ಪಂಚ ಗ್ಯಾರಂಟಿಗಳು ನೈಜ ಜಾತ್ಯಾತೀತ ಕಾರ್ಯಕ್ರಮ: ದಿನೇಶ್ ಗುಂಡೂರಾವ್

| Published : Mar 11 2024, 01:18 AM IST

ಪಂಚ ಗ್ಯಾರಂಟಿಗಳು ನೈಜ ಜಾತ್ಯಾತೀತ ಕಾರ್ಯಕ್ರಮ: ದಿನೇಶ್ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತು ವರ್ಷಗಳಲ್ಲಿ ಮೋದಿ ಅದೆಷ್ಟು ಶ್ರೀಮಂತರ ಸಾಲ ಮನ್ನಾ ಮಾಡಿಲ್ಲ? ನಾವು ಬಡವರಿಗೆ ಕೊಡ್ತೇವೆ ಅಂದರೆ ನಿಮಗ್ಯಾಕೆ ಹೊಟ್ಟೆ ಉರಿ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಸುಳ್ಯ

ಪಂಚ ಗ್ಯಾರಂಟಿಗಳು ನಿಜವಾದ ಜಾತ್ಯತೀತ ಯೋಜನೆಯಾಗಿದ್ದು, ಜನರ ಬದುಕನ್ನು ಬದಲಾಯಿಸಿದ ಯೋಜನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುಳ್ಯದಲ್ಲಿ ಭಾನುವಾರ ನಡೆದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಗೆ ಮೊದಲು ಓಟಿಗೋಸ್ಕರ ಬುರುಡೆ ಬಿಡ್ತಾರೆ ಅಂತ ಬಿಜೆಪಿಯವರು ಹೇಳ್ತಾ ಇದ್ರು. ಅಧಿಕಾರಕ್ಕೆ ಬಂದ ಬಳಿಕ ಯಾವಾಗ ಜಾರಿ ಮಾಡ್ತೀರಿ ಅಂತ ಪ್ರಶ್ನೆ ಮಾಡುತ್ತಿದ್ದರು. ಆದರೆ ನುಡಿದಂತೆ ನಡೆದ ನಮ್ಮ ಸರ್ಕಾರದ ದೇಶದ ಇತಿಹಾಸದಲ್ಲೇ , ಜನರಿಗೆ ನೇರವಾಗಿ ಮುಟ್ಟುವ ದೊಡ್ಡ ಕಾರ್ಯಕ್ರಮ ಅನುಷ್ಠಾನಕ್ಕೆ ತಂದ ಸಾಧನೆ ಕಾಂಗ್ರೆಸ್ ಸರ್ಕಾರದ್ದು ಎಂದರು. ಹತ್ತು ವರ್ಷಗಳಲ್ಲಿ ಮೋದಿ ಅದೆಷ್ಟು ಶ್ರೀಮಂತರ ಸಾಲ ಮನ್ನಾ ಮಾಡಿಲ್ಲ? ನಾವು ಬಡವರಿಗೆ ಕೊಡ್ತೇವೆ ಅಂದರೆ ನಿಮಗ್ಯಾಕೆ ಹೊಟ್ಟೆ ಉರಿ ಎಂದು ಪ್ರಶ್ನಿಸಿದ ದಿನೇಶ್‌ ಗುಂಡೂರಾವ್‌, ಯಾಕೆ ಬಿಜೆಪಿ ಶಾಸಕರು ಕಾರ್ಯಕ್ರಮಕ್ಕೆ ಬರೋದಿಲ್ಲ. ಇಲ್ಲಿ ಬಂದು ಅವರಿಗೆ ಟೀಕೆ ಮಾಡ್ಲಿಕ್ಕೆ ಆಗೋದಿಲ್ಲ. ಬಂದರೆ ಹೊಗಬೇಕಾಗ್ತದೆ ಆಗ ಅವರಿಗೇ ಮುಜುಗರ ಆಗ್ತದೆ. ಅದಕ್ಕಾಗಿಯೇ ಬರುವುದಿಲ್ಲ ಎಂದರು. ಸರ್ಕಾರಕ್ಕೆ ಜನ ಬೆಂಬಲವಾಗಿ ನಿಲ್ಲಬೇಕು: ಭಾಷಣಗಳಿಂದ ಬದುಕು ಬದಲಾಗುವುದಿಲ್ಲ. ಅದಕ್ಕೆ ಸಮರ್ಪಕವಾದ ಯೋಜನೆಗಳು ಬೇಕು. ಅದನ್ನು ನಮ್ಮ ಸರ್ಕಾರ ಮಾಡಿ ಜನರ ಬೆಂಬಲಕ್ಕೆ ನಿಂತಿದೆ. ಜನರನ್ನು ಬೆಂಬಲಿಸುವ ಸರ್ಕಾರವನ್ನೂ ಜನರೂ ಬೆಂಬಲಿಸಬೇಕು ಎಂದು ರಾಜ್ಯ ಗೇರು ಕೃಷಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಯಾವುದೇ ಸರ್ಕಾರ ಬಜೆಟ್ ಮಂಡಿಸುವಾಗ ಒಂದು ವರ್ಷದ ಅವಧಿಯ ಬಜೆಟ್ ಮಂಡಿಸಿ ಅದಕ್ಕಾಗಿ ಹಣ ತೆಗೆದಿರಿಸುತ್ತದೆ. ನಮ್ಮ ಸರ್ಕಾರವೂ ಅದನ್ನೇ ಮಾಡಿದೆ. ಹಾಗಾಗಿ ಲೋಕಸಭಾ ಚುನಾವಣೆ ಕಳೆದ ಮೇಲೆ ಯೋಜನೆ ನಿಲ್ಲುತ್ತದೆ ಎಂಬ ಅಪಪ್ರಚಾರ ನಂಬಬೇಡಿ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ., ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೋಹಪಾತ್ರ, ಸರ್ಕಾರಿ ಅಧ್ಯಕ್ಷ ತೀರ್ಥರಾಮ ಎಚ್‌.ಬಿ. ಇದ್ದರು. ತಹಸೀಲ್ದಾರ್‌ ಜಿ. ಮಂಜುನಾಥ್, ಜಿ.ಪಂ. ಉಪಕಾರ್ಯದರ್ಶಿ ಜಗದೀಶ ನಾಯಕ್ , ನಗರ ಪಂಚಾಯಿತಿ ಮುಖ್ಯ ಅಧಿಕಾರಿ ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮೊದಲಾದವರಿದ್ದರು. ಅಚ್ಚುತ ಅಟ್ಲೂರು, ಚಂದ್ರಮತಿ ನಿರೂಪಿಸಿದರು.