ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೂಲ್ಕಿ ವಲಯದ ಪಡುಪಣಂಬೂರು ಕಾರ್ಯಕ್ಷೇತ್ರದ ತೋಕೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ರು. 2 ಲಕ್ಷದ ಅನುದಾನ ನೀಡಲಾಗಿದೆ.
ಕನಡಪ್ರಭ ವಾರ್ತೆ ಮೂಲ್ಕಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೂಲ್ಕಿ ವಲಯದ ಪಡುಪಣಂಬೂರು ಕಾರ್ಯಕ್ಷೇತ್ರದ ತೋಕೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ರು. 2 ಲಕ್ಷದ ಅನುದಾನ ನೀಡಲಾಗಿದೆ. ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರರು ಮತ್ತು ಯೋಜನೆಯ ಯೋಜಾನಾಧಿಕಾರಿ ಗಿರೀಶ್ ಎಂ ಕುಮಾರ್ ಹಾಲಿನ ಡೈರಿ ಪದಾಧಿಕಾರಿಯವರಿಗೆ ಹಸ್ತಾಂತರಿಸಿದರು.ಈ ಸಂದರ್ಭ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಅರಸು ಚಾರಿಟೇಬಲ್ ಟ್ರಸ್ಟ್‌ನ ಗೌತಮ್ ಜೈನ್, ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ ಕುಸುಮ ಚಂದ್ರಶೇಖರ್, ಯೋಜನೆಯ ವಲಯಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಜನ ಜಾಗೃತಿ ಸಮಿತಿ ಅಧ್ಯಕ್ಷ ವಿನೋದ್ ಎಸ್. ಸಾಲ್ಯಾನ್, ಪುರುಷೋತ್ತಮ ಕೋಟ್ಯಾನ್, ಯೋಜನೆಯ ಮುಲ್ಕಿ ವಲಯದ ಮೇಲ್ವಿಚಾರಕಿಯಾದ ನಿಶ್ಮಿತಾ ಶೆಟ್ಟಿ, ಸೇವಪ್ರತಿನಿಧಿ ಸವಿತಾ ಶರತ್ ಬೆಳ್ಳಯಾರು, ಹಾಲಿನ ಡೈರಿಯ ಅಧ್ಯಕ್ಷ ಲತಾ ಡಿ ಭಟ್, ಉಪಾಧ್ಯಕ್ಷ ಗೀತಾಂಜಲಿ, ನಿರ್ದೇಶಕರಾದ ಇಂದಿರಾ, ಹೇಮಾವತಿ, ಕಾರ್ಯನಿರ್ವಾಹಕಿ ಪದ್ಮಪ್ರಿಯ, ಅನುಪಮಾ ರಾವ್, ಯಶೋದಾ ರಾವ್, ವಿನೋದ ಭಟ್, ಸ್ಥಳೀಯ ಪಂಚಾಯಿತಿ ಸದಸ್ಯೆ ಪ್ರಮೀಳಾ ಶೆಟ್ಟಿ, ಚಿತ್ರಾ, ಸುಷ್ಮಾ, ಧರ್ಮಾನಂದ ಶೆಟ್ಟಿಗಾರ್, ಕರುಣಾಕರ ಶೆಟ್ಟಿಗಾರ್, ನವಜೀವನ ಸಮಿತಿ ಅಧ್ಯಕ್ಷ ಹೇಮಚಂದ್ರ ಶೆಟ್ಟಗಾರ್ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಹಾಗೂ ಯೋಜನೆಯ ಸದಸ್ಯರು ಇದ್ದರು.