ಚಿಕ್ಕ ವಯಸ್ಸಿನಲ್ಲಿಯೇ ಕಾಯಿಲೆ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ: ವಿಹಾನ ಆಸ್ಪತ್ರೆ ಡಾ.ಅರುಣ್

| Published : Aug 29 2024, 12:53 AM IST

ಚಿಕ್ಕ ವಯಸ್ಸಿನಲ್ಲಿಯೇ ಕಾಯಿಲೆ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ: ವಿಹಾನ ಆಸ್ಪತ್ರೆ ಡಾ.ಅರುಣ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಮುರ್ನಾಲ್ಕು ಕಡೆ ಮಾತ್ರ 18 ವರ್ಷದ ಮಕ್ಕಳಲ್ಲಿ ಕಂಡು ಬರುವ ಎಲ್ಲ ರೋಗಗಳಿಗೆ ಚಿಕಿತ್ಸೆ ನೀಡುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಲಭ್ಯವಿವೆ

ಕನ್ನಡಪ್ರಭ ವಾರ್ತೆ ಸಿಂಧನೂರು

100ರಲ್ಲಿ 10 ಮಕ್ಕಳಲ್ಲಿ ಹೃದಯ ಸಂಬಂಧಿತ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಕಾಯಿಲೆ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಿ ಉಳಿಯಲಿದೆ ಎಂದು ವಿಹಾನ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಡಾ.ಅರುಣ್ ಕೆ.ಬಬಲೇಶ್ವರ ಎಂದು ತಿಳಿಸಿದರು.

ನಗರದ ಆಶ್ರಯ ಆಸ್ಪತ್ರೆಯಲ್ಲಿ ವಿಹಾನ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹುಬ್ಬಳ್ಳಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಹೃದಯರೋಗ ಉಚಿತ ತಪಾಸಣಾ ಶಿಬಿರ ಉದ್ದೇಶಿಸಿ ಮಾತನಾಡಿ, ಯನ್, ಇಕೋ, ಬಲೂನು ಡಯಟೇಷನ್ ಚಿಕಿತ್ಸೆ ನೀಡಲಾಗುವುದು. ಸಿಂಪಲ್ ಕಂಡಿಷನ್ ಇದ್ದರೆ ಸ್ಟಂಟ್ ಹಾಕಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಸರ್ಕಾರದ ಆರೋಗ್ಯ ಯೋಜನೆಗಳಾದ ಬಿಪಿಎಲ್, ಆರ್‌ಬಿಎಸ್ಯು, ಆಯುಷ್ಮಾನ್ ಭಾರತ ಸೌಲಭ್ಯದಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲಾಗುವುದು. ದೇಶದ ಮುರ್ನಾಲ್ಕು ಕಡೆ ಮಾತ್ರ 18 ವರ್ಷದ ಮಕ್ಕಳಲ್ಲಿ ಕಂಡು ಬರುವ ಎಲ್ಲ ರೋಗಗಳಿಗೆ ಚಿಕಿತ್ಸೆ ನೀಡುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಲಭ್ಯವಿವೆ. ಸರ್ಕಾರ, ಸಂಘ-ಸಂಸ್ಥೆಗಳು, ಶ್ರೀಮಂತರು ಚಿಕಿತ್ಸೆಗೆ ಸಹಾಯ ಸಹಕಾರ ನೀಡಿದರೆ ಬಡ ಮಕ್ಕಳಿಗೆ ಚಿಕಿತ್ಸೆ ಒದಗಿಸಿ ಜೀವ ಉಳಿಸಲು ಸಾಧ್ಯವಾಗಲಿದೆ ಎಂದರು.

ಶಿಬಿರವನ್ನು ಮಾಜಿ ಸಂಸದ ಕೆ.ವಿರೂಪಾಕ್ಷಿ ಉದ್ಘಾಟಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಚ್.ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಭೀಮಣ್ಣ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಚೇತನ ಆಸ್ಪತ್ರೆ ಡಾ.ನಾಗರಾಜ ಮಾಲಿ ಪಾಟೀಲ್ ಮಾತನಾಡಿದರು. ಸಿಂಧನೂರು ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಫಣಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ಇದ್ದರು. ಪತ್ರಕರ್ತ ವೀರೇಶ ಗಡ್ಡಿಮಾಳ ಪ್ರಾರ್ಥಿಸಿದರು. ಪ್ರಹ್ಲಾದಗುಡಿ ಸ್ವಾಗತಿಸಿದರು. ಚಂದ್ರಶೇಖರ ಯರದಿಹಾಳ ನಿರೂಪಿಸಿದರು. ಶರಣಪ್ಪ ಗೋನಾಳ ವಂದಿಸಿದರು.