ಸಾರಾಂಶ
ಮಹಾತ್ಮಾ ಗಾಂಧಿ ಜಯಂತಿ, ಗಾಂಧಿ ಸ್ಮೃತಿ ಸಂಭ್ರಮಾಚರಣೆಯ ಪ್ರಯುಕ್ತ ಪಾನಮುಕ್ತರಿಗೆ ಅಭಿನಂದನೆ, ದುಶ್ಚಟದ ವಿರುದ್ಧ ಜನಜಾಗೃತಿ ಜಾಥಾ, ಸಮಾವೇಶವನ್ನು ಗುರುವಾರ ಇಲ್ಲಿನ ಗಡಿಯಾರ ಕಂಬದ ಬಳಿ ಇರುವ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವರ ಸಹಯೋಗದಲ್ಲಿ ಮಹಾತ್ಮಾ ಗಾಂಧಿ ಜಯಂತಿ, ಗಾಂಧಿ ಸ್ಮೃತಿ ಸಂಭ್ರಮಾಚರಣೆಯ ಪ್ರಯುಕ್ತ ಪಾನಮುಕ್ತರಿಗೆ ಅಭಿನಂದನೆ, ದುಶ್ಚಟದ ವಿರುದ್ಧ ಜನಜಾಗೃತಿ ಜಾಥಾ, ಸಮಾವೇಶವನ್ನು ಗುರುವಾರ ಇಲ್ಲಿನ ಗಡಿಯಾರ ಕಂಬದ ಬಳಿ ಇರುವ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆದರ್ಶಗಳು, ತತ್ವಗಳನ್ನು ಪ್ರತಿಯೊಬ್ಬರೂ ಸಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ನಿಂದ ವ್ಯಸನಮುಕ್ತ ಸಮಾಜ ಮಾಡುವ ನಿಟ್ಟಿನಲ್ಲಿ ಪಾನಮುಕ್ತರಿಗೆ ಅಭಿನಂದನೆ, ದುಶ್ಚಟದ ವಿರುದ್ಧ ಜನಜಾಗೃತಿ ಜಾಥಾ, ಸೇರಿದಂತೆ ಅನೇಕ ಜನ ಜಾಗೃತಿ, ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮದ ಮೊದಲು ಇಲ್ಲಿನ ಜಯದೇವ ವೃತ್ತದಿಂದ ದುಶ್ಚಟದ ವಿರುದ್ಧ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ನಟರಾಜ ಬಾದಾಮಿ, ಟ್ರಸ್ಟಿನ ಜಿಲ್ಲಾ ನಿರ್ದೇಶಕ ಲಕ್ಷ್ಮಣ್, ಜನಜಾಗೃತಿ ವೇದಿಕೆ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ, ವೇದಿಕೆ ಉಪಾಧ್ಯಕ್ಷೆ ಚೇತನ ಶಿವಕುಮಾರ, ಕೋಶಾಧಿಕಾರಿ ಅಣಬೇರು ಮಂಜಣ್ಣ, ಸದಸ್ಯರಾದ ಕುಸುಮ ಶ್ರೇಷ್ಠಿ, ಎನ್.ಎಚ್.ಹಾಲೇಶ, ಸಿದ್ದಯ್ಯ , ಕೆ.ವಿ.ಜಯಮ್ಮ ಮಳಲ್ಕೆರೆ, ಎಚ್.ಹರೀಶ್ ಇತರರು ಭಾಗವಹಿಸಿದ್ದರು.