ಕ್ರೀಯಾಶೀಲರಾಗಿ ಕಾನಿರ್ವಹಿಸುತ್ತಿದ್ದ ಧರ್ಮಣ್ಣ ದೊಡ್ಡಮನಿ ಧಿಮಂತ ನಾಯಕ

| Published : Jul 15 2024, 01:54 AM IST

ಕ್ರೀಯಾಶೀಲರಾಗಿ ಕಾನಿರ್ವಹಿಸುತ್ತಿದ್ದ ಧರ್ಮಣ್ಣ ದೊಡ್ಡಮನಿ ಧಿಮಂತ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ ಕ್ರೀಯಾಶೀಲರಾಗಿ ಕಾನಿರ್ವಹಿಸುತ್ತಿದ್ದ ಅವರು ಜನ ಸೇವೆಯೆ ಜನಾರ್ಧನ ಸೇವೆಯೆಂದು ಭಾವಿಸಿ ಜನತೆಯ ನಾಡಿ ಮಿಡಿತ ಅರಿತು ಸಮಾಜ ಮುಖಿ ಕೆಲಸ ಮಾಡುವದರ ಮೂಲಕ ಜನಾನುರಾಗಿ ಆಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿ ಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಜೇವರ್ಗಿ

ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ದಿ. ಧರ್ಮಣ್ಣ ದೊಡ್ಡಮನಿ ಕ್ರೀಯಾಶೀಲರಾಗಿ ಕಾನಿರ್ವಹಿಸುತ್ತಿದ್ದ ಅವರು ಜನ ಸೇವೆಯೆ ಜನಾರ್ಧನ ಸೇವೆಯೆಂದು ಭಾವಿಸಿ ಜನತೆಯ ನಾಡಿ ಮಿಡಿತ ಅರಿತು ಸಮಾಜ ಮುಖಿ ಕೆಲಸ ಮಾಡುವದರ ಮೂಲಕ ಜನಾನುರಾಗಿ ಆಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿ ಕುಮಾರ ಹೇಳಿದರು.

ಪಟ್ಟಣದ ಹೊರವಲಯದ ಭೂತಪೂರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ದಿ.ಧರ್ಮಣ್ಣ ದೊಡ್ಡಮನಿ ಅವರ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವತ್ತು ಅವರು ಮೌಲ್ಯಾಧಾರಿತ ರಾಜಕಾರಣಿ ಜನಾನುರಾಗಿಯಾಗಿದ್ದ ಅವರ ನಡೆ ನುಡಿ, ಸರಳ, ಸಜ್ಜನಿಕೆ ರಾಜಕಾರಣಿಗಳಿಗೆ ಮಾಧರಿಯಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೊನ್ನದ ಡಾ.ಶಿವಾನಂದ ಸ್ವಾಮೀಜಿ, ನೆಲೋಗಿಯ ಸಿದ್ದಲಿಂಗ ಸ್ವಾಮೀಜಿ, ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ, ಯಡ್ರಾಮಿಯ ಸಿದ್ಧಲಿಂಗ ಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ಬಸವ ಪಟ್ಟಣದ ಮರೇಪ್ಪ ಮುತ್ಯಾ, ಚಿಗರಹಳ್ಳಿಯ ಸಿದ್ಧಕಬೀರ ಸ್ವಾಮೀಜಿ, ಮಾಜಿ ಸಂಸದ ಡಾ.ಉಮೇಶ ಜಾದವ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ರಮೇಶಬಾಬು ವಕೀಲ್, ಮಲ್ಲಿನಾಥಗೌಡ ಪಾಟೀಲ್ ಯಲಗೋಡ, ಕಾಂಗ್ರೆಸ್ ಮುಖಂಡ ಶಿವಲಾಲ್‌ಸಿಂಗ್, ನಿಂಗಣ್ಣ ದೊಡ್ಡಮನಿ, ಶೋಭಾ ಬಾಣಿ, ಸಾಯಿಬಣ್ಣ ದೊಡ್ಡಮನಿ, ಬೈಲಪ್ಪ ನೆಲೋಗಿ, ಹಳ್ಳೇಪ್ಪಾಚಾರ್ಯ ಜೋಶಿ, ಶಾಂತಪ್ಪ ಕೂಡಲಗಿ, ರೇವಣಸಿದ್ದ ಸಂಕಾಲಿ, ಬಾಗೇಶ ಹೋತಿನಮಡು, ಗುರುಗೌಡ ಪಾಟೀಲ್, ಸಂಗನಗೌಡ ರದ್ದೇವಾಡಗಿ, ಸಂತೋಷ ಮಲ್ಲಾಬಾದ, ದೇವಿಂದ್ರಪ್ಪ ಮುತ್ತಕೋಡ, ರಾಜಶೇಖರ ಮುತ್ತಕೋಡ, ಸೇರಿದಂತೆ ಧರ್ಮಣ್ಣ ದೊಡ್ಡಮನಿ ಅವರ ಅಭಿಮಾನಿಗಳು ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.