ಸಾರಾಂಶ
ರಾಮನಗರ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಮುದಾಯ ಕಾರ್ಯಗಳಲ್ಲಿ ಕೈಜೋಡಿಸುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಬಿ.ಜಯಕರಶೆಟ್ಟಿ ಹೇಳಿದರು. ತಾಲೂಕಿನ ಹುಣಸನಹಳ್ಳಿ ಮಹದೇಶ್ವರ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕೆಂಗಲ್ ಯೋಜನೆಯಿಂದ ದೇವಾಲಯದ ಅಭಿವೃದ್ಧಿ ಸೇವಾ ಟ್ರಸ್ಟ್ ಪದಾಧಿಕಾರಿಗಳಿಗೆ 2 ಲಕ್ಷ ರು. ಅನುದಾನದ ಡಿಡಿ ನೀಡಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಸೇವಾ ಕಾರ್ಯಗಳು ಸಮಾಜದ ಪ್ರಗತಿಗೆ ಪೂರಕವಾಗಿವೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಹಲವಾರು ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ್ದಾರೆ ಎಂದರು. ಕೆಂಗಲ್ ಯೋಜನಾಧಿಕಾರಿ ನಾಗಭೂಷಣ್ ಶಣೈ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿಭೂತಿಕೆರೆ ಶಿವಲಿಂಗಯ್ಯ, ಕೈಲಾಂಚ ವಲಯ ಮೇಲ್ವೀಚಾರಕಿ ಚಿಣ್ಣಮ್ಮ, ಮಹದೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚಿಕ್ಕೇಗೌಡ, ಗೌರವಾಧ್ಯಕ್ಷ ಮಹದೇವಯ್ಯ, ಕಾರ್ಯದರ್ಶಿ ವೆಂಕಟಸ್ವಾಮಿ, ನಿರ್ದೇಶಕರಾದ ಪುಟ್ಟಸ್ವಾಮಿ ರಾವ್, ಪ್ರಕಾಶ್, ಸಿದ್ದರಾಜು, ಗೀತಾಕುಮಾರಿ, ಕಾಂತರಾಜು, ಕೋಟಯ್ಯ, ಕೆಂಪರಾಜು, ಚಲುವರಾಜು, ವಿಜಯಕುಮಾರ್, ಗೋವಿಂದಯ್ಯ, ಕೆಂಪಯ್ಯ ಉಪಸ್ಥಿತರಿದ್ದರು.15ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕಿನ ಹುಣಸನಹಳ್ಳಿ ಮಹದೇಶ್ವರ ದೇಗುಲ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಿ.ಜಯಕರಶೆಟ್ಟಿ ಅವರು ದೇವಾಲಯದ ಟ್ರಸ್ಟ್ ಪದಾಧಿಕಾರಿಗಳಿಗೆ 2 ಲಕ್ಷ ರು. ಅನುದಾನದ ಡಿಡಿ ವಿತರಿಸಿದರು. ಕೆಂಗಲ್ ಯೋಜನಾಧಿಕಾರಿ ನಾಗಭೂಷಣ್ ಶಣೈ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿಭೂತಿಕೆರೆ ಶಿವಲಿಂಗಯ್ಯ ಇತರರಿದ್ದರು.