ಮಧುಮೇಹ ಉಚಿತ ತಪಾಸಣೆ ಶಿಬಿರ

| Published : Dec 29 2024, 01:15 AM IST

ಸಾರಾಂಶ

ಹಾಸನ ನಗರದ ಸಾಲಗಾಮೆ ರಸ್ತೆ ಬಳಿ ಇರುವ ರೆಡ್‌ಕ್ರಾಸ್ ಭವನದ ಕಟ್ಟಡದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಧುಮೇಹ ಆರೋಗ್ಯ ಸಮಸ್ಯೆಗಳಿಗೆ ವೈದ್ಯ ತಜ್ಞರಿಂದ ಸೂಕ್ತ ಚಿಕಿತ್ಸೆಯ ಸಲಹೆ ಹಾಗೂ ಸಮಾಲೋಚನೆಯು ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ರಕ್ತಪರೀಕ್ಷೆ, ನರ ಹಾಗೂ ಕಣ್ಣಿನ ಪರೀಕ್ಷೆ ಮತ್ತು ಎಚ್.ಬಿ.ಎ.1.ಸಿ, 3 ತಿಂಗಳ ಸರಾಸರಿ ರಕ್ತದ ಸಕ್ಕರೆ ಮಟ್ಟದ ಪರೀಕ್ಷೆಯನ್ನು ಸಾರ್ವಜನಿಕರಿಗೆ ಮಾಡಲಾಯಿತು.

ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಇರುವ ರೆಡ್‌ಕ್ರಾಸ್ ಭವನದ ಕಟ್ಟಡದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಧುಮೇಹ ಆರೋಗ್ಯ ಸಮಸ್ಯೆಗಳಿಗೆ ವೈದ್ಯ ತಜ್ಞರಿಂದ ಸೂಕ್ತ ಚಿಕಿತ್ಸೆಯ ಸಲಹೆ ಹಾಗೂ ಸಮಾಲೋಚನೆಯು ಯಶಸ್ವಿಯಾಗಿ ನಡೆಯಿತು.

ಕಾರ‍್ಯಕ್ರಮದ ಉದ್ಘಾಟನೆಯನ್ನು ಧರ್ಮಸ್ಥಳ ಆಯುರ್ವೇದ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಡಾ. ಪ್ರಸನ್ನ ಎನ್ ರಾವ್ ರವರು ನೆರವೇರಿಸಿ ಮಾತನಾಡಿ, ಕಾರ‍್ಯಕ್ರಮದ ಉಪಯೋಗವನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಕಾರ‍್ಯಕ್ರಮದಲ್ಲಿ ಕಾರ್ಯನಿರ್ವಾಹಕರು ಆಕಾಶವಾಣಿಯ ಡಾ. ವಿಜಯ್ ಅಂಗಡಿ ಹಾಗೂ ಹಾಸನದ ಪ್ರಸಿದ್ಧ ಸ್ತ್ರೀರೋಗ ತಜ್ಞರಾದ ಡಾ.ಸಾವಿತ್ರಿ ಮಾತನಾಡಿ, ಈ ರೀತಿಯ ಉತ್ತಮ ಕಾರ್ಯಕ್ರಮಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಮಾಡುವ ಸೇವೆಯನ್ನು ಹೀಗೆಯೇ ರೆಡ್‌ಕ್ರಾಸ್ ಸಂಸ್ಥೆ ಮುಂದುವರಿಸಬೇಕು ಎಂದರು.ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಹಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ರವಿಕುಮಾರ್ ಮಾತನಾಡಿ, ಹಿಮ್ಸ್ ಕಾಲೇಜಿನಿಂದ ರೆಡ್ ಕ್ರಾಸ್ ವೈದ್ಯಕೀಯ ಸೇವಾಕಾರ್ಯಗಳಿಗೆ ಯಾವುದೇ ರೀತಿಯ ಸಹಕಾರವನ್ನು ಬಯಸಿದರೆ ನಾವು ಮಾಡಲು ಸಿದ್ಧರಿದ್ದೇವೆ ಎಂಬ ಭರವಸೆ ನೀಡಿದರು.

ಮಧುಮೇಹ ನಿರ್ವಹಣೆಯ ಕುರಿತು ಆದಿಚುಂಚನಗಿರಿ ಉಪಕುಲಪತಿಗಳು ಹಾಗೂ ಕರ್ನಾಟಕದಲ್ಲಿಯೇ ಅತ್ಯಂತ ಅನುಭವಿ ಮಧುಮೇಹ ತಜ್ಞರು ಹಾಗೂ ಬಿ.ಸಿ. ರಾಯ್ ಪ್ರಶಸ್ತಿ ವಿಜೇತರಾದ ಡಾ. ಶೇಖರ್, ವೈದ್ಯರು ಹಾಗೂ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ವೈ.ಪಿ. ಗಾನವಿ ಅತ್ಯಂತ ಉಪಯುಕ್ತ ಮಾಹಿತಿ, ಸಲಹೆ ಹಾಗೂ ಮಧುಮೇಹ ರೋಗದ ನಿರ್ವಹಣೆಯ ಬಗ್ಗೆ ಉಪನ್ಯಾಸ ನೀಡಿದರು. ಶಿಬಿರದಲ್ಲಿ ರಕ್ತಪರೀಕ್ಷೆ, ನರ ಹಾಗೂ ಕಣ್ಣಿನ ಪರೀಕ್ಷೆ ಮತ್ತು ಎಚ್.ಬಿ.ಎ.1.ಸಿ, 3 ತಿಂಗಳ ಸರಾಸರಿ ರಕ್ತದ ಸಕ್ಕರೆ ಮಟ್ಟದ ಪರೀಕ್ಷೆಯನ್ನು ಸಾರ್ವಜನಿಕರಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಚೇರ‍್ಮನ್ ಹೆಮ್ಮಿಗೆ ಮೋಹನ್, ಡಾ. ವೈ.ಎಸ್. ವೀರಭದ್ರಪ್ಪ, ಡಾ.ಕಾವ್ಯ, ನಿಶ್ಚಿತಾಕುಮಾರಿ, ಬಿ.ಆರ್. ಉದಯ್ ಕುಮಾರ್, ಶಬ್ಬೀರ್ ಅಹಮದ್, ಜಯೇಂದ್ರಕುಮಾರ್, ಎಸ್.ಎಸ್. ಪಾಷಾ, ಅಮ್‌ಜಾದ್ ಖಾನ್, ಕೆ.ಟಿ.ಜಯಶ್ರೀ, ಗಿರೀಶ್, ಭೀಮರಾಜ್, ನಿರ್ಮಲ, ಸುಬ್ಬಸ್ವಾಮಿ, ಅವಿನಾಶ್ ಹಾಜರಿದ್ದರು.