ಸಾರಾಂಶ
ರಾಮನಗರ: ನಗರದಲ್ಲಿ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಡೈಮಂಡ್ ಗಳಿಂದ ತಯಾರಿಸಿರುವ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದೆ.
ರಾಮನಗರ: ನಗರದಲ್ಲಿ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಡೈಮಂಡ್ ಗಳಿಂದ ತಯಾರಿಸಿರುವ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದೆ.
ಗಣೇಶೋತ್ಸವ ಸಮಿತಿ ಐಜೂರ ಮಲ್ಲೇಶ್ವರ ಬಡಾವಣೆ ನೇತಾಜಿ ಪಾಪ್ಯುಲರ್ ಸ್ಕೂಲ್ ಬಳಿ ಪ್ರತಿ ವರ್ಷ ವಿಭಿನ್ನವಾಗಿ ಗಣಪತಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಈ ಬಾರಿ ಡೈಮಂಡ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಾರೆ.ಈ ಗಣಪತಿ ಮೂರ್ತಿ ಹುಬ್ಬಳ್ಳಿಯಲ್ಲಿ ಕಲಾವಿದ ಮಹೇಶ್ ಮುರಗೋಡು ಅವರು ಅಮೆರಿಕನ್
ಡೈಮಂಡ್‌ಗಳನ್ನು ಬಳಸಿ ಸಿದ್ಧಪಡಿಸಿದ್ದಾರೆ. ಈ ಮೂರ್ತಿ ಮೂರು ಅಡಿ ಎತ್ತರ ಇದ್ದು, 4 ಲಕ್ಷ ರುಪಾಯಿ ವೌಲ್ಯದ ಅಮೆರಿಕನ್ ಡೈಮಂಡ್‌ಗಳನ್ನು ಬಳಸಿ ನಿರ್ಮಿಸಲಾಗಿದೆ. ಇದರ ವೆಚ್ಚ ಬರೋಬ್ಬರಿ 5.5 ಲಕ್ಷ.ಸುಮಾರು 50 ಕೆ.ಜಿ ತೂಗುವ ಈ ಮೂರ್ತಿ ಒಂದು ತಿಂಗಳ ಪರಿಶ್ರಮದಿಂದ ಪ್ರತಿಷ್ಟಾಪನೆ ಸಿದ್ದಗೊಂಡಿದೆ. ಗಣಪತಿ ಮೂರ್ತಿ ಅಲಂಕಾರಕ್ಕೆ 9 ಬಗೆಯ ಹರಳು ಹಾಗೂ ಡೈಮಂಡ್‌ಗಳನ್ನು ಬಳಸಲಾಗಿದೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಮಂಡಳಿ ಅಧ್ಯಕ್ಷ ಆರ್.ಹರ್ಷವರ್ದನ್ , ಹುಬ್ಬಳಿಯಿಂದ ಈ ಮೂರ್ತಿಯನ್ನು ತರಿಸಿದ್ದೇವೆ. ಶಾಸಕರಾದ ಇಕ್ಬಾಲ್ ಹುಸೇನ್ ಹಾಗೂ ನಿಕಟಪೂರ್ವ ಸಂಸದರಾದ ಡಿ.ಕೆ.ಸುರೇಶ್ ಅವರ ಮಾರ್ಗದರ್ಶನದಲ್ಲಿ ವಿಭಿನ್ನವಾಗಿ ಗಣೇಶೋತ್ಸವವನ್ನು ಆಚರಿಸುತ್ತಿದ್ದೇವೆ. ಗಣೇಶ ಮೂರ್ತಿಯನ್ನು ತಿಪಟೂರ ನೋಣಿವಿನಕೆರೆ ಶ್ರೀ ಕಾಡಸಿದ್ದೇಶ್ವರ ಸ್ವಾಮಿ ಆನೆಯ ಮೇಲೆ ಮೆರವಣಿಗೆ ಮೂಲಕ ತರಲು ನಿರ್ಧರಿಸಲಾಗಿದೆ. ಲಕ್ಷಾಂತರ ರುಪಾಯಿ ಬೆಲೆಬಾಳುವ ಡೈಮಂಡ್ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜನೆ ಮಾಡುತ್ತೇವೆ ಎಂದು ತಿಳಿಸಿದರು.26ಕೆಆರ್ ಎಂಎನ್ 2.ಜೆಪಿಜಿರಾಮನಗರದ ನಗರದಲ್ಲಿ ನಾಡಪ್ರಭು ಕೇಂಪೇಗೌಡ ಮಿತ್ರ ಮಂಡಳಿ ಅವರು ಪ್ರತಿಷ್ಠಾಪಿಸುತ್ತಿರುವ ಡೈಮಂಡ್ ಗಣಪತಿ ಮೂರ್ತಿ.