ನಿಡಂಬೂರು ಯುವಕ ಮಂಡಲಕ್ಕೆ ಧರ್ಮಸ್ಥಳದಿಂದ ಸಹಾಯಧನ

| Published : Sep 26 2025, 01:02 AM IST

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ವತಿಯಿಂದ ನಿಡಂಬೂರು ಯುವಕ ಮಂಡಲಕ್ಕೆ ಮಂಜೂರಾಗಿರುವ ಸಹಾಯಧನವನ್ನು ಪ್ರಗತಿ ಬಂಧು ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಸುಂದರ್ ಜೆ. ಕಲ್ಮಾಡಿ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಉಡುಪಿ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್ ಅಂಬಲಪಾಡಿ ಹಾಗೂ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್ ಸಂಸ್ಥೆಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಈ ಸಂದರ್ಭ ಯುವಕ ಮಂಡಲದ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್ ಹೆಗ್ಡೆ, ನಿಡಂಬೂರು ಯುವಕ ಮಂಡಲ ಅಧ್ಯಕ್ಷ ದೀಪಕ್ ಪುತ್ರನ್, ಕಟ್ಟಡ ನವೀಕರಣ ಸಮಿತಿ ಕಾರ್ಯದರ್ಶಿ ನಿರೂಪ್ ಕುಮಾರ್, ಜೊತೆ ಕೋಶಾಧಿಕಾರಿ ವಿಕ್ರಮ್ ಪುರಾಣಿಕ್, ಹಿರಿಯ ಸದಸ್ಯರಾದ ರಾಘವ ಪುತ್ರನ್, ರವೀಂದ್ರ ಕೆ. ಪೂಜಾರಿ, ಜಯಕರ ಸುವರ್ಣ, ಪ್ರದೀಪ್ ಚಂದ್ರ ಗಾಣಿಗ, ದಿನೇಶ್ ಹೆಗ್ಡೆ, ಸೋಮನಾಥ್ ಬಿ.ಕೆ., ನಿರಂಜನ್ ಕುಮಾರ್ ಹಾಗೂ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರೇಮಾ ಆರ್., ಗಿರೀಶ್ ಕಲ್ಮಾಡಿ ಉಪಸ್ಥಿತರಿದ್ದರು.