ಸಾರಾಂಶ
ಗುತ್ತಲ ಸಮೀಪದ ನೆಗಳೂರಿನ ಸಂಸ್ಥಾನ ಹಿರೇಮಠದ ನೂತನ ಮಹಾರಥ ಲೋಕಾರ್ಪಣೆ ನಿಮಿತ್ತ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಪರಿವರ್ತನೆಡೆಯಗೆ ಧರ್ಮಜಾಗೃತಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗುತ್ತಲ: ಸಮೀಪದ ನೆಗಳೂರಿನ ಸಂಸ್ಥಾನ ಹಿರೇಮಠದ ನೂತನ ಮಹಾರಥ ಲೋಕಾರ್ಪಣೆ ನಿಮಿತ್ತ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಪರಿವರ್ತನೆಡೆಯಗೆ ಧರ್ಮಜಾಗೃತಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶನಿವಾರ ನೆಗಳೂರಿನ ಸಂಸ್ಥಾನ ಹಿರೇಮಠದಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ನವೆಂಬರ್ 2 ರಿಂದ 2026ರ ಫೆ. 7ರ ವರೆಗೆ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಶ್ರೀಮಠದ ನೂತನ 36 ಅಡಿ ಎತ್ತರದ ಮಹಾರಥದ ಲೋಕಾರ್ಪಣೆ ನಿಮಿತ್ತ ಸಮಸ್ತ ಜನತೆಗೆ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಮಂತ್ರಿಸಬೇಕೆಂಬ ಸದಾಶಯದಿಂದ ಗ್ರಾಮಗಳಲ್ಲಿ ಪರಿವರ್ತನೆಯಡೆಗೆ ಧರ್ಮಜಾಗೃತಿ ಎಂಬ ಪುರಾಣ ಪ್ರವಚನ ಕಾರ್ಯಕ್ರಮವನ್ನು 5 ದಿನಗಳ ಕಾಲ ಜರುಗಿಸುವುದು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಸದ್ಭಾವನಾ ಪಾದಯಾತ್ರೆ ಜರುಗಿಸಿ ಭಕ್ತಾದಿಗಳಿಂದ ದುಶ್ಚಟಗಳ ಭಿಕ್ಷೆ ಪಡೆದು ಅವರಿಗೆ ಸದ್ಗುಣಗಳ ದೀಕ್ಷೆ ನೀಡುವುದು, ಮೊದಲನೇ ದಿನ ಶ್ರೀಮಠದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗುವುದು. ಎರಡನೇ ದಿನ ಗ್ರಾಮದ ಜನತೆಗೆ ಭಸ್ಮಧಾರಣೆ, ಮೂರನೇ ದಿನ ರುದ್ರಾಕ್ಷಿಧಾರಣೆ, ನಾಲ್ಕನೇ ದಿನ ಗುರುವಿನ ಕೈಬುತ್ತಿ ಪ್ರಸಾದ, 5ನೇ ದಿನಮಹಿಳೆಯರಿಗೆ ಉಡಿ ತುಂಬುವುದು, ಈ ವಿಶೇಷ ಕಾರ್ಯಕ್ರಮಗಳನ್ನು ಜರುಗಿಸುವುದರ ಮೂಲಕ ಭಕ್ತಾದಿಗಳನ್ನು ಶ್ರೀಮಠದ ನೂತನ ಮಹಾರಥದ ಲೋಕಾರ್ಪಣೆಗೆ ಆಮಂತ್ರಿಸಲಾಗುವುದು, ಇದೇ ನವೆಂಬರ್ 2ರಿಂದ 7 ರವರೆಗೆ ಕೊಡಬಾಳ ಗ್ರಾಮದಲ್ಲಿ ಪ್ರವಚನ ಕಾರ್ಯಕ್ರಮ ಜರುಗುವುದು. ಜಲ್ಲಾಪುರದ ಗುರುಮಹಾಂತಯ್ಯ ಆರಾಧ್ಯಮಠ ಇವರಿಂದ ಪುರಾಣ ಪ್ರವಚನ ಹಾಗೂ ಸಂಗೀತಕ್ಕೆ ಹಿರೇಮರಳಿಹಳ್ಳಿ ಷಣ್ಮುಖಪ್ಪ ಕಮ್ಮಾರ ತಬಲಾಸಾಥ್ ನೀಡುವರು ಎಂದರು.;Resize=(128,128))
;Resize=(128,128))