ಸಾರಾಂಶ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಧರ್ಮ ವಿರೋಧಿ ಷಡ್ಯಂತ್ರವನ್ನು ರಾಷ್ಟ್ರೀಯ ತನಿಖಾ ತಂಡದ ಮೂಲಕ ಬಯಲಿಗೆಳೆಯುವಂತೆ ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ನೇತೃತ್ವದಲ್ಲಿ ಐನೂರಕ್ಕೂ ಹೆಚ್ಚು ಜನರ ಸಹಿ ಸಂಗ್ರಹಿಸಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.ಈ ಹಿಂದೂ ವಿರೋಧಿ ಷಡ್ಯಂತ್ರದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕೆಲವು ಧರ್ಮಾಂಧ ಶಕ್ತಿಗಳೂ ಸೇರಿಕೊಂಡಿರುವುದಾಗಿ ಗುಮಾನಿ ಬರುತ್ತಿದೆ. ಇಲ್ಲಿ ನೂರಾರು ಶವ ಹೂತಿರುವುದಾಗಿ ಚನ್ನಯ್ಯ ಸುಳ್ಳು ದೂರು ನೀಡಿದ್ದ. ಅಲ್ಲದೇ ಸುಜಾತಾ ಭಟ್ಟ, ಸೇರಿದಂತೆ ಹಲವರು ಸುಳ್ಳನ್ನೇ ಸೃಷ್ಟಿಸಿ, ಮಾಧ್ಯಮದ ಮುಂದೆ ಪೋಲಿಸರಿಗೆ ನೀಡಿರುವುದು ಜಗಜ್ಜಾಹಿರ. ಈ ಹಿನ್ನೆಲೆ ಸಮಾಜಘಾತುಕ ವ್ಯಕ್ತಿಗಳಾದ ಮಹೇಶ ತಿಮ್ಮರೋಡಿ, ಜಯಂತ ಟಿ., ವಿಧಾನಸೌಧದಲ್ಲಿ ಬಾಂಬಿಟ್ಟು ಸಿಕ್ಕಿ ಬಿದ್ದಿದ್ದ ಗಿರೀಶ ಮಟ್ಟಣ್ಣ, ಇಸ್ಲಾಮಿಕ್ ಟೆರರಿಸ್ಟ್ ಮಹ್ಮದ್ ಸಮೀರ ಹಾಗೂ ಇನ್ನೂ ಅನೇಕರು ದೇಶ ವಿರೋಧಿ, ಧರ್ಮ ವಿರೋಧಿ, ಮಂದಿರ ವಿರೋಧಿ ಕಾರ್ಯದಲ್ಲಿ ಬೃಹತ್ ಗ್ಯಾಂಗನ್ನು ಹೊಂದಿದ್ದಾರೆ. ಇದು ಹೊರಗೆ ಬರಬೇಕಾದರೆ ರಾಷ್ಟ್ರೀಯ ತನಿಖಾ ದಳದಿಂದ ಮಾತ್ರ ಸಾಧ್ಯ. ಆದ್ದರಿಂದ ಎನ್.ಐ.ಎ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭ ಶ್ರೀಪಾದ ಉಪಾಧ್ಯ, ಗಜಾನನ ನಾಯ್ಕ, ಮಹೇಶ ನಾಯ್ಕ, ಬಾಬು ಬಾಂದೇಕರ, ಧೀರಜ ತಿನೇಕರ, ಅರ್ಜುನ ಬದ್ದಿ, ಕೇಶವ ಗಾಂವಕರ, ಚಂದನ ನಾಯ್ಕ ಮತ್ತಿತರರಿದ್ದರು.ನ.೪ಕ್ಕೆ ಪಂಚಗವ್ಯ ಚಿಕಿತ್ಸೆ, ಗವ್ಯೋತ್ಪನ್ನ ಪ್ರಾತ್ಯಕ್ಷಿಕೆ:
ಜಿಲ್ಲಾ ಗೋಸೇವಾ ಗತಿವಿಧಿಯ ಶಿರಸಿ ವಿಭಾಗ, ಪಂಚಗವ್ಯ ಚಿಕಿತ್ಸೆ ಮತ್ತು ಗವ್ಯೋತ್ಪನ್ನ ಮಾರಾಟ ಆಯಾಮ, ಶ್ರೀ ಗೋವರ್ಧನ ಗೋಶಾಲೆ ಕರಡೊಳ್ಳಿ, ಧನ್ವಂತರಿ ಆಯುರ್ವೇದಿಕ್ ಮಹಾವಿದ್ಯಾಲಯ ಸಿದ್ದಾಪುರ ಹಾಗೂ ಸಂಕಲ್ಪ ಸೇವಾ ಸಂಸ್ಥೆ ಯಲ್ಲಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಂಚಗವ್ಯ ಚಿಕಿತ್ಸೆ ಹಾಗೂ ಗವ್ಯೋತ್ಪನ್ನ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನ.೪ರಂದು ಯಲ್ಲಾಪುರದ ಗಾಂಧಿ ಕುಟೀರದಲ್ಲಿ ಆಯೋಜಿಸಲಾಗಿದೆ.ಬೆಳಗ್ಗೆ ೧೦ರಿಂದ ಮಧ್ಯಾಹ್ನ ೨ರವರೆಗೆ ಪಂಚಗವ್ಯ ಚಿಕಿತ್ಸೆ ನಡೆಯಲಿದ್ದು, ಡಾ. ಡಿ.ಪಿ. ರಮೇಶ, ಡಾ. ಪದ್ಮಾವತಿ ಕುಲಕರ್ಣಿ, ಡಾ. ವಿಜಯಕುಮಾರ ಮಠ ಚಿಕಿತ್ಸೆ ನೀಡಲಿದ್ದಾರೆ. ಪಂಚಗವ್ಯ ಆಧಾರಿತ ಕ್ಯಾನ್ಸರ್ ಪೂರಕ ಚಿಕಿತ್ಸೆ ಹಾಗೂ ವಿವಿಧ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಲಿದ್ದಾರೆ.ಕ್ಯಾನ್ಸರ್ ಚಿಕಿತ್ಸೆಗೆ ಹಿಂದಿನ ತಪಾಸಣಾ ದಾಖಲೆ ತರಬೇಕು. ತಪಾಸಣೆಗೆ ಒಳಪಡಲು ಇಚ್ಛಿಸುವವರು ನ. ೩ ರ ಒಳಗೆ ನಾರಾಯಣ ಸಭಾಹಿತ- ೮೭೬೨೫೨೦೯೮೯ ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.ಅ. ೩೧ರಿಂದ ನ. ೪ರವರೆಗೆ ಗಾಂಧಿ ಕುಟೀರದ ಆವಾರದಲ್ಲಿ ನಡೆಯಲಿರುವ ೩೯ನೇ ಸಂಕಲ್ಪ ಉತ್ಸವದ ಸಂದರ್ಭದಲ್ಲಿ ಗವ್ಯೋತ್ಪನ್ನ ಮಳಿಗೆಗಳಲ್ಲಿ ಇಡಲು ಮುಕ್ತ ಅವಕಾಶವಿದೆ. ಆಸಕ್ತರು ಅ. ೨೮ ರ ಒಳಗೆ ಗಣಪತಿ ಭಟ್ಟ ಕೋಲಿಬೇಣ- ೮೭೬೨೭೫೯೨೪೦, ನಾರಾಯಣ ಸಭಾಹಿತ- ೮೭೬೨೫೨೦೯೮೯ ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.
;Resize=(128,128))
;Resize=(128,128))