ಕನ್ನಡಪ್ರಭ ವಾರ್ತೆ ಮೈಸೂರುಉದ್ಯಮಿಗಳಾಗ ಬಯಸುವವರು ಯಾವುದೇ ಸಮಸ್ಯೆ, ಅಡಚಣೆಗಳಿಗೆ ಹೆದರದೇ, ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್‌ಬಿ)ನ ಎಕ್ಸಿಕ್ಯೂಟಿವ್ ಫೆಲೋಪ್ರೋಗ್ರಾಮ್ ಇನ್ ಮ್ಯಾನೇಜ್ ಮೆಂಟ್ ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ರಾಜೇಂದ್ರ ಶ್ರೀವಾಸ್ತವ್ ಹೇಳಿದರು.ನಗರದ ಚಾಮುಂಡಿ ಬೆಟ್ಟ ರಸ್ತೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ ಸ್ಟಿಟ್ಯೂಟ್‌ಫಾರ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್(ಎಸ್‌ಡಿಎಂಐಎಂಡಿ)ನಲ್ಲಿ ನಡೆದ 31ನೇ ಘಟಿಕೋತ್ಸವದಲ್ಲಿ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಿದ ಬಳಿಕ ಮಾತನಾಡಿದರು.ಅದ್ಭುತ ನಾಯಕನಾಗುವವರು ಕಲಿಕೆಗೆ ಒತ್ತು ನೀಡಿ, ಮಹದಾಶಯವನ್ನು ಇಟ್ಟುಕೊಂಡು ಬೇರೊಬ್ಬರಿಗೂ ಸ್ಫೂರ್ತಿಯಾಗಬೇಕು. ಸಮಾಜದಲ್ಲಿ ನಿಜವಾದ ನಾಯಕನಾದವನು ತನ್ನಂತೆಯೇ ಮತ್ತೊಬ್ಬ ನಾಯಕನನ್ನು ಸೃಷ್ಟಿ ಮಾಡಬೇಕೆ ಹೊರತು ಹಿಂಬಾಲಕರನ್ನಲ್ಲ ಎಂದು ಅವರು ಸಲಹೆ ನೀಡಿದರು.ಉದ್ಯಮದಲ್ಲಿ ಉನ್ನತ ಪ್ರಗತಿ ಸಾಧನೆಗೆ ತಂತ್ರಜ್ಞಾನ ಬಳಿಸಿಕೊಂಡು, ಅತ್ಯಾಧುನಿಕ ತಂತ್ರ ರೂಪಿಸುವ ಮತ್ತು ವ್ಯವಹಾರದ ಹೆಚ್ಚುವರಿ ಲಾಭವನ್ನು ಬಂಡವಾಳವಾಗಿ ಪರಿವರ್ತಿಸುವುದು ಅಗತ್ಯ. ಉದ್ಯಮ ಕ್ಷೇತ್ರದಲ್ಲಿ ನಾಯಕತ್ವ ಬಹುಮುಖ್ಯ. ಸರಿಯಾದ ರೀತಿಯಲ್ಲಿ ನಾಯಕನ ಗುಣ ರೂಢಿಸಿಕೊಳ್ಳುವುದು ಅಗತ್ಯ. ಇದರಿಂದ ಉತ್ತಮ ಭವಿಷ್ಯದ ನಿರ್ಮಾಣ ಸಾಧ್ಯವಾಗಲಿದೆ. ಯಾವುದೇ ಸಮಸ್ಯೆ, ಅಡಚಣೆಗೆ ಹೆದರದೆ, ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ಟಿವಿಎಸ್, ಜೆಎಸ್‌ಡಬ್ಲ್ಯೂ, ತನಿಷ್ಕ್, ಇಂಡಿಗೋ, ಎಸ್‌ಬಿಐ, ಟೆಸ್ಲಾದಂತಹ ಕಂಪೆನಿಗಳು ತಮ್ಮ ದಕ್ಷತೆ ಮತ್ತು ಕಾರ್ಯವೈಖರಿಯಿಂದ ಜಗತ್ತಿನಾದ್ಯಂತ ಮಾರುಕಟ್ಟೆ ವಿಸ್ತರಣೆ, ಮೌಲ್ಯವನ್ನು ಹೆಚ್ಚಿಸಿಕೊಂಡ ಯಶಸ್ವಿ ಉದ್ಯಮಗಳಾಗಿ ತಮ್ಮದೇ ಬ್ರಾಂಡ್ ನಿರ್ಮಿಸಿಕೊಂಡಿದ್ದಾರೆ ಎಂದರು.ಎಸ್.ಡಿಎಂ ಇನ್ ಸ್ಟಿಟ್ಯೂಟ್‌ಫಾರ್ ಮ್ಯಾನೇಜ್ ಮೆಂಟ್ ಡೆವಲಪ್ಮೆಂಟ್‌ನ ಆಡಳಿತ ಮಂಡಳಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿದೆ ಎಂದು ಹೇಳಿದರು.ಎಸ್‌ಡಿಎಂಐಎಂಡಿ ನಿರ್ದೇಶಕ ಲೆಫ್ಟಿನೆಂಟ್ ಕರ್ನಲ್ ಡಾ. ಎಸ್.ಎನ್. ಪ್ರಸಾದ್, ಆಡಳಿತ ಮಂಡಳಿ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ಇದ್ದರು.---ಬಾಕ್ಸ್ 7 ಚಿನ್ನದ ಪದಕ2024- 26ನೇ ಸಾಲಿನ 230 ಪದವೀಧರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಡಿಪ್ಲೋಮಾ ಇನ್ ಮ್ಯಾನೇಜ್ ಮೆಂಟ್ ಪದವಿ ಪ್ರದಾನ ಮಾಡಲಾಯಿತು. ಝಾವೇರಿಯಾ ತಬಸ್ಸಮ್ (ಮಾರ್ಕೆಟಿಂಗ್ ಮತ್ತು ಆಪರೇಷನ್ಸ್) 2 ಚಿನ್ನದ ಪದಕ, ಅಮಿತ್ ಎಂ. ಕಾಮತ್ (ಸಿಸ್ಟಮ್ಸ್) , ಅನನ್ಯಾ ಪ್ರಕಾಶ್ (ಫೈನಾನ್ಸ್), ಸ್ಮತಿ ಎಸ್. ಆನಂದ್ (ಹ್ಯೂಮನ್ ರಿಸೋರ್ಸ್ ಮ್ಯಾನೇಜ್ ಮೆಂಟ್) ತಲಾ 1 ಚಿನ್ನದ ಪದಕ ಪಡೆದುಕೊಂಡರು.
ಉದ್ಯಮಿಗಳು ಸಮರ್ಥವಾಗಿ ಸಮಸ್ಯೆ ಎದುರಿಸಬೇಕು
ಅದ್ಭುತ ನಾಯಕನಾಗುವವರು ಕಲಿಕೆಗೆ ಒತ್ತು ನೀಡಿ, ಮಹದಾಶಯವನ್ನು ಇಟ್ಟುಕೊಂಡು ಬೇರೊಬ್ಬರಿಗೂ ಸ್ಫೂರ್ತಿಯಾಗಬೇಕು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.