ಧರ್ಮಸ್ಥಳ: ಮೂರು ನೂತನ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಚಾಲನೆ

| Published : Jul 11 2025, 12:31 AM IST

ಧರ್ಮಸ್ಥಳ: ಮೂರು ನೂತನ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳದಿಂದ ಮೂರು ಹೊಸ ಸರ್ಕಾರಿ ಬಸ್ ಸಂಚಾರದ ವ್ಯವಸ್ಥೆಗೆ ಶಾಸಕ ಹರೀಶ್ ಪೂಂಜ ಮಂಗಳವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲತೆಗಾಗಿ ಧರ್ಮಸ್ಥಳದಿಂದ ಮೂರು ಹೊಸ ಸರ್ಕಾರಿ ಬಸ್ ಸಂಚಾರದ ವ್ಯವಸ್ಥೆಗೆ ಶಾಸಕ ಹರೀಶ್ ಪೂಂಜ ಮಂಗಳವಾರ ಚಾಲನೆ ನೀಡಿದರು.

ಒಂದು ಬಸ್ ಧರ್ಮಸ್ಥಳದಿಂದ ಪಟ್ರಮೆಗೆ ಕೊಕ್ಕಡ-ಸೌತಡ್ಕ ಮಾರ್ಗವಾಗಿ ಸಂಚರಿಸಲಿದೆ. ಇನ್ನೊಂದು ಬಸ್‌ ಧರ್ಮಸ್ಥಳದಿಂದ ಪುತ್ತೂರಿಗೆ ಉಜಿರೆ-ಬೆಳಾಲು-ಬಂದಾರು-ಕುಪ್ಪೆಟ್ಟಿ-ಉಪ್ಪಿನಂಗಡಿ ಮಾರ್ಗವಾಗಿ ಸಂಚರಿಸುತ್ತದೆ. ಮತ್ತೊಂದು ಧರ್ಮಸ್ಥಳದಿಂದ ನೆಲ್ಯಾಡಿ-ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೊಕ್ಕಡ-ನೆಲ್ಯಾಡಿ-ಬಲ್ಯ-ಕಡಬ ಮಾರ್ಗವಾಗಿ ಸಂಚರಿಸಲಿದೆ.ಈ ಸಂದರ್ಭ ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಮಲ, ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಧರ್ಮಸ್ಥಳ ಸಿ.ಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್, ಪ್ರಮುಖರಾದ ರತ್ಮವರ್ಮ ಜೈನ್, ತಾ.ಪಂ. ಮಾಜಿ ಸದಸ್ಯ ಕೃಷ್ಣಯ್ಯ ಆಚಾರ್ಯ, ಬಿಜೆಪಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಹ ಸಂಚಾಲಕ ಸಂದೀಪ್ ರೈ, ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ. ಬಂದಾರು, ಧರ್ಮಸ್ಥಳ ಶಕ್ತಿ ಕೇಂದ್ರ ಪ್ರಮುಖ ಹರ್ಷಿತ್ ಜೈನ್, ವಿಕ್ರಮ್ ಗೌಡ, ಧರ್ಮಸ್ಥಳ ಪಂಚಾಯಿತಿ ಸದಸ್ಯರಾದ ದಿನೇಶ್ ರಾವ್, ರವಿ ಕುಮಾರ್, ಬಂದಾರು ಗ್ರಾಮಸ್ಥರಾದ ಶ್ರೀಧರ ಗೌಡ , ಡೊಂಬಯ್ಯ ಗೌಡ, ಪ್ರಶಾಂತ್ ಗೌಡ,ಮೋಹನ್ ಬಂಗೇರ, ಪಟ್ರಮೆ ಪಂಚಾಯಿತಿ ಶಕ್ತಿ ಕೇಂದ್ರ ಪ್ರಮುಖರಾದ ಡಾಗಯ್ಯ ಗೌಡ, ಪಟ್ರಮೆ ಪಂಚಾಯಿತಿ ಸದಸ್ಯರಾದ ರಾಜೇಶ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಕಮಲಾಕ್ಷ, ಶರತ್, ಶ್ರೀನಿವಾಸ ಗೌಡ ಪಟ್ರಮೆ, ಹರೀಶ್ ಗೌಡ ಶಿಬರಾಜೆ, ಧರ್ಮಸ್ಥಳ ಡಿಪ್ಪೋ ಮ್ಯಾನೇಜರ್, ಸಿಬ್ಬಂದಿ ಇದ್ದರು.