ಗಬಸಾವಳಗಿಯನ್ನು ಸಿಂದಗಿ ತಾಲೂಕಿಗೆ ಸೇರಿಸಲು ಆಗ್ರಹಿಸಿ ಧರಣಿ

| Published : Mar 11 2024, 01:18 AM IST

ಗಬಸಾವಳಗಿಯನ್ನು ಸಿಂದಗಿ ತಾಲೂಕಿಗೆ ಸೇರಿಸಲು ಆಗ್ರಹಿಸಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂದಗಿ: ಸಿಂದಗಿ ತಾಲೂಕನ್ನು ವಿಭಜನೆ ಮಾಡಿದಾಗ ಸಿಂದಗಿಯಿಂದ ಕೇವಲ 12 ಕಿ.ಮೀ ದೂರವಿರುವ ಗಬಸಾವಳಗಿ ಗ್ರಾಮವನ್ನು ಸುಮಾರು 40 ಕಿ.ಮೀ ದೂರವಿರುವ ಆಲಮೇಲ ತಾಲೂಕಿಗೆ ಸೇರಿಸಿದ್ದು ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ಪತ್ರಕರ್ತ ಮಲ್ಲಿಕಾರ್ಜುನ್ ಹಿರೇಮಠ ಹೇಳಿದರು.

ಸಿಂದಗಿ: ಸಿಂದಗಿ ತಾಲೂಕನ್ನು ವಿಭಜನೆ ಮಾಡಿದಾಗ ಸಿಂದಗಿಯಿಂದ ಕೇವಲ 12 ಕಿ.ಮೀ ದೂರವಿರುವ ಗಬಸಾವಳಗಿ ಗ್ರಾಮವನ್ನು ಸುಮಾರು 40 ಕಿ.ಮೀ ದೂರವಿರುವ ಆಲಮೇಲ ತಾಲೂಕಿಗೆ ಸೇರಿಸಿದ್ದು ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ಪತ್ರಕರ್ತ ಮಲ್ಲಿಕಾರ್ಜುನ್ ಹಿರೇಮಠ ಹೇಳಿದರು.ಗಬಸಾವಳಗಿ ಗ್ರಾಮದಲ್ಲಿ ಹೋರಾಟ ವೇದಿಕೆಯ ಸದಸ್ಯರು ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಬಸಾವಳಗಿ ಹಾಗೂ ಬಿಸನಾಳ ಎರಡೂ ಗ್ರಾಮಸ್ಥರು ಪ್ರತಿದಿನ ತಮ್ಮ ವ್ಯವಹಾರಗಳಿಗಾಗಿ ಹಾಗೂ ಸರ್ಕಾರಿ ಕೆಲಸಗಳಿಗಾಗಿ ಸಿಂದಗಿಯನ್ನೇ ಅವಲಂಬಿಸಿದ್ದಾರೆ. ಒಂದು ವೇಳೆ ಅಲಮೇಲ ತಾಲೂಕಿನಲ್ಲಿಯೇ ಮುಂದುವರಿಸಿದ್ದೇ ಆದರೆ, ಗ್ರಾಮಸ್ಥರು ದಿನನಿತ್ಯ ಪರದಾಡುವಂತಾಗುತ್ತದೆ. ಪ್ರಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಮರು ಸೇರ್ಪಡೆ ಮಾಡಬೇಕೆಂದು ತಾಲೂಕು ಆಡಳಿತ ಹಾಗೂ ಶಾಸಕರಲ್ಲಿ ಮನವಿ ಮಾಡಿದರು.

ಈ ಬಗ್ಗೆ ಕಳೇದ 2019ರ ನವೆಂಬರ್ ನಲ್ಲಿಯೇ ವಿಜಯಪುರದ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲಾಗಿತ್ತು. ಅಧಿಕಾರಿಗಳಿಂದಾಗಲೀ, ಸರ್ಕಾರಗಳಿಂದಾಗಲೀ ಯಾವುದೇ ಸ್ಪಂದನೆ ಸಿಗದ ಕಾರಣ ಗಬಸಾವಳಗಿ, ಬಿಸನಾಳ ಗ್ರಾಮಗಳನ್ನು ಆಲಮೇಲಕ್ಕೆ ಸೇರಿಸಿದ್ದು ಅವೈಜ್ಞಾನಿಕವಾಗಿದೆ. ಗಬಸಾವಳಗಿ, ಬಿಸನಾಳ ಗ್ರಾಮಗಳ ಸುತ್ತಲಿನ ಗ್ರಾಮಗಳಾದ ಹಂಚಿನಾಳ, ಗುತ್ತರಗಿ, ಭಂಟನೂರ ಗ್ರಾಮಗಳನ್ನು 2022ರ ಫೆಬ್ರವರಿ 16ರಂದು ಮರಳಿ ಸಿಂದಗಿ ತಾಲೂಕಿಗೆ ಮರು ಸೇರ್ಪಡೆ ಮಾಡಲಾಗಿದೆ. ಅದೇ ರೀತಿ ಆಲಮೆಲ ತಾಲೂಕಿಗೆ ಸೇರಿಸಿದ ಗಾಬಸಾವಳಗಿ ಹಾಗೂ ಬಿಸಾನಾಳ ಗ್ರಾಮಗಳನ್ನು ಮರಳಿ ಸಿಂದಗಿ ತಾಲೂಕಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ಅಧ್ಯಕ್ಷ ಶಿವಲಿಂಗಪ್ಪಗೌಡ. ನಾ ಬಿರಾದಾರ, ಅಶೋಕ.ಮ.ಬಿರಾದಾರ, ಸುರೇಶಬಾಬು ಕೋಟಿಖಾನಿ ಮಾತನಾಡಿದರು. ಪ್ರತಿಭಟನೆಯಲ್ಲಿ ಭೀಮನಗೌಡ.ಎ.ಬಿರಾದಾರ, ನಾನಾಗೌಡ.ಯ.ಬಿರಾದಾರ, ಅಯ್ಯಪ್ಪಗೌಡ.ಪ.ಬಿರಾದಾರ, ಪ್ರಭುಗೌಡ ಬಿರಾದಾರ, ಮಲ್ಲನಗೌಡ.ಪ.ಬಿರಾದಾರ, ದೇವು.ಚ ಕೊಳಕುರ, ಅಣ್ಣಾರಾಯ.ರಾ.ಪಪೀರಾಪುರ, ಮಲ್ಲಿಕಾರ್ಜುನ.ಬಿ.ಬಿರಾದಾರ, ಪರಶುರಾಮ.ಸೊ.ಅನಶೆಟ್ಟಿ, ಬಸನಗೌಡ.ನಾ.ಬಿರಾದಾರ, ಮಲ್ಲನಗೌಡ, ಬಂಗಾರೆಪ್ಪಗೌಡ.ಬಾ.ಬಿರಾದಾರ, ಶಿವಶರಣ ಹೇಳವರ ಸೇರಿದಂತೆ ಇತರರು ಇದ್ದರು.