ಸಾರಾಂಶ
- ನ. 2ರಿಂದ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ । ಮಂಗಲಮಂದಿರ, ಚೌಡೇಶ್ವರಿ ದೇವಾಲಯ ಉದ್ಘಾಟನೆ, ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ, ಬೀರೂರುಪಟ್ಟಣದಲ್ಲಿ ನ. 2 ಮತ್ತು 3ರಂದು ನಡೆಯುವ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮಜಾಗೃತಿ ಸಮಾರಂಭ ಸನಾತನ ಧರ್ಮದ ಸಂರಕ್ಷಣೆಗೆ ಪ್ರೇರಣಾದಾಯಕವಾಗಲಿ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಹೇಳಿದರು.
ಡಿ.ವಿ.ಹಾಲಪ್ಪ ರಸ್ತೆ ಸಂಪಾದನೆ ಮಠ ಆವರಣದಲ್ಲಿ ನಡೆದ ಮಂಗಲಮಂದಿರ ಹಾಗೂ ಚೌಡೇಶ್ವರಿ ದೇವಾಲಯ ಉದ್ಘಾಟನೆ ಮತ್ತು ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ವಿವಿಧ ಸಮಿತಿಗಳ ರಚನೆ ಹಾಗೂ ರೂಪರೇಷೆಗಳ ಮೂಲಕ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಮಹಿಳೆಯರು ಮುಂಚೂಣಿಯಲ್ಲಿ ನಿಂತು ತಮಗೆ ವಹಿಸಿರುವ ಜವಾಬ್ದಾರಿ ನಿರ್ವಹಿಸಲು ಶ್ರಮಿಸುತ್ತಿದ್ದಾರೆ. ಎಲ್ಲಾ ಹಳ್ಳಿಗಳಿಗೆ ಮಾಹಿತಿ ತಲುಪಿಸಿ ಹೆಚ್ಚಿನ ಗ್ರಾಮಸ್ಥರು ಈ ಉತ್ಸವದಲ್ಲಿ ಪಾಲ್ಗೊಳ್ಳುವಂತಾಗಬೇಕು. ಸ್ವಾಮೀಜಿ ಹಾಗೂ ಮುಖಂಡರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಭಕ್ತರಿಗೆ ಪ್ರೇರಕವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಚ್.ಎಂ. ಲೋಕೇಶ್ ಮಾತನಾಡಿ, ‘ಅಡ್ಡಪಲ್ಲಕ್ಕಿ ಮಹೋತ್ಸವದ ಸಮಿತಿ ಕಾರ್ಯಪ್ರವೃತ್ತವಾಗಿವೆ. ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಉತ್ಸವದ ಯಶಸ್ಸಿಗೆ ಶ್ರಮಿಸಬೇಕು ಎಂದರು. ಶಿವಾನಂದಾ ಶ್ರಮ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಲ್ಲಿಕಾರ್ಜುನ್, ಅಡ್ಡಪಲ್ಲಕ್ಕಿ ಮಹೋತ್ಸವದ 2 ದಿನ ಪಟ್ಟಣ ಕೈಲಾಸ ದಂತೆ ಕಂಗೊಳಿಸಬೇಕು. ಜಾತಿ, ಜನಾಂಗಗಳನ್ನು ಬದಿಗಿಟ್ಟು ಮಾನವ ಧರ್ಮ ಎಂಬ ಧ್ಯೇಯ ಮುಂದಿಟ್ಟು ಕಾರ್ಯಕ್ರಮ ನಡೆಯಬೇಕು ಎಂದರು.ರಂಭಾಪುರಿ ಖಾಸಾ ಶಾಖಾ ಪೀಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ರೂಪರೇಷೆ, ಸಮಿತಿಗಳ ಜವಾಬ್ದಾರಿ ಮತ್ತು ಪಲ್ಲಕ್ಕಿ ಮಹೋತ್ಸವದ ತಯಾರಿ ಕುರಿತು ಮಾಹಿತಿ ನೀಡಿದರು.ತಾಲೂಕು ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ರೇಣುಕಾರಾಧ್ಯ, ಮುಖಂಡರಾದ ಎಸ್.ರಮೇಶ್, ಶಿವಾನಂದಸ್ವಾಮಿ, ಪ್ರೇಮ್ಕುಮಾರ್, ನಿರಂಜನ್, ಶಾಂತಾ ಮಾತನಾಡಿದರು.ಕೆ. ಎಂ. ವಿನಾಯಕ್, ಎಂ.ಎಂ. ವಿಶ್ವಾರಾಧ್ಯ, ಬಿ.ಆನಂದ್ ಶೆಟ್ಟಿ, ಕೆ.ಎಸ್. ಸಂಪತ್ಕುಮಾರ್, ಜಿಲ್ಲಾ ಹಾಗೂ ತಾಲೂಕು ವೀರಶೈವ-ಲಿಂಗಾಯತ ಸಮಾಜ, ರೇಣುಕಾ ಸಾಂಸ್ಕೃತಿಕ ಸಂಘ ಹಾಗೂ ವಿವಿಧ ಸಮಾಜಗಳ ಮುಖಂಡರು, ಮಹಿಳಾ ಸಂಘಟನೆಗಳ ಸದಸ್ಯರು ಇದ್ದರು.13 ಬೀರೂರು 1ಬೀರೂರು ಡಿ.ವಿ.ಹಾಲಪ್ಪ ಬಡಾವಣೆ ಸಂಪಾದನೆ ಮಠದ ಆವರಣದಲ್ಲಿ ನಡೆದ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಮಂಗಲಮಂದಿರ ಹಾಗೂ ದೇವಾಲಯ ಉದ್ಘಾಟನೆ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಮಾತನಾಡಿದರು