ಸಾರಾಂಶ
ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಭೇಟಿ ನೀಡಿ ಉದ್ಯಾನವನ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಆಲಿಸಿದರು.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಉದ್ಯಾನವನ ಕೂಲಿ ಕಾರ್ಮಿಕರ ಇನ್ನೊಂದು ಸಂಘಟನೆ ಎಐಯುಸಿಟಿಯು ಸಂಯೋಜನೆಯ ಸಂಯುಕ್ತ ಆಲಮಟ್ಟಿ ಕೆಬಿಜೆಎನ್ ಎಲ್ ಗಾರ್ಡ್‌ನ್ ಡಿ ಗ್ರುಪ್ ನೌಕರರ ಸಂಘ ಸೋಮವಾರದಿಂದ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಆರಂಭಿಸಿರುವ ಅನಿರ್ದಿಷ್ಟ ಅಹೋರಾತ್ರಿ ಧರಣಿ ಬುಧವಾರ ಮೂರು ದಿನ ಪೂರ್ಣಗೊಳಿಸಿತು. ಬುಧವಾರದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಭೇಟಿ ನೀಡಿ ಉದ್ಯಾನವನ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಆಲಿಸಿದರು. ಈ ಬಗ್ಗೆ ತಮ್ಮ ತಂದೆಯವರ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು. ಮಂಜುನಾಥ ಹಿರೇಮಠ, ಮಲ್ಲೇಶಿ ರಾಠೋಡ, ಲಕ್ಷ್ಮಣ ಬ್ಯಾಲ್ಯಾಳ, ದ್ಯಾಮಣ್ಣ ಬಿರಾದಾರ, ಪ್ರಭು ಹಿರೇಮಠ, ಬಸು ಚಲವಾದಿ, ಮಲ್ಲನಗೌಡ ಬಿರಾದಾರ, ಯಲ್ಲವ್ವ ಮೇಟಿ, ರಮೇಶ ಅಕ್ಕಿ, ಮುತ್ತು ಬಡಿಗೇರ, ಅನಿತಾ ಜಾಧವ, ಗುರಲಿಂಗವ್ವ ಗೌಡರ ಮತ್ತೀತರರು ಇದ್ದರು.