ಸಾರಾಂಶ
ರಾಜ್ಯ ಸರ್ಕಾರಕ್ಕೆ ಸದ್ಯಕ್ಕೇನೂ ತೊಂದರೆಯಿಲ್ಲ ಎಂದು ತಮ್ಮ ಭವಿಷ್ಯವಾಣಿಯಂದ ಹೆಸರುವಾಸಿಯಾಗಿರುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಸೋಮವಾರ ಇಲ್ಲಿ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿ: ರಾಜ್ಯ ಸರ್ಕಾರಕ್ಕೆ ಸದ್ಯಕ್ಕೇನೂ ತೊಂದರೆಯಿಲ್ಲ ಎಂದು ತಮ್ಮ ಭವಿಷ್ಯವಾಣಿಯಂದ ಹೆಸರುವಾಸಿಯಾಗಿರುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಸೋಮವಾರ ಇಲ್ಲಿ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಹಗ್ಗ ಜಗ್ಗಾಟ ಜೋರಾಗಿ ನಡೆದಿರುವ ಬೆನ್ನಲ್ಲಿಯೇ ಕೋಡಿಮಠದ ಶ್ರೀಗಳು ರಾಜ್ಯ ಸರ್ಕಾರಕ್ಕೆ ತೊಂದರೆಯಿಲ್ಲ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಸಿದ್ಧಾರೂಢ ಮಠಕ್ಕೆ ಆಗಮಿಸಿದ್ದ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿ, ಬರುವ ದಿನಗಳು ಶುಭ ಮತ್ತು ಅಶುಭಗಳಿಂದ ಕೂಡಿರುತ್ತವೆ.
ಮುಂದಿನ ದಿನಗಳಲ್ಲಿ ಭೂಮಿಯ ಧಗೆ ಹೆಚ್ಚಾಗಲಿದೆ ಎಂದೂ ಹೇಳಿದರು. ಸರ್ಕಾರದ ಪ್ರತಿನಿಧಿಗಳ ನಡುವಿನ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸ್ವಾಮೀಜಿಯವರು, ಸರ್ಕಾರಕ್ಕೇನು ಸದ್ಯಕ್ಕೆ ತೊಂದರೆಯಿಲ್ಲ ಎಂದಷ್ಟೇ ಹೇಳಿದರು. ಇದಕ್ಕೂ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿನ ಕಾರ್ಣೀಕೋತ್ಸವಕ್ಕೂ ಸಂಬಂಧವಿಲ್ಲ. ಇನ್ನುಳಿದಂತೆ ಯುಗಾದಿಗೆ ಕಾಲಜ್ಞಾನ ಸಂಗತಿಗಳನ್ನು ಹೇಳುತ್ತೇನೆ, ಮಧ್ಯದಲ್ಲಿ ಅವನ್ನು ಹೇಳಲು ಬರುವುದಿಲ್ಲ ಎಂದು ಹೇಳುತ್ತ ನಿರ್ಗಮಿಸಿದರು.