ಧರ್ಮಸ್ಥಳದ ಯುವತಿ ಪಂಜಾಬಿನಲ್ಲಿ ಸಾವು : ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ

| N/A | Published : May 20 2025, 01:51 AM IST / Updated: May 20 2025, 09:24 AM IST

ಧರ್ಮಸ್ಥಳದ ಯುವತಿ ಪಂಜಾಬಿನಲ್ಲಿ ಸಾವು : ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೊಫೆಸರ್, ಎರಡು ಮಕ್ಕಳ ತಂದೆ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್ ಮ್ಯಾಥ್ಯೂ (45) ಮತ್ತು ಆಕಾಂಕ್ಷ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಆಕಾಂಕ್ಷಳ ಕೆಲವೊಂದು ನಡವಳಿಕೆಯಿಂದ ಬಿಜಿಲ್ ಮ್ಯಾಥ್ಯೂ ಬ್ರೇಕಪ್ ಮಾಡಿಕೊಂಡಿದ್ದ.

  ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬೊಳಿಯರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ದಂಪತಿ ಎರಡನೇ ಪುತ್ರಿ ಏರೋಸ್ಪೇಸ್ ಎಂಜಿನಿಯರ್ ಆಗಿ ದೆಹಲಿಯಲ್ಲಿ ಉದ್ಯೋಗಿಯಾಗಿದ್ದ ಆಕಾಂಕ್ಷ ಎಸ್. ನಾಯರ್ (22) ನಿಗೂಢ ಸಾವಿನ ಕಾರಣ ಬಯಲಾಗಿದ್ದು, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.ಪಂಜಾಬ್ ಜಿಲ್ಲೆಯ ಪಗ್ವಾಡದಲ್ಲಿರುವ ಎಲ್.ಪಿ.ಯು (ಲವ್ಲಿ ಪ್ರೊಫೆಶನಲ್‌ ಯೂನಿವರ್ಸಿಟಿ) ಮೆಂಟರ್ ಪ್ರೊಫೆಸರ್, ಎರಡು ಮಕ್ಕಳ ತಂದೆ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್ ಮ್ಯಾಥ್ಯೂ (45) ಮತ್ತು ಆಕಾಂಕ್ಷ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಆಕಾಂಕ್ಷಳ ಕೆಲವೊಂದು ನಡವಳಿಕೆಯಿಂದ ಬಿಜಿಲ್ ಮ್ಯಾಥ್ಯೂ ಬ್ರೇಕಪ್ ಮಾಡಿಕೊಂಡಿದ್ದ.

ಇದೇ ವಿಚಾರದಲ್ಲಿ ದೆಹಲಿಯಿಂದ ಪಂಜಾಬ್‌ನ ಪಾಗ್ವಡಕ್ಕೆ ಮೇ 16ರಂದು ಬಂದು ಮ್ಯಾಥ್ಯೂ ಮನೆಗೆ ಹೋಗಿ ನಿನ್ನ ಹೆಂಡತಿ ಮಕ್ಕಳಿಬ್ಬರನ್ನು ಬಿಟ್ಟು ನನ್ನ ಜೊತೆ ಬಂದು ಮದುವೆಯಾಗಬೇಕೆಂದು ಬೇಡಿಕೆ ಇಟ್ಟಿದ್ದಳು. ಇದನ್ ಮ್ಯಾಥ್ಯೂ ಕ್ಯಾರೇ ಮಾಡದೆ ಪ್ರೀತಿಯನ್ನು ಕೈ ಚೆಲ್ಲಿದ್ದಾನೆ. ಇದರಿಂದ ನೊಂದ ಆಕಾಂಕ್ಷ ಮೇ 17ರಂದು ಬೆಳಗ್ಗೆ 11 ಗಂಟೆಗೆ ಕೇರಳ ಮೂಲದ ಸ್ನೇಹಿತನ ಜೊತೆ ಬೈಕ್ ಮೂಲಕ ಕಾಲೇಜಿಗೆ ಹೋಗಿ ಮ್ಯಾಥ್ಯೂಗೆ ‘ನಾನು ಸಾಯುತ್ತೇನೆ’ ಎಂದು ಮೆಸೇಜ್ ಹಾಕಿ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಪಂಜಾಬ್ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ‌.

ಪ್ರೊಫೆಸರ್‌ ವಿರುದ್ಧ ಪ್ರಕರಣ ದಾಖಲು:

ಮೃತ ಆಕಾಂಕ್ಷ ಸಹೋದರ ಆಕಾಶ್ ನಾಯರ್ ಜಲಂಧರ್ ಪೊಲೀಸ್ ಠಾಣೆಯಲ್ಲಿ ಮೇ 18ರಂದು ಸಂಜೆ ಎಲ್.ಪಿ.ಯು ಕಾಲೇಜಿನ ಪ್ರೊಫೆಸರ್ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್‌ ಮ್ಯಾಥ್ಯೂ (45) ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕುರಿತು ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪ್ರೊಫೆಸರ್ ವಿರುದ್ಧ ತನಿಖೆ ನಡೆಸಲಿದ್ದಾರೆ.

ಮೊಬೈಲ್‌ನಲ್ಲಿ ಡೆತ್ ನೋಟ್ ಪತ್ತೆ:

ಆಕಾಂಕ್ಷ ಸಾವಿಗೂ ಮುನ್ನ ತನ್ನ ಮೊಬೈಲ್‌ನಲ್ಲಿ ಮೇ17ರಂದು ವಾಟ್ಸಾಪ್‌ನಲ್ಲಿ ಪ್ರೊಫೆಸರ್ ಬಿಜಿಲ್ ಮ್ಯಾಥ್ಯೂ ಮೊಬೈಲ್‌ಗೆ ಕಳುಹಿಸಿದ ಡೆತ್ ನೋಟ್ ಪತ್ತೆಯಾಗಿದ್ದು, ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಸರ್ಟಿಫಿಕೇಟ್ ತರಲು ಅಂತ ಹೇಳಿದ್ದಳು:

ಆಕಾಂಕ್ಷ ಮನೆಯವರಿಗೆ ಕರೆ ಮಾಡಿ ನಾನು ದೆಹಲಿಯಿಂದ ಎಲ್.ಪಿ.ಯು. ಕಾಲೇಜಿಗೆ ಸರ್ಟಿಫಿಕೇಟ್ ತರಲು ಹೋಗುತ್ತಿರುವುದಾಗಿ ಹೇಳಿ ತಾಯಿಯಿಂದ 2 ಸಾವಿರ ರು. ಹಣ ಬೇಕೆಂದು ಗೂಗಲ್ ಪೇ ಮಾಡಿಸಿದ್ದಳು. ಬಳಿಕ ಕರೆ ಸ್ವೀಕರಿಸದೆ ಮೆಸೇಜ್ ಮಾಡಿ ಕಾಲೇಜಿನಲ್ಲಿರುವುದಾಗಿ ಹೇಳಿ ಕೊನೆಗೆ ಆತ್ಮಹತ್ಯೆ ಸುದ್ದಿ ಮನೆಯವರಿಗೆ ಪೊಲೀಸರಿಂದ ತಲುಪಿದೆ.

Read more Articles on