರ್ಶನಗಳನ್ನು ಪಡೆಯಲಾಗುತ್ತಿದೆ.ಮೊದಲ ಹತ್ತು ವರ್ಷದಲ್ಲಿರಾಜ್ಯದುದ್ದಗಲಕ್ಕೂ ನಡೆಸಿದ ಜೀಣೋದ್ಧಾರಕಾರ್ಯಅದರಗುಣಮಟ್ಟ ಗಮನಿಸಿದ ಕರ್ನಾಟಕ ಸರ್ಕಾರವು ಈ ಯೋಜನೆಗೆ ಕೈಜೋಡಿಸಿ ಐತಿಹಾಸಿಕ ಹಿನ್ನೆಲೆಯ ಸ್ಮಾರಕ ಸಂರಕ್ಷಣಾಕಾರ್ಯದಲ್ಲಿ ಸರ್ಕಾರದ ಸಹಭಾಗಿತ್ವದ ಸಂಸ್ಥೆ'''' ಎಂದು ಗುರುತಿಸಿದೆ. ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕಾರ್ಯಕ್ಕೆ ಶೇಕಡಾ ೪೦% ರಷ್ಟುಅನುದಾನÀವನ್ನು ಬಿಡುಗಡೆ ಮಾಡುತ್ತಾ, ಸಂಪೂರ್ಣ ಸಹಕಾರ ಹಾಗು ಪ್ರೋತ್ಸಾಹ ನೀಡುತ್ತಿದೆ.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಧರ್ಮೋತ್ಥಾನಟ್ರಸ್ಟ್ ವತಿಯಿಂದಇದುವರೆಗೆ ೨೭೮ ದೇವಸ್ಥಾನಗಳ ಜೀಣೋದ್ಧಾರಕಾರ್ಯವನ್ನುಕೈಗೆತ್ತಿಕೊಂಡು, ೨೬೪ ದೇವಸ್ಥಾನಗಳ ಜೀಣೋದ್ಧಾರಕಾರ್ಯವು ಮುಕ್ತಾಯವಾಗಿದ್ದು, ಸ್ಥಳೀಯರಿಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ೧೪ ದೇವಸ್ಥಾನದಜೀಣೋದ್ಧಾರಕಾರ್ಯ ಪ್ರಗತಿಯಲ್ಲಿದ್ದು, ೧೮ನೇ ಹಂತದಕ್ರಿಯಾಯೋಜನೆಯ ೧೨ ದೇವಸ್ಥಾನಗಳಿಗೆ ಕರ್ನಾಟಕ ಸರ್ಕಾರದ ಮಂಜೂರಾತಿದೊರೆತಿದ್ದು, ಮುಂದಿನ ದಿನಗಳಲ್ಲಿ ಜೀಣೋದ್ಧಾರಕಾರ್ಯ ಪ್ರಾರಂಭಗೊಳ್ಳಲಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಧರ್ಮೋತ್ಥಾನಟ್ರಸ್ಟ್ಜೀಣೋದ್ಧಾರಕಾರ್ಯಕ್ಕೆಇದುವರೆಗೆರೂ. ೩೭.೦೦ ಕೋಟಿ ವೆಚ್ಚ ಮಾಡಿದೆ.
ನೂತನ ಶ್ರದ್ಧಾಕೇಂದ್ರಗಳನ್ನು ನಿರ್ಮಿಸುವ ಬದಲಾಗಿ ಐತಿಹಾಸಿಕ ಹಿನ್ನೆಲೆ, ಪರಂಪರೆ ಹಾಗೂ ಧಾರ್ಮಿಕತೆಯುಳ್ಳ ಶಿಥಿಲಗೊಂಡ ದೇವಸ್ಥಾನಗಳನ್ನು ಪುನರ್‌ನಿರ್ಮಿಸುವುದುಅತ್ಯಂತಖುಷಿಕೊಡುವ ವಿಚಾರವಾಗಿದೆ. ಯಾಕೆಂದರೆ ಅವಶೇಷವಾಗಿ ಹೋಗುತ್ತಿದ್ದಗತವೈಭವೊಂದಕ್ಕೆ ಮರುಜೀವ ಪಡೆಯಿತಲ್ಲಎಂಬುದಾಗಿದೆ.ಶ್ರೀ ಕ್ಷೇತ್ರದಲ್ಲಿ ಪೂಜೆ, ಸೇವೆಗಳು, ಜಾತ್ರೆ, ಉತ್ಸವಗಳು ನಡೆಯುತ್ತಿದ್ದು, ನಾಡಿನ ವಿವಿಧೆಡೆಯಿಂದ ಭಕ್ತರು ಶ್ರದ್ಧೆ, ಭಕ್ತಿಗಳಿಂದ ಪೂಜೆ, ಸೇವೆಗಳನ್ನು ಮಾಡಿಸಿಕೊಂಡು, ಹರಕೆಗಳನ್ನು ಒಪ್ಪಿಸಿಕೊಂಡು ಧನ್ಯರಾಗುತ್ತಾರೆ. ಭಕ್ತರ ಸೇವೆಗಾಗಿ ವಸತಿ ಛತ್ರಗಳು, ಅನ್ನಛತ್ರ ಮತ್ತಿತರ ಸೌಲಭ್ಯಗಳಿವೆ. ದುಃಖ, ದುಮ್ಮಾನವನ್ನು ಕಳೆಯಲು, ನವಚೈತನ್ಯವನ್ನು ಪಡೆಯಲು, ಭಗವಂತನಿಗೆಕೃತಜ್ಞತೆಯನ್ನು ಸಲ್ಲಿಸಲು ಹೀಗೆ ಶ್ರೀ ಕ್ಷೇತ್ರಕ್ಕೆ ಬರುವವರು ಹೃದಯ ವೈಶಾಲ್ಯದಿಂದ ಸಂತಸ-ನೆಮ್ಮದಿಯಿಂದ ಹಿಂದಿರುಗುತ್ತಾರೆ. ಅಂತೆಯೇ ಕಷ್ಟ-ನಷ್ಟಗಳನ್ನು ಹೊಂದಿ, ಜೀವನ ನಿರ್ವಹಣೆಯ ಬಗ್ಗೆ ಚಿಂತಿತರಾಗಿರುವವರು ಶ್ರೀ ಕ್ಷೇತ್ರದ ವಿವಿಧ ಸಂಸ್ಥೆಗಳ ನೆರವು, ಮಾರ್ಗದರ್ಶನವನ್ನು ಪಡೆದು ಹೊಸ ಬದುಕನ್ನು ಕಂಡುಕೊಳ್ಳುತ್ತಾರೆ ಎಂಬುದು ನಮಗೆ ಸಂತೃಪ್ತಿಕೊಡುವ ಸಂಗತಿ.